More

    ಮಾರುಕಟ್ಟೆಗೆ ಬಂದಿದೆ ಮಾವು : 1 ಕೆಜಿ ಹಣ್ಣಿನ ಬೆಲೆ 1551 ರೂಪಾಯಿ!

    ನವದೆಹಲಿ: ಋತುಗಳ ರಾಜ ವಸಂತನ ಆಗಮನಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಕಾಯಬೇಕು. ವಸಂತನ ಆಗಮನದೊಂದಿಗೆ ಮಾವಿನ ಮರ ಚಿಗುರುತ್ತದೆ. ಆ ನಂತರವೇ ಹಣ್ಣುಗಳ ರಾಜ ‘ಮಾವು’ ಮಾರುಕಟ್ಟೆಗೆ ಬರುತ್ತದೆ. ಆದರೆ ಕಾಲ, ಬದಲಾದ ವಾತಾವರಣದಿಂದ ಚಳಿಗಾಲದಲ್ಲಿ ಮಾವು ಮಾರುಕಟ್ಟೆಗೆ ಬಂದಿದೆ. ಹೌದು ಇದನ್ನು ನೀವು ನಂಬಲೇಬೇಕು. ಗುಜರಾತ್​ನ ಪೋರಬಂದರ್ ಮಾರ್ಕೆಟಿಂಗ್ ಯಾರ್ಡ್‌ಗೆ ಬುಧವಾರ ಬೇಸಿಗೆಯಲ್ಲಿ ಬರಬೇಕಿದ್ದ ಕೇಸರ್ ಮಾವು ಆಗಮಿಸಿದೆ. ಹಣ್ಣುಗಳ ಬೆಲೆ ಕೇಳಿದರೆ ಎಂಥವರೂ ಆಶ್ಚರ್ಯಚಕಿತರಾಗಬೇಕಾಗುತ್ತದೆ. ಕೇಸರ್ ಮಾವಿನ ಹಣ್ಣು ಹರಾಜಿನಲ್ಲಿ 1 ಕೆಜಿಗೆ 1551 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ: ಕೌನ್ ಬನೇಗಾ ಕರೋಡ್‌ಪತಿ: ಇತಿಹಾಸ ಬರೆದ 14 ವರ್ಷದ ಪೋರ- ಗೆದ್ದ ಮೊತ್ತ ಕೇಳಿದ್ರೆ ಹೌಹಾರ್ತೀರಾ!
    ಇಲ್ಲಿನ ಸುದಾಮ ಹಣ್ಣಿನ ಕಂಪನಿಯಲ್ಲಿ 10 ಕೆಜಿ ಮಾವಿನ ಹಣ್ಣಿನ ಎರಡು ಬಾಕ್ಸ್ ಬರೋಬ್ಬರಿ 30 ಸಾವಿರ ರೂ.ಗೆ ಮಾರಾಟವಾಗಿವೆ. ಮಾವಿನ ಋತುವಿಗೆ ಇನ್ನೂ ಐದು ತಿಂಗಳು ಬಾಕಿ ಇದ್ದು, ಅಕಾಲಿಕವಾಗಿ ಮಾರುಕಟ್ಟೆಗೆ ಬಂದ ಹಣ್ಣುಗಳಿಗೆ ಅನಿರೀಕ್ಷಿತ ಬೆಲೆಗೆ ಮಾರಾಟ ಕಂಡಿದೆ.

    ಸಾಮಾನ್ಯವಾಗಿ ಪ್ರತಿ ವರ್ಷ ಬೇಸಿಗೆಯಲ್ಲಿ ಅಂದರೆ ಮಾರ್ಚ್-ಏಪ್ರಿಲ್ ತಿಂಗಳಿನಿಂದ ಮಾವು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹಣ್ಣುಗಳ ರಾಜ ಎಂದು ಪರಿಗಣಿಸಲ್ಪಟ್ಟ ಮಾವು ಬೇಸಿಗೆಯ ಹಣ್ಣಾಗಿದೆ, ಆದರೆ ಪೋರಬಂದರ್‌ನ ಆದಿತ್ಯ ಹಳ್ಳಿಯಲ್ಲಿ ಕೇಸರ್ ಮಾವಿನ ಹಣ್ಣುಗಳು ಚಳಿಗಾಲದಲ್ಲಿ ಮರಗಳ ಮೇಲೆ ನೇತಾಡುತ್ತಿವೆ. ಪೋರಬಂದರ್ ಮಾರುಕಟ್ಟೆಗೆ ಕೇಸರಿ ಮಾವಿನ ಪೆಟ್ಟಿಗೆಗಳು ಮಾರಾಟಕ್ಕೆ ಬಂದಿವೆ. ಹವಾಮಾನ ವೈಪರೀತ್ಯವೋ ಅಥವಾ ಇನ್ನಾವುದೇ ಕಾರಣದಿಂದ ವಸಂತ ಋತುವಿಗೆ ಇನ್ನೂ ಐದು ತಿಂಗಳ ಮುನ್ನವೇ ಚಳಿಗಾಲದಲ್ಲಿ ಮಾವು ಹೂಬಿಟ್ಟು ಕಾಯಿಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಸಾಮಾನ್ಯವಾಗಿ ಮಾವಿನ ಹಣ್ಣಿಗೆ ಆಬಾಲವೃದ್ಧರೆಲ್ಲರೂ ಬೇಸಿಗೆಗಾಗಿ ಕಾತರದಿಂದ ಕಾಯುತ್ತಾರೆ. ಆದರೆ ಗಿರ್ ಪ್ರದೇಶದ ಕೇಸರ್ ಮಾವು ಮತ್ತು ಪೋರಬಂದರ್ ಜಿಲ್ಲೆಯ ಸ್ಥಳೀಯ ಮಾವಿಗೆ ಗುಜರಾತ್ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆಯಿದೆ. ಬೇಸಿಗೆಯ ಬದಲು ಚಳಿಗಾಲದಲ್ಲಿಯೇ ಮಾವು ಉತ್ಪಾದನೆಯಾಗುತ್ತಿದ್ದು, ರೈತರು, ವ್ಯಾಪಾರಸ್ಥರು ಸೇರಿದಂತೆ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದೆ.

    ಪೋರಬಂದರ್ ಜಿಲ್ಲೆಯ ಹನುಮಾನ್ ಗಡ್, ಬಿಲೇಶ್ವರ್, ಖಂಬಲಾ ಮತ್ತು ಕಟ್ವಾನಾ ಮತ್ತು ಆದಿತ್ಯನಾ ಸೇರಿದಂತೆ ಅಣೆಕಟ್ಟಿನ ಉದ್ದಕ್ಕೂ ಇರುವ ಹಳ್ಳಿಗಳ ಭೂಮಿ ಮಾವಿನ ಬೆಳೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಹೇರಳವಾಗಿ ಕೇಸರ್ ಮಾವು ಉತ್ಪಾದನೆಯಾಗುತ್ತಿದೆ. ಈ ಭಾಗದ ಹಣ್ಣುಗಳ ಗುಣಮಟ್ಟ ಮತ್ತು ದೊಡ್ಡ ಗಾತ್ರದ ಕಾರಣದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ.

    ಈ ಎಲೆಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸಿದ್ರೆ ನಿಮ್ಮ ದೇಹದಲ್ಲಿ ಚಮತ್ಕಾರವೇ ನಡೆಯಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts