More

    ಕೌನ್ ಬನೇಗಾ ಕರೋಡ್‌ಪತಿ: ಇತಿಹಾಸ ಬರೆದ 14 ವರ್ಷದ ಪೋರ- ಗೆದ್ದ ಮೊತ್ತ ಕೇಳಿದ್ರೆ ಹೌಹಾರ್ತೀರಾ!

    ನವದೆಹಲಿ: ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ.ಗೆದ್ದ ಹೆಗ್ಗಳಿಕೆಗೆ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ಪಾತ್ರನಾಗಿದ್ದಾನೆ. 14 ವರ್ಷದ ಈ ಬಾಲಕ 1 ಕೋಟಿ ರೂ.ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾನೆ.

    ಇದನ್ನೂ ಓದಿ: ಭಾರತದ 2 ದೊಡ್ಡ ಪರೀಕ್ಷೆಗಳು ಶೀಘ್ರ: ಜೆಇಇ, ಎನ್​ಇಟಿ ಪರೀಕ್ಷೆ ನಮೂನೆ ಭರ್ತಿಗೆ ಇಂದೇ ಕಡೇ ದಿನ..
    ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್ ಆಯೋಜಿಸಿದ್ದ ಐಕಾನಿಕ್ ಶೋನ 15 ನೇ ಆವೃತ್ತಿಯಲ್ಲಿ 1 ಕೋಟಿ ರೂ.ಗೆ 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದಾಗ ಕಾರ್ಯಕ್ರಮದ ವೀಕ್ಷಕರನ್ನು ಬೆರಗಾದರು.

    ಕಾರ್ಯಕ್ರಮದ ಆಯೋಜಕರು ‘X'(ಎಕ್ಸ್) ನಲ್ಲಿ ಪ್ರೋಮೋವನ್ನು ಪೋಸ್ಟ್ ಮಾಡಿದ್ದು, ಮಹತ್ವಾಕಾಂಕ್ಷೆ ಗೆಲುವು ನಮ್ಮದಾಗಲಲು ಆತ್ಮವಿಶ್ವಾಸ ಮುಖ್ಯ ಎಂದಿದ್ದು, ಮೆಗಾ ಬಹುಮಾನವನ್ನು ಗೆದ್ದಿರುವ ಮಯಾಂಕ್ ” ಜ್ಞಾನ ಮಾತ್ರ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲದು” ಎಂದು ಹೇಳುವುದನ್ನು ವೀಡಿಯೊದಲ್ಲಿ ಕೇಳಲಾಗುತ್ತದೆ. ಬಚ್ಚನ್ ಅವರ ಅಭಿನಯದ ಬಗ್ಗೆ ಮಯಾಂಕ್ ಪಾಲಕರನ್ನು ಕೇಳುವುದನ್ನು ಪ್ರೋಮೋ ತೋರಿಸುತ್ತದೆ. ಆತ ತನ್ನ ಶಿಕ್ಷಕರ ಪ್ರೋತ್ಸಾಹವನ್ನೂ ತಿಳಿಸಿದ್ದಾನೆ. ತರಗತಿಯಲ್ಲಿ ಓದಿನಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾನೆ ಎಂದು ಆತನ ತಂದೆ ಹೇಳುವುದು ಸಹ ಪ್ರೋಮೋದಲ್ಲಿ ಇದೆ.

    ಇನ್ನು ಈ ಬೃಹತ್ ಬಹುಮಾನವನ್ನು ಗೆಲ್ಲುವ ಸಂದರ್ಭ ಶೋನಲ್ಲಿ ಮಯಾಂಕ್ ಯಾವುದೇ ಲೈಫ್‌ಲೈನ್‌ಗಳನ್ನು ಬಳಸದೆ 3.2 ಲಕ್ಷ ರೂ. ಗೆದ್ದಿದ್ದು, 12.5 ಲಕ್ಷ ರೂ.ಪ್ರಶ್ನೆಗೆ ಮಾತ್ರ ಮೊದಲ ಲೈಫ್‌ಲೈನ್ ಅನ್ನು ಬಳಸಿದ್ದ ಎಂಬುದು ಗಮನಾರ್ಹ ಸಂಗತಿಯಾಗಿದೆ.
    ಲೀಲಾಜಾಲವಾಗಿ 15 ಪ್ರಶ್ನೆಗಳಿಗೆ ಉತ್ತರಿಸಿದ ಮಯಾಂಕ್ ದೊಡ್ಡ ಮೊತ್ತ “1 ಕೋಟಿ” ಪ್ರಶ್ನೆಗೆ ತಲುಪಿದ್ದು, “ಹೊಸದಾಗಿ ಪತ್ತೆಯಾದ ಖಂಡಕ್ಕೆ ಅಮೇರಿಕಾ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ರಚಿಸಿದ ಯುರೋಪಿನ ಕಾರ್ಟೋಗ್ರಾಫರ್ ಯಾರು?” ಎಂದು ಕೇಳಲಾಯಿತು.

    ಇದಕ್ಕೆ ಅಬ್ರಹಾಂ ಒರ್ಟೆಲಿಯಸ್, ಗೆರಾಡಸ್ ಮರ್ಕೇಟರ್, ಜಿಯೋವಾನಿ ಬಟಿಸ್ಟಾ ಆಗ್ನೆಸ್ ಮತ್ತು ಮಾರ್ಟಿನ್ ವಾಲ್ಡ್ಸೀಮುಲ್ಲರ್ ಎಂಬ ನಾಲ್ಕು ಆಯ್ಕೆಗಳಿದ್ದವು. ಮಾಯಾಂಕ್ ಮಾರ್ಟಿನ್ ವಾಲ್ಡ್ಸೀಮುಲ್ಲರ್ ಎನ್ನುವ ಮೂಲಕ ಸರಿಯಾದ ಆಯ್ಕೆಯನ್ನು ಆರಿಸಿಕೊಂಡು 1 ಕೋಟಿ ರೂ.ಪಡೆಯುವಂತಾಯಿತು. ಆತ ಅಂತಿಮ ಪ್ರಶ್ನೆಯನ್ನು 7 ಕೋಟಿ ರೂ.ಗೆ ಪ್ರಯತ್ನಿಸಿದ್ದ, ಆದರೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆಟವನ್ನು ಅಲ್ಲಿಗೆ ಮುಕ್ತಾಯಗೊಳಿಸಿದ. ಯಂಗ್ ಚಾಂಪಿಯನ್​ಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿನಂದಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಸ್ಪರ್ಧೆಯಲ್ಲಿ ಜ್ಞಾನ ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು ಅತ್ಯಂತ ಅದೃಷ್ಟ ಎಂದು ಭಾವಿಸಿದ್ದೇನೆ ಎಂದು ಯುವ ಸ್ಪರ್ಧಿ ಮಯಾಂಕ್ ಹೇಳುತ್ತಾನೆ. ನನ್ನನ್ನು ಪ್ರೇರೇಪಿಸಿದ ಅಮಿತಾಭ್ ಸರ್ ಎದುರು ಆಟವಾಡಲು ಅವಕಾಶ ಸಿಕ್ಕಿರುವುದು ನನ್ನ ಸಭಾಗ್ಯ ಎಂದು ಭಾವಿಸುತ್ತೇನೆ. ಇಷ್ಟು ದೊಡ್ಡ ಮೊತ್ತವನ್ನು ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ನಾನು ಮತ್ತು ನನ್ನ ಕುಟುಂಬ ಈ ಕಾರ್ಯಕ್ರಮ ಮತ್ತು ಬಚ್ಚನ್ ಸರ್ ರ ದೊಡ್ಡ ಅಭಿಮಾನಿಗಳು. ನಿರಂತರ ಮಾರ್ಗದರ್ಶನಕ್ಕಾಗಿ ನನ್ನ ಪಾಲಕರಿಗೆ ಧನ್ಯವಾದ ಹೇಳುತ್ತೇನೆ ಎಂದು ಆತ ಹೇಳಳುತ್ತಾನೆ.

    ಅರ್ಚಕರ ಸ್ಥಾನಕ್ಕೆ ಮಕ್ಕಳ ನೇಮಕಾತಿ; ‘ಸಿ’ ವರ್ಗದ ದೇವಾಲಯಗಳಿಗೆ ಅನ್ವಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts