More

    ಸಂಗೀತದಿಂದ ಮನಸ್ಸಿಗೆ ನೆಮ್ಮದಿ

    ಮಾನ್ವಿ: ಒತ್ತಡದ ಬದುಕಿನಲ್ಲಿ ವಚನ ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಮಾಧಾನ ಸಿಗುತ್ತದೆ ಎಂದು ಕಾಕತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಸತ್ಯನಾರಾಯಣ ಹೇಳೀದರು.

    ಪಟ್ಟಣದ ಕಾಕತೀಯ ವಿದ್ಯಾ ಸಂಸ್ಥೆಯ ಅವರಣದಲ್ಲಿ ಬಸವಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಖ್ಯಾತ ಗಾಯಕಿ ವಡವಾಟಿ ಶಾರದಾ ಭರತ್ ವಚನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರು ನುಡಿದಂತೆ ನಡೆದರು. ಅಂತಹ ಶರಣರ ವಚನಗಳು ಕೇಳುವುದರಿಂದ ಮನಸ್ಸು ನಿರಾಳವಾಗುತ್ತದೆ ಎಂದರು.

    ಅಂತಾರಾಷ್ಟ್ರೀಯ ಕ್ಲಾರಿನೆಟ್ ವಾದಕ ನರಸಿಂಹಲು ವಡವಾಟಿ ಮಾತನಾಡಿ, ಈ ಭಾಗದಲ್ಲಿ ಹಿರಿಯ ಸಾಹಿತಿ ಶಾಂತರಸ, ಚನ್ನಬಸವಪ್ಪ ಬೆಟ್ಟದೂರು ಮತ್ತು ವೀರಣ್ಣಗೌಡ ನೀರಮಾನ್ವಿ ಬಸವತತ್ವ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವಕರು ಶರಣರ ವಚನಗಳನ್ನು ಓದಬೇಕು, ಸಂಗೀತದ ಮೂಲೊಕ ವಚನಗಳನ್ನು ಅಲಿಸಿದಾಗ ಬದುಕಿನಲ್ಲಿ ಬದಲಾವಣೆ ಬರುತ್ತದೆ ಎಂದು ತಿಳಿಸಿದರು.

    ಹಿರಿಯ ಸಾಹಿತಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಬಸವಕೇಂದ್ರದ ಅಧ್ಯಕ್ಷ ನಾಗರಾಜ ಬಳಿಗಾರ, ಕಾಕತೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ರಾಮಕೃಷ್ಣ, ಆಕಶವಾಣಿ, ದೂರದರ್ಶನ ಕಲಾವಿದೆ ವಡವಾಟಿ ಶಾರದಾ ಭರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts