More

    ಸ್ಥಳೀಯ ಸಮುದಾಯದ ಪರ ಭಾವೋದ್ರೇಕಿತ ಭಾಷಣ: ನ್ಯೂಜಿಲೆಂಡ್ ಸಂಸದೆಯ ವಿಡಿಯೋ ವೈರಲ್ ಆಗಿದ್ದೇಕೆ?

    ನವದೆಹಲಿ:
    ನ್ಯೂಜಿಲೆಂಡ್‌ನ ಸಂಸತ್ ಸದಸ್ಯರೊಬ್ಬರು ಮಾಡಿದ ಪ್ರಬಲ ಭಾಷಣದ ವಿಡಿಯೋ ವೈರಲ್ ಆಗಿದೆ. ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಕೇವಲ 21 ವರ್ಷ ವಯಸ್ಸಿನವರಾಗಿದ್ದು, ಕಳೆದ 170 ವರ್ಷಗಳಲ್ಲಿ ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

    2008 ರಿಂದ ಹೌರಾಕಿ-ವೈಕಾಟೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದೇಶದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ಸಂಸದರಲ್ಲಿ ಒಬ್ಬರಾದ ನಾನಿಯಾ ಮಹುತಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸೋಲಿಸುವ ಮೂಲಕ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

    ಮೈಪಿ-ಕ್ಲಾರ್ಕ್ ನ್ಯೂಜಿಲೆಂಡ್‌ನ ಸ್ಥಳೀಯ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇವರ ಅಜ್ಜ, ತೈತಿಮು ಮೈಪಿ ಅವರು ಮಾವೋರಿ ಕಾರ್ಯಕರ್ತರ ಗುಂಪಾದ ನ್ಗಾ ಟಮಾಟೊವಾ ಸದಸ್ಯರಾಗಿದ್ದಾರೆ.

    ಕಳೆದ ತಿಂಗಳು ಮಾಡಿದ ಭಾವೋದ್ರಿಕ್ತ ಭಾಷಣದಲ್ಲಿ ಮೈಪಿ-ಕ್ಲಾರ್ಕ್ ಅವರು ಸಾಂಪ್ರದಾಯಿಕ ‘ಹಕಾ’ ಅಥವಾ ‘ಯುದ್ಧದ ಕೂಗು’ ಪ್ರದರ್ಶಿಸಿದರು. ಅಲ್ಲದೆ, ತಮ್ಮ ಮತದಾರರಿಗೆ ಭರವಸೆಯನ್ನೂ ನೀಡಿದರು. “ನಾನು ನಿಮಗಾಗಿ ಸಾಯುತ್ತೇನೆ… ಆದರೆ ನಾನು ನಿಮಗಾಗಿ ಬದುಕುತ್ತೇನೆ” ಎಂದೂ ಅವರು ಹೇಳಿದರೆಂದು ನ್ಯೂಜಿಲೆಂಡ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

    “ತಮ್ಮ ಜೀವನದುದ್ದಕ್ಕೂ ತಮ್ಮ ತರಗತಿಯ ಹಿಂಭಾಗದಲ್ಲಿ ಕುಳಿತಿರುವ ತಮರಿಕಿ ಮಾವೋರಿಗೆ, ವಾಕಾಮಾ, ತಮ್ಮ ಮಾತೃಭಾಷೆಯನ್ನು ಕಲಿಯಲು ಹಂಬಲಿಸುವ ಪೀಳಿಗೆಗಳಿಗೆ, ಇನ್ನೂ ತಮ್ಮ ಪೆಪೆಹಾದಲ್ಲಿ ಮುಂದೆ ಸಾಗದ ತಮರಿಕಿಗಳಿಗೆ, ತೆರೆದ ಬಾಹುಗಳ ಮೂಲಕ ನಿಮಗಾಗಿ ಮುಕ್ತವಾಗಿ ಕಾಯಲಾಗುತ್ತಿದೆ..,” ಎಂದು ಅವರು ತಮ್ಮ ಭಾವೂದ್ರೇಕಿತ ಭಾಷಣದಲ್ಲಿ ಹೇಳಿದರು.

    “ನೆವರ್ ಫಿಟ್ ಇನ್. ಯು ಆರ್ ಪರ್ಫೆಕ್ಟ್. ಯು ಆರ್ ಪರ್ಫೆಕ್ಟ್ ಫಿಟ್.” ಎಂದೂ ಅವರು ಹೇಳಿದರು.

    ಆಕ್ಲೆಂಡ್ ಮತ್ತು ಹ್ಯಾಮಿಲ್ಟನ್ ನಡುವಿನ ಸಣ್ಣ ಪಟ್ಟಣವಾದ ಹಂಟ್ಲಿ ನಿವಾಸಿಯಾಗಿರುವ 21 ವರ್ಷ ವಯಸ್ಸಿನ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರು, ಸಮುದಾಯದ ಚಂದ್ರನ ಕ್ಯಾಲೆಂಡರ್ ಪ್ರಕಾರ ತೋಟಗಾರಿಕೆ ನಡೆಸುವ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಮಾವೋರಿ ಸಮುದಾಯ ಉದ್ಯಾನವನ್ನು ನಡೆಸುತ್ತಿದ್ದಾರೆ.

    ತನ್ನನ್ನು ತಾನು ರಾಜಕಾರಣಿಯಾಗಿ ನೋಡುವುದಿಲ್ಲ, ಆದರೆ, ಮಾವೋರಿ ಭಾಷೆಯ ರಕ್ಷಕಳಾಗಿ ನೋಡುತ್ತೇನೆ. ಮಾವೋರಿಗಳ ಹೊಸ ಜನರ ಧ್ವನಿಯನ್ನು ಕೇಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

    “ಸಂಸತ್ತಿಗೆ ಪ್ರವೇಶಿಸುವ ಮೊದಲು ನನಗೆ ಕೆಲವು ಸಲಹೆಗಳನ್ನು ನೀಡಲಾಯಿತು, ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ … ಅಲ್ಲದೆ, ಈ ಚೇಂಬರ್‌ನಲ್ಲಿ ಹೇಳಲಾದ ಎಲ್ಲವನ್ನೂ ನಾನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಇರಲಾರೆ” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

    “ಕೇವಲ ಒಂದೆರಡು ವಾರಗಳಲ್ಲಿ … ಈ ಸರ್ಕಾರವು ನನ್ನ ಇಡೀ ಪ್ರಪಂಚದ ಮೇಲೆ ದಾಳಿ ಮಾಡಿದೆ … ಆರೋಗ್ಯ, ತಯಾವೋ (ಪರಿಸರ), ವೈ (ನೀರು), ವೇನುವಾ (ಭೂಮಿ), ನೈಸರ್ಗಿಕ ಸಂಪನ್ಮೂಲಗಳು, ಮಾವೋರಿ ವಾರ್ಡ್‌ಗಳು, ರಿಯೋ (ಭಾಷೆ), ತಮರಿಕಿ, ಮತ್ತು ಟೆ ತಿರಿಟಿ ಅಡಿಯಲ್ಲಿ ಈ ದೇಶದಲ್ಲಿರುವುದು ನನ್ನ ಮತ್ತು ನಿಮ್ಮ ಹಕ್ಕು” ಎಂದು ಮೈಪಿ-ಕ್ಲಾರ್ಕ್ ಹೇಳಿದರು.

    “ಮನೆಯಿಂದ ನೋಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ… ಇದು ನನ್ನ ಕ್ಷಣವಲ್ಲ, ಇದು ನಿಮ್ಮದು” ಎಂದು ಅವರು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.

    ಮೈಪಿ-ಕ್ಲಾರ್ಕ್ ಇನ್‌ಸ್ಟಾಗ್ರಾಮ್‌ನಲ್ಲಿ 20,000 ಮತ್ತು ಟಿಕ್‌ಟಾಕ್‌ನಲ್ಲಿ 18,500 ಅನುಯಾಯಿಗಳನ್ನು ಹೊಂದಿದ್ದಾರೆ.

    ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಲ್​ಇಟಿ ಉಗ್ರನ ಹತ್ಯೆಗೈದ ಸೇನಾಪಡೆ

    ಜಪಾನ್​ನಲ್ಲಿದೆ ನಿರಾಶಾವಾದಿಗಳಿಗೊಂದು ರೆಸ್ಟೋರೆಂಟ್​: ಇಲ್ಲಿನ ಕಾಕ್‌ಟೇಲ್​ಗಳ ಹೆಸರು ಕೇಳಿದರೆ ಹುಚ್ಚು ಹಿಡಿಯಬಹುದು!!

    ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧ: ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts