More

    ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣ ಮುಗೀತು …

    ಬೆಂಗಳೂರು: ಸ್ಯಾಂಡಲ್​ವುಡ್​ನ ಡ್ರಗ್ಸ್​ ನಂಟಿನ ಕುರಿತು ದಿಗಂತ್​ ಮತ್ತು ಐಂದ್ರಿತಾ ರೇ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅವರ ಮುಂದಿನ ಚಿತ್ರಗಳ ಕಥೆಯೇನು ಎಂಬ ಪ್ರಶ್ನೆ ತಲೆದೋರಿತ್ತು. ಡ್ರಗ್ಸ್​ ಮಾಫಿಯಾಗೆ ಸಂಬಂಧಿಸಿದಂತೆ ದಿಗಂತ್​ ಅವರ ಹೆಸರು ತುಳುಕು ಹಾಕಿಕೊಂಡಿರುವುದರಿಂದ ಅವರ ಚಿತ್ರಗಳ ಚಿತ್ರೀಕರಣಕ್ಕೆ ಸಮಸ್ಯೆ ಎದುರಾಗಬಹುದು ಎಂದು ಭಯ ಅವರ ಚಿತ್ರಗಳ ನಿರ್ಮಾಪಕರಿಗಿತ್ತು.

    ಆದರೆ, ಈ ಸಮಸ್ಯೆಯಿಂದ ದಿಗಂತ್​ ಯಶಸ್ವಿಯಾಗಿ ಹೊರಬಂದಿದ್ದಷ್ಟೇ ಅಲ್ಲ, ಇದೀಗ ‘ಮಾರಿ ಗೋಲ್ಡ್​’ ಎಂಬ ಚಿತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

    ಇದನ್ನೂ ಓದಿ: ಡಿ. 21ಕ್ಕೆ ಐರಾವನ್ ಚಿತ್ರದ ಟೀಸರ್; ಜೆಕೆ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್​

    ಲಾಕ್​ಡೌನ್​ಗಿಂತ ಮುನ್ನ ದಿಗಂತ್​, ‘ಗಾಳಿಪಟ 2’ ಮತ್ತು ‘ಮಾರಿ ಗೋಲ್ಡ್​’ ಚಿತ್ರಗಳಲ್ಲಿ ನಟಿಸುತ್ತಿದ್ದರು. ಎರಡೂ ಚಿತ್ರಗಳ ಸ್ವಲ್ಪ ಭಾಗದ ಚಿತ್ರೀಕರಣವಾಗಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಹಾಗಾಗಿ ಎರಡೂ ಚಿತ್ರಗಳ ಚಿತ್ರೀಕರಣ ನಿಂತಿತ್ತು. ಲಾಕ್​ಡೌನ್​ ತೆರವಾಗಿ ಇನ್ನೇನು ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲೇ ಡ್ರಗ್ಸ್​ ಜಾಲದಲ್ಲಿ ದಿಗಂತ್​ ಹೆಸರು ಕೇಳಿಬಂದಿತ್ತು.

    ಆದರೆ, ಈ ವಿಷಯವಾಗಿ ಯಾವುದೇ ಭಯ ಬೇಡ ಎಂದಿದ್ದ ದಿಗಂತ್​, ಸೆಪ್ಟೆಂಬರ್​ 18ರಿಂದ ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈಗ ಆ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದ್ದು, ಚಿತ್ರಕ್ಕಾಗಿ ಕುಂಬಳಕಾಯಿ ಒಡೆಯಲಾಗಿದೆ. ರಾಘವೇಂದ್ರ ನಾಯಕ್​ ನಿರ್ದೇಶಿಸಿರುವ ‘ಮಾರಿ ಗೋಲ್ಡ್​’ ಚಿತ್ರವು ಕ್ರೈಮ್​ ಥ್ರಿಲ್ಲರ್​ ಆಗಿದ್ದು, ಸಾಕಷ್ಟು ಹಾಸ್ಯಮಯ ಅಂಶಗಳು ಸಹ ಇವೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಣ ಮುಗಿಸಿದ ‘ಬನಾರಸ್​’ ತಂಡ

    ‘ಮಾರಿ ಗೋಲ್ಡ್​’ ಚಿತ್ರದಲ್ಲಿ ದಿಗಂತ್​ಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸುತ್ತಿದ್ದು ಮಿಕ್ಕಂತೆ ಸಂಪತ್​, ಯಶ್​ ಶೆಟ್ಟಿ, ‘ಸಿದ್ಲಿಂಗು’ ಶ್ರೀಧರ್​, ‘ಕಾಕ್ರೋಚ್​’ ಸುಧಿ ಮುಂತಾದವರು ನಟಿಸುತ್ತಿದ್ದಾರೆ. ರಘುವರ್ಧನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀರ್​ ಸಮರ್ಥ್​ ಸಂಗೀತ ಸಂಯೋಜಿಸಿದ್ದಾರೆ.

    ಯಾರೂ ಮಾಡದ್ದನ್ನ ಮಾಡಿದ ದುನಿಯಾ ವಿಜಯ್ ಅಭಿಮಾನಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts