More

    35 ವರ್ಷಗಳ ನಂತರ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ ಕಮಲ್​ ಹಾಸನ್​ ಮತ್ತು ಮಣಿರತ್ನಂ

    ಚೆನ್ನೈ: ಕಮಲ್​ ಹಾಸನ್​ ಮತ್ತು ಮಣಿರತ್ನಂ ಮತ್ತೆ ಯಾಕೆ ಒಟ್ಟಿಗೆ ಚಿತ್ರ ಮಾಡುತ್ತಿಲ್ಲ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಇದ್ದೇ ಇತ್ತು. 1987ರಲ್ಲಿ ಬಿಡುಗಡೆಯಾದ ‘ನಾಯಕನ್​’ ಚಿತ್ರದ ನಂತರ ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಅವರಿಬ್ಬರು ಯಾವಾಗ ಮತ್ತೆ ಒಟ್ಟಾಗಿ ಚಿತ್ರ ಮಾಡಬಹುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ‘ಲಾಲ್​ ಸಲಾಂ’ ಎಂದ ರಜನಿಕಾಂತ್​; ಮಗಳ ಚಿತ್ರದಲ್ಲಿ ಅತಿಥಿ ಪಾತ್ರ

    ಮಣಿರತ್ನಂ ನಿರ್ದೇಶನದಲ್ಲಿ ಒಂದು ಚಿತ್ರ ಮಾಡುತ್ತಿರುವುದಾಗಿ ಸ್ವತಃ ಕಮಲ್​ ಹಾಸನ್, ಭಾನುವಾರ ಘೋಷಿಸಿದ್ದಾರೆ. ಕಮಲ್​ ಹಾಸನ್​ ಅವರ ರಾಜ್​ಕುಮಲ್​ ಫಿಲಂಸ್​, ಮಣಿರತ್ನಂ ಅವರ ಮದರಾಸ್​ ಟಾಕೀಸ್ ಮತ್ತು ಉದಯನಿಧಿ ಸ್ಟಾಲಿನ್​ ಅವರ ರೆಡ್​ ಜಯಂಟ್​ ಮೂವೀಸ್​ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದೆ. ಮಣಿರತ್ನಂ ಎಂದಿನಂತೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅವರ ಖಾಯಂ ಸಂಗೀತ ನಿರ್ದೇಶಕರಾದ ಎ.ಆರ್​. ರೆಹಮಾನ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಒರ್ರಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಜಾಹ್ನವಿ

    ಅಂದಹಾಗೆ, ಇದು ಕಮಲ್​ ಹಾಸನ್​ ಅಭಿನಯದ 234ನೇ ಚಿತ್ರವಾಗಿದ್ದು, ಮುಂದಿನ ವರ್ಷ ಪ್ರಾರಂಭವಾಗಲಿದೆ, 2024ಕ್ಕೆ ಈ ಚಿತ್ರ ಬಿಡುಡೆಯಾಗಲಿದೆ.

    ‘ಉತ್ತರಕಾಂಡ’ ಚಿತ್ರದಲ್ಲಿ ಧನಂಜಯ್​ಗೆ ರಮ್ಯಾ ನಾಯಕಿ; ಮುಹೂರ್ತದಲ್ಲಿ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts