More

    ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಹಲವು ಅಭಿವೃದ್ಧಿ ಯೋಜನೆ ಘೋಷಣೆ

    ಬೆಂಗಳೂರು: ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅಮೃತ ಮಹೋತ್ಸವ ಅಗಂಗವಾಗಿ, ಗ್ರಾಮೀಣ ಅಭಿವೃದ್ಧಿ, ರೈತರು, ಯುವಜನ ಹಾಗೂ ನಗರ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಲವು ಅಮೃತ ಯೋಜನೆ ಘೋಷಣೆ ಮಾಡಿದ್ದಾರೆ.

    ಅಮೃತ ಗ್ರಾಮಪಂಚಾಯಿತಿ ಯೋಜನೆ: ರಾಜ್ಯದ 750 ಗ್ರಾಮ ಪಂಚಾಯಿತಿಗಳ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಅಭಿವೃದ್ಧಿ ಮತ್ತು ವಸತಿ ರಹಿತರನ್ನು ಗುರುತಿಸಿ ವಸತಿ ಕಲ್ಪಿಸಲಾಗುವುದು.

    ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆ: ರಾಜ್ಯದಲ್ಲಿ ರೈತರು, ನೇಕಾರರು, ಮೀನುಗಾರ ಉತ್ಪಾದನೆಗಳಿಗೆ ಅನುಕೂಲವಾಗುವಂತೆ 750 ಸಂಸ್ಥೆ ಆರಂಭಿಸಿ ತಲಾ 30 ಲಕ್ಷ ರೂ. ಅನುದಾನ ನೀಡಲಾಗುವುದು.

    ಅಮೃತ ಸ್ವ ಸಹಾಯ ಕಿರು ಉದ್ದಿಮೆ: ಆಯ್ದ 7500 ಸ್ವ ಸಹಾಯ ಗುಂಪುಗಳಿಗೆ ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರೂ. ಬೀಜ ಧನ ನೆರವು ನೀಡಲಾಗುವುದು.

    ಅಮೃತ ನಗರ ಅಭಿವೃದ್ಧಿ 3ನೇ ಹಂತದ ಯೋಜನೆ ಜಾರಿ. ಅಮೃತ ನಿರ್ಮಲ ನಗರ ಯೋಜನೆಗೆ 75 ನಗರ ಸಭೆಗಳಿಗೆ ತಲಾ 1 ಕೋಟಿ ರೂ. ಅನುದಾನ ನೀಡಲಾಗುವುದು.

    ಅಮೃತ ಶಾಲಾ ಸೌಲಭ್ಯ ಯೋಜನೆ: 750 ಶಾಲೆಗಳ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಶೌಚಗೃಹ ಅಭಿವೃದ್ಧಿ ಮಾಡಲು 75 ಕೋಟಿ ರೂ. ಹಂಚಿಕೆ.
    ಅಮೃತ ಕೌಶಲ್ಯ ತರಬೇತಿ ಯೋಜನೆ: ರಾಜ್ಯದ 75 ಸಾವಿರ ಯುವಜನರಿಗೆ 2 ವರ್ಷದಲ್ಲಿ ಕೌಶಲ ತರಬೇತಿ ನೀಡಲು 112 ಕೋಟಿ ರೂ. ಅನುದಾನ ಕೊಡಲಾಗುವುದು.

    ಅಮೃತ ಕ್ರೀಡಾ ಯೋಜನೆ: ಈ ಯೋಜನೆ ಮೂಲಕ ಮುಂದಿನ ಪ್ಯಾರಿಸ್ ಒಲಂಪಿಕ್ ಗೆ ರಾಜ್ಯದ 75 ಕ್ರೀಡಾಪಟುಗಳನ್ನು ದತ್ತು ಪಡೆದು ಸೂಕ್ತ ತರಬೇತಿ ನೀಡಿ ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಿದ್ಧಗೊಳಿಸಲಾಗುವುದು. ರಾಜಧಾನಿ ಬೆಂಗಳೂರಿನಲ್ಲಿ 75 ಕೊಳೆಗೇರಿ ಅಭಿವೃದ್ಧಿ, 75 ಕೆರೆಗಳು ಮತ್ತು ಉದ್ಯಾನಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.

    ಬೆಂಗಳೂರು ಕಾರಿಡಾರ್, ಮುಖ್ಯರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಸ್ಮಾರ್ಟ್ ಸ್ಟಾರ್ಟ್ ಅಪ್ ಯೋಜನೆಗಳಿಗೆ ಉತ್ತೇಜನ ನೀಡಲಾಗುವುದು. ರಾಜ್ಯದ ಎಲ್ಲ ಪ್ರಾದೇಶಿಕ ಅಸಮತೋಲ ಸರಿಪಡಿಸಲು ಆದ್ಯತೆ ಕೊಡಲಾಗುತ್ತದೆ. ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ. ಸ್ವಾತಂತ್ರೋತ್ಸವ ಶತಮಾನೋತ್ಸವ ವೇಳೆ ನಮ್ಮ ಕರ್ನಾಟಕ ರಾಜ್ಯ ವಿಶ್ವದಲ್ಲಿ ಮುಂಚೂಣಿಯಲ್ಲಿ ಇರುವಂತೆ ಯೋಜನೆ ರೂಪಿಸಲಾಗುವುದು. ಈ ಕುರಿತ ಬದಲಾವಣೆ ಕೆಲವೇ ತಿಂಗಳಲ್ಲಿ ಜನರು ಕಾಣಬಹುದು.

    ಇವತ್ತಿನಿಂದ ನವ ಕರ್ನಾಟಕ ನಿರ್ಮಾಣ ಪ್ರಾರಂಭ: ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಯಾವ ದೇಶಕ್ಕೂ ನಾವು ಕಡಿಮೆಯಿಲ್ಲ ಎನ್ನುವಂತೆ ಬೆಳೆದಿರಬೇಕು: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts