More

    ಅರ್ಚಕರ ಸ್ಥಾನಕ್ಕೆ ಮಕ್ಕಳ ನೇಮಕಾತಿ; ‘ಸಿ’ ವರ್ಗದ ದೇವಾಲಯಗಳಿಗೆ ಅನ್ವಯ

    ಬೆಂಗಳೂರು: ಮುಜರಾಯಿ ಇಲಾಖೆಯ ‘ಸಿ’ ವರ್ಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಅನಾರೋಗ್ಯಪೀಡಿತರಾಗಿದ್ದರೆ, ಅವರ ಮಕ್ಕಳನ್ನೇ ಆ ಹುದ್ದೆಗೆ ನೇಮಕಾತಿ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ‘ಸಿ’ ವರ್ಗದ ದೇವಾಲಯಗಳಿದ್ದು, ಅರ್ಚಕರು ನಿಧನರಾದರೆ ಮಾತ್ರ ಅನುಕಂಪದ ಆಧಾರದ ಮೇಲೆ ಮಕ್ಕಳನ್ನು ಆ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು.

    ಆದರೆ, ಇನ್ಮುಂದೆ ಅನಾರೋಗ್ಯಕ್ಕೆ ಒಳಗಾದವರ ಅಥವಾ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂತಹವರ ಮಕ್ಕಳನ್ನು ನೇಮಕಾತಿ ಮಾಡಬೇಕು. ಅರ್ಚಕರ ಅನುವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಇದನ್ನು ಆಯಾ ತಾಲೂಕುಗಳ ತಹಸೀಲ್ದಾರ್ ಹಂತದಲ್ಲಿ ವರ್ಗಾವಣೆ ಮಾಡಲು ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ಅರ್ಚಕರ ಸಂಘದ ಮನವಿಗೆ ಸರ್ಕಾರ ಸ್ಪಂದಿಸಿದೆ. 

    ಎಚ್-1ಬಿ ವೀಸಾ ನವೀಕರಣಕ್ಕೆ ಅಮೆರಿಕ ನಿರ್ಧಾರ; ಭಾರತೀಯರಿಗೆ ಹೆಚ್ಚು ಪ್ರಯೋಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts