More

    ಬರೀ ಆರು ಗಂಟೆಗಳ ಮಟ್ಟಿಗೆ ಪತ್ನಿಯನ್ನು ಭೇಟಿ ಮಾಡಲು ಮಾಜಿ ಉಪ ಮುಖ್ಯಮಂತ್ರಿಗೆ ಅವಕಾಶ!

    ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಆರು ಗಂಟೆಗಳ ಮಟ್ಟಿಗೆ ಅವರ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್​ಪಾಲ್ ಅವರು ಶುಕ್ರವಾರ ಈ ಅನುಮತಿ ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಸೀಮಾ ಸಿಸೋಡಿಯಾ ಅವರನ್ನು ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಭೇಟಿ ಮಾಡಲು ಅನುಮತಿ ನೀಡಲಾಗಿದೆ.

    ಆಟೋ ಇಮ್ಯೂನ್ ಡಿಸಾರ್ಡರ್ ಮತ್ತು ಮಲ್ಟಿಪಲ್ ಸ್ಕ್ಲೀರೋಸಿಸ್‌ನಿಂದ ಬಳಲುತ್ತಿರುವ ಪತ್ನಿಯನ್ನು ಐದು ದಿನಗಳ ಅವಧಿಗೆ ಭೇಟಿಯಾಗಲು ಅನುಮತಿ ಕೋರಿ ಮನೀಶ್ ಸಿಸೋಡಿಯಾ ಗುರುವಾರ ಅರ್ಜಿ ಸಲ್ಲಿಸಿದ್ದರಿಂದ ಇಂದು ಈ ಅವಕಾಶ ನೀಡಲಾಗಿದೆ. ಈ ವರ್ಷದ ಜೂನ್‌ನಲ್ಲಿ ಅವರಿಗೆ ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಿದ್ದು, ಆ ಬಳಿಕ ಮತ್ತೆ ಭೇಟಿ ಆಗಿರಲಿಲ್ಲ.

    ಇದನ್ನೂ ಓದಿ: ಉದ್ಯೋಗ ಬದಲಿಸುವ ಮುನ್ನ ಇರಲಿ ಎಚ್ಚರ: ಕೆಲಸಕ್ಕೆ ಸೇರುವ ಮುನ್ನವೇ 24 ಲಕ್ಷ ರೂ. ಕಳ್ಕೊಂಡ ಇಂಜಿನಿಯರ್!

    ದೆಹಲಿ ಅಬಕಾರಿ ನೀತಿ 2021-22ರಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಬಂಧನದಲ್ಲಿರಿಸಿದ್ದು, ಎರಡರಲ್ಲೂ ಜಾಮೀನು ನಿರಾಕರಿಸಲಾಗಿದೆ.

    ಸಿಸೋಡಿಯಾ ಅವರನ್ನು ಮೊದಲು ಫೆ.27ರಂದು ಸಿಬಿಐ ಬಂಧಿಸಿದ್ದು, ನಂತರ ಮಾ.9ರಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಗಿತ್ತು. ಬಂಧನದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಅವರು ಫೆ. 28ರಂದು ರಾಜೀನಾಮೆ ನೀಡಿದ್ದರು.

    ಲಷ್ಕರ್ ಇ ತೈಬಾದ ಮಾಜಿ ಮುಖ್ಯಸ್ಥ ಅಕ್ರಂ ಖಾನ್​ ಅಪರಿಚಿತರ ಗುಂಡಿಗೆ ಬಲಿ!

    ಚುನಾವಣಾ ಕ್ಯಾಂಪೇನ್ ವಾಹನದ ಮೇಲಿಂದ ಮುಗ್ಗರಿಸಿಬಿದ್ರು ಸಚಿವ, ಸಂಸದ, ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts