More

    ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸರ ಬಲೆಗೆ

    ರಾಣೆಬೆನ್ನೂರ: ನಗರದ ಸಂಗಮ್ ವೃತ್ತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಕಾಲೇಜ್ ವಿದ್ಯಾರ್ಥಿಗಳನ್ನು ಗುರುವಾರ ಬಂಧಿಸಿರುವ ಪೊಲೀಸರು ಅವರಿಂದ 11,800 ರೂ. ಮೌಲ್ಯದ 118 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
    ನಗರದ ದೊಡ್ಡಪೇಟೆ ನಿವಾಸಿ ಸಂತೋಷ ಶಂಕ್ರಯ್ಯ ನೂರಂದೇವರಮಠ (21), ತಳವಾರ ಓಣಿಯ ಕಾರ್ತಿಕ ಕೃಷ್ಣಮೂರ್ತಿ ಹುಟ್ಟಿ (19) ಹಾಗೂ ಭುವನೇಶ್ವರ ಶ್ರೀನಿವಾಸ ಹುಟ್ಟಿ (19) ಬಂಧಿತ ವಿದ್ಯಾರ್ಥಿಗಳು.
    ಇವರಿಂದ 11,800 ರೂ. ಮೌಲ್ಯದ 118 ಗ್ರಾಂ ಗಾಂಜಾ, 500 ರೂ. ಮೌಲ್ಯದ ತೂಕದ ಯಂತ್ರ, 16 ಸಣ್ಣ ಖಾಲಿ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
    ನಗರದ ಕಾಲೇಜ್‌ವೊಂದರಲ್ಲಿ ಅಧ್ಯಯನ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಸಂಗಮ್ ವೃತ್ತದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಾವೇರಿ ಸಿಇಎನ್ ಕ್ರೈಂ ಠಾಣೆ ಪಿಎಸ್‌ಐ ಎಂ.ಎಫ್. ದುರಗಪ್ಪನವರ ಹಾಗೂ ತಂಡದವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts