More

    ಕರೊನಾ ನಿಗ್ರಹಕ್ಕೆ ಅಡ್ಡಿಯಾದ ಜಲಕ್ಷಾಮ; ಇವರಿಗೆ ಲಸಿಕೆಗೂ ಮುನ್ನ ಬೇಕಿದೆ ನೀರು…!

    ನವದೆಹಲಿ: ವ್ಯಾಪಕವಾಗಿ ಹಬ್ಬುತ್ತಿರುವ ಕರೊನಾ ಸೋಂಕನ್ನು ತಡೆಯಲು ಆಗಾಗ ಸ್ವಚ್ಛವಾಗಿ ಕೈ ತೊಳೆಯುವುದು ಪರಿಣಾಮಕಾರಿ ವಿಧಾನ. ಆದರೆ, ನೀರೇ ಇಲ್ಲದಿದ್ದಾಗ ಇದನ್ನು ತಡೆಯೋದಾದರೂ ಹೇಗೆ?

    ಜನರು ಶುದ್ಧ ನೀರು ಹಾಗೂ ನೈರ್ಮಲ್ಯಯುಕ್ತ ವಾತಾವರಣವನ್ನೇ ಹೊಂದಿಲ್ಲದಿರುವುದು ನಿಜಕ್ಕೂ ಶೋಚನಿಯ ಎಂದು ವಿಶ್ವ ಸಂಸ್ಥೆ ಜಲ ಪೀಠದ ಗಿಲ್ಬರ್ಟ್​ ಎಫ್​. ಹೌಂಗ್ಬೋ ಹೇಳುತ್ತಾರೆ. ನೀರಿನ ಮೂಲಸೌಕರ್ಯಕ್ಕಾಗಿ ಅನುದಾನವನ್ನೇ ಮೀಸಲಿಡದ ಕಾರಣ ನೂರಾರು ಕೋಟಿ ಜನರು ಸಂಕಷ್ಟದಲ್ಲಿದ್ದಾರೆ. ಇದರ ಪರಿಣಾಮವನ್ನೀಗ ನಾವು ಕಾಣುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ಐವರಲ್ಲಿ ಇಬ್ಬರಿಗೆ ಮನೆ ಬಳಕೆಯ ನೀರಿನ ಕೊರತೆ ಕಾಡುತ್ತಿರುವುದು ಕರೊನಾ ಸೋಂಕು ತಡೆಗಟ್ಟುವ ಪ್ರಯತ್ನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ತರಕಾರಿ, ದಿನಸಿ ವ್ಯಾಪಾರಿಗಳು, ಅಂಗಡಿ ಕೆಲಸಗಾರರನ್ನು ಕರೊನಾ ಪರೀಕ್ಷೆಗೊಳಪಡಿಸಿ; ಕೇಂದ್ರದಿಂದಲೇ ಬಂತು ಸೂಚನೆ 

    300 ಕೋಟಿಗೂ ಅಧಿಕ ಜನರಿಗೆ ಮನೆಯಲ್ಲಿ ಹರಿಯುವ ನೀರು ಹಾಗೂ ಸೋಪ್​ನ ಕೊರತೆಯಿದೆ. ಇನ್ನು, 400 ಕೋಟಿಗೂ ಅಧಿಕ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಅವಧಿಗಾದರೂ ಜಲಕ್ಷಾಮವನ್ನು ಎದುರಿಸುತ್ತಾರೆ ಎಂದು ವಿಶ್ವ ಸಂಸ್ಥೆ ಅಂಕಿ- ಅಂಶಗಳು ತಿಳಿಸುತ್ತವೆ. ಶುದ್ಧ ನೀರಿನ ಪೂರೈಕೆ ಹಾಗೂ ನೈರ್ಮಲ್ಯಕ್ಕಾಗಿ ಹಣವನ್ನೇ ಒದಗಿಸದಿರುವುದು ಎಲ್ಲರನ್ನೂ ಸಂಕಷ್ಟಕ್ಕೆ ತಳ್ಳಿದೆ. ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಜನರನ್ನು ಸೋಂಕು ಹಾಗೂ ಮರು ಸೋಂಕಿಗೆ ದೂಡುತ್ತಿವೆ.

    ವಿಶ್ವ ಸಂಸ್ಥೆ ಪ್ರಕಾರ 2030ರ ವೇಳೆಗೆ ನೀರಿನ ಲಭ್ಯತೆಗಾಗಿ ಜಗತ್ತು 6,700 ಕೋಟಿ ಡಾಲರ್​ ಮೊತ್ತ ವೆಚ್ಚ ಮಾಡಬೇಕಾಗುತ್ತದೆ. ಕೇವಲ ಸ್ವಚ್ಛ ವಾತಾವರಣ ತುರ್ತು ಅಗತ್ಯವಲ್ಲ, ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಆಹಾರ ಕ್ಷಾಮ ಉಂಟಾಗದಿರಲು ಸೂಕ್ತ ನೀರಾವರಿ ಯೋಜನೆಯನ್ನು ರೂಪಿಸಬೇಕಿದೆ ಎಂದು ಹೌಂಗ್ಬೋ ಅಭಿಪ್ರಾಯಪಡುತ್ತಾರೆ.

    ಸದ್ಯದ ತುರ್ತು ಅಗತ್ಯಗಳಿಗೆ ಹಲವು ಕಂಪನಿಗಳು ಕೈ ಜೋಡಿಸಿವೆ. ಕೈತೊಳೆಯುವ ಸಾಧನಗಳನ್ನು ರೂಪಿಸುತ್ತಿವೆ. ಒಂದು ಬಾಟಲ್​ನಲ್ಲಿ ಸಣ್ಣ ಸ್ವಲ್ಪವೇ ನೀರು ಬಳಿಸಿ ಕೈತೊಳೆಯಬಹುದಾದ 5 ಲಕ್ಷ ಉಪಕರಣಗಳನ್ನು ಭಾರತದಲ್ಲಿ ವಿತರಣೆ ಮಾಡಲಿವೆ. ಇದು 25 ಲಕ್ಷ ಜನರಿಗೆ ಅನುಕೂಲ ಕಲ್ಪಿಸಲಿದೆ. ಆದರೆ, ಮನೆಗಳಿಗೆ ಕೊಳವೆಗಳ ಮೂಲಕ ನೀರು ಪೂರೈಕೆಯಂತಹ ದೀರ್ಘಕಾಲೀನ ಯೋಜನೆಗಳಿಗೆ ಆದ್ಯತೆ ನೀಡಬೇಕೆಂಬುದು ತಜ್ಞರ ಅಭಿಮತ.

    ಇದನ್ನೂ ಓದಿ; ವಾರದಲ್ಲಿ ಅಮೆರಿಕ, ಬ್ರೆಜಿಲ್​ ಮೀರಿಸಿದ ಭಾರತ; ಹೊಸ ಕರೊನಾ ಕೇಸ್​ಗಳಿಗೆ ಬೀಳುತ್ತಿಲ್ಲ ಕಡಿವಾಣ 

    ನೀರಿನ ಅಸಮರ್ಪಕ ನಿರ್ವಹಣೆಯಿಂದ ಹೆಚ್ಚಾಗಿ ಬಡಜನರೇ ತೊಂದರೆಗೆ ಒಳಗಾಗುತ್ತಾರೆ. ಏಕೆಂದರೆ ಇವರು ಮಳೆ ನೀರನ್ನೇ ಆಧರಿಸಿದ ಕೃಷಿ ಹಾಗೂ ಆಹಾರವನ್ನು ಅವಲಂಬಿಸಿ ಹೆಚ್ಚು ತೊಂದರೆಗೆ ಸಿಲುಕಿದ್ದಾರೆ. ಜತೆಗೆ, ಕಲುಷಿತ ನೀರು ಹಾಗೂ ವಾತಾವರಣ ಇವರನ್ನು ಕಾಯಿಲೆಗೆ ಈಡು ಮಾಡುತ್ತಿದೆ ಎಂದು ವಿಶ್ವಬ್ಯಾಂಕ್​ ಹೇಳುತ್ತದೆ.

    ಜತೆಗೆ, ಜಾಗತಿಕ ತಾಪಮಾನ ಒಂದು ಡಿಗ್ರಿಯಷ್ಟು ಹೆಚ್ಚಾದರೂ ಜಗತ್ತಿನ ಶೇ.7 ರಷ್ಟು ಜನರು ಜಲ ಸಂಪನ್ಮೂಲಗಳಲ್ಲಿ ಶೇ.20 ಕೊರತೆ ಎದುರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಕೈ ತೊಳೆಯದಿರುವುದು ಏಕಾಏಕಿ ಸಾವು- ಬದುಕಿನ ಪ್ರಶ್ನೆಯಾಗಿ ಪರಿಣಮಿಸಿಬಿಟ್ಟಿದೆ. ಎಲ್ಲೆಡೆ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts