More

    56 ಕೋಟಿ ರೂ. ಬಿಡುಗಡೆ ಮಾಡಿದ್ರೂ ದೆಹಲಿ ವಿವಿ ಸಿಬ್ಬಂದಿಗೆ ಸಂಬಳ ಪಾವತಿ ಏಕಾಗುತ್ತಿಲ್ಲ? ಸಿಸೋಡಿಯಾ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

    ನವದೆಹಲಿ: ನೌಕರರಿಗೆ ಸಂಬಳ ಕೋಡೋಕೆ ದುಡ್ಡಿಲ್ಲ; ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಎರಡು ತಿಂಗಳ ಹಿಂದಷ್ಟೇ ದೆಹಲಿ ಡಿಸಿಎಂ ಹಾಗೂ ಶಿಕ್ಷಣ ಸಚಿವರೂ ಆಗಿರುವ ಮನೀಷ್​ ಸಿಸೋಡಿಯಾ ಮನವಿ ಮಾಡಿದ್ದರು. ಈಗ ದೆಹಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ, ರಾಜ್ಯ ಸರ್ಕಾರದ ಅಧೀನದ ದೆಹಲಿ ವಿಶ್ವ ವಿದ್ಯಾಲಯ ಸಿಬ್ಬಂದಿಗೆ ಸಂಬಳ ಕೊಡಲಾಗದ ಸ್ಥಿತಿಯಲ್ಲಿದೆ.

    ಸಿಬ್ಬಂದಿ ಸಂಬಳಕ್ಕೆ ಅನುದಾನ ಕೊರತೆಯಿದೆ. ಹೀಗಾಗಿ ವೇತನ ಪಾವತಿ ವಿಳಂಬವಾಗುತ್ತಿದೆ ಎನ್ನುವುದು ದೆಹಲಿ ವಿವಿ ಸಮಜಾಯಿಷಿ. ಆದರೆ, ಇದು ಮನೀಷ್​ ಸಿಸೋಡಿಯಾ ಕೆಂಗಣ್ಣಿಗೆ ಕಾರಣವಾಗಿದೆ.

    ಇದನ್ನೂ ಓದಿ; ಕರೊನಾ ನಿಗ್ರಹಕ್ಕೆ ಅಡ್ಡಿಯಾದ ಜಲಕ್ಷಾಮ; ಇವರಿಗೆ ಲಸಿಕೆಗೂ ಮುನ್ನ ಬೇಕಿದೆ ನೀರು…! 

    ದೆಹಲಿ ವಿವಿಗೆ ಕಳೆದ ಐದು ವರ್ಷಗಳಲ್ಲಿ ಶೇ.70 ರಷ್ಟು ಅನುದಾನ ಹೆಚ್ಚಿಸಲಾಗಿದೆ. ಹೀಗಿದ್ದರೂ ಅನುದಾನ ಸಾಕಾಗುತ್ತಿಲ್ಲ ಎಂದರೆ ಕಾರಣ ಸ್ಪಷ್ಟ. ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2020-21ನೇ ಸಾಲಿಗೆ ದೆಹಲಿ ವಿಶ್ವವಿದ್ಯಾಲಯಕ್ಕೆ 243 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಪೈಕಿ 56.25 ಕೋಟಿ ರೂ.ಗಳನ್ನು ಜುಲೈ ಅಂತ್ಯದವರೆಗೆ ಈಗಾಗಲೇ ಬಿಡಗಡೆ ಮಾಡಲಾಗಿದೆ. ಹೀಗಿದ್ದರೂ ಏಪ್ರಿಲ್​, ಮೇ, ಜೂನ್​ ತಿಂಗಳ ವೇತನವನ್ನು ಕಾಲೇಜುಗಳಿಗೆ ಏಕೆ ಬಿಡುಗಡೆ ಮಾಡಿಲ್ಲವೆಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ; ತರಕಾರಿ, ದಿನಸಿ ವ್ಯಾಪಾರಿಗಳು, ಅಂಗಡಿ ಕೆಲಸಗಾರರನ್ನು ಕರೊನಾ ಪರೀಕ್ಷೆಗೊಳಪಡಿಸಿ; ಕೇಂದ್ರದಿಂದಲೇ ಬಂತು ಸೂಚನೆ 

    ಎರಡು ವರ್ಷಗಳ ಹಿಂದೆ ನಿಗದಿ ಮಾಡಲಾಗಿದ್ದ 216 ಕೋಟಿ ರೂ.ಗಳಲ್ಲಿಯೇ ದೆಹಲಿ ವಿವಿ ತನ್ನೆಲ್ಲ ಖರ್ಚುಗಳನ್ನು ನಿಭಾಯಿಸಿತ್ತು. ಕಳೆದ ವರ್ಷ 242 ಕೋಟಿ ನೀಡಲಾಗಿದೆ. 27 ಕೋಟಿ ರೂ. ಹೆಚ್ಚಿಸಿ ಅನುದಾನ ನೀಡಲಾಗಿದ್ದರೂ ಇವರಿಗೆ ಹಣಕಾಸಿನ ಕೊರತೆ ಕಾಡುತ್ತಿರುವುದಾದರೂ ಯಾವುದಕ್ಕೆ ಎಂದು ಸಿಸೋಡಿಯಾ ಕೇಳಿದ್ದಾರೆ.

    ದೆಹಲಿ ವಿವಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ದೂರುಗಳು ಕೇಳಿ ಬಂದಿವೆ. ನಿರ್ವಹಣಾ ಮಂಡಳಿ ರಚನೆ ಸರ್ಕಾರದ ಪ್ರತಿನಿಧಿಗಳ ನೇಮಕಾತಿಯನ್ನು ತಿರಸ್ಕರಿಸುತ್ತ ಬಂದಿವೆ. ಭ್ರಷ್ಟಾಚಾರ ಆರೋಪದ ಬಗ್ಗೆ ವಿವಿ ಕುಲಪತಿಗಳಿಗೆ ಪತ್ರ ಬರೆಯಲಾಗಿದ್ದು, ಇನ್ನಷ್ಟೇ ಉತ್ತರ ದೊರೆಯಬೇಕಿದೆ ಎಂದು ತಿಳಿಸಿದ್ದಾರೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts