More

    ಈ ಎಲೆಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸಿದ್ರೆ ನಿಮ್ಮ ದೇಹದಲ್ಲಿ ಚಮತ್ಕಾರವೇ ನಡೆಯಲಿದೆ!

    ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲವು ಎಲೆಗಳನ್ನು ಆಹಾರದಲ್ಲಿ ಸೇರಿಸಬಹುದು. ಇದರಿಂದ ಯಾವುದೇ ಕೆಮಿಕಲ್​ ಔಷಧಿಗಳಿಲ್ಲದೆ ನೈಸರ್ಗಿಕವಾಗಿ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

    ಮಧುಮೇಹವು ಇಂದು ತುಂಬಾ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಬಹುತೇಕರ ಮನೆಗಳಲ್ಲಿ ಮಧುಮೇಹ ರೋಗಿಗಳು ಕಾಣಿಸಿಕೊಳ್ಳುತ್ತಾರೆ. ನಿಯಮಿತ ವೈದ್ಯಕೀಯ ತಪಾಸಣೆ, ನಡಿಗೆಯಂತಹ ಲಘು ವ್ಯಾಯಾಮ ಮತ್ತು ಔಷಧೋಪಚಾರದಿಂದ ಇದೆಲ್ಲವನ್ನೂ ನಿಯಂತ್ರಣದಲ್ಲಿಡಲಾಗುತ್ತದೆ. ಆದರೆ ಅಂತಹ ಜನರು ತಮ್ಮ ಆಹಾರದಲ್ಲಿ ಕೆಲವು ಎಲೆಗಳ ತರಕಾರಿಗಳನ್ನು ತಿನ್ನಬೇಕು ಎಂದು ವೈದ್ಯರು ಸೂಚಿಸುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಎಲೆಗಳ ಬಗ್ಗೆ ಯಾರಾದರೂ ತಿಳಿದಿರುವುದು ಅತ್ಯಗತ್ಯ. ನಾವೀಗ ತಿಳಿಯೋಣ.

    ಮೆಂತ್ಯ ಎಲೆಗಳು: ಮೆಂತ್ಯವು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿರುವಂತೆ ಮೆಂತ್ಯ ಎಲೆಗಳು ಸಹ ಈ ಗುಣಗಳನ್ನು ಹೊಂದಿವೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ದೇಹವು ಹೆಚ್ಚು ಗ್ಲೂಕೋಸ್ ಹೀರಿಕೊಳ್ಳುವುದನ್ನು ತಡೆಯುತ್ತದೆ. ದಿನಕ್ಕೆ ಹತ್ತು ಗ್ರಾಂ ಮೆಂತ್ಯ ಅಥವಾ ಮೆಂತ್ಯ ಎಲೆಗಳನ್ನು ತಿನ್ನುವುದು ಟೈಪ್ 2 ಮಧುಮೇಹದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ.

    ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಈ ಎಲೆಗಳು ವಿಶೇಷವಾದ ನಾರಿನ ಪದಾರ್ಥವನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ, ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ಪೇರಲ ಎಲೆಗಳು: ಪೇರಲ ಎಲೆಗಳು ಮಧುಮೇಹಿಗಳಿಗೆ ಒಳ್ಳೆಯದು. ಈ ಎಲೆಗಳು ಟೈಪ್ 2 ಮಧುಮೇಹದ ಅಪಾಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಈ ಎಲೆಗಳ ರಸವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಬಿಡುಗಡೆಯಾಗುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್​ನಂತಹ ಖನಿಜಗಳು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನೂ ತಡೆಯುತ್ತದೆ.

    ತುಳಸಿ ಎಲೆಗಳು: ತುಳಸಿ ಎಲೆಗಳು ಮಧುಮೇಹಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಪ್ರಿಡಯಾಬಿಟಿಕ್ ಮತ್ತು ಡಯಾಬಿಟಿಕ್ ಸ್ಥಿತಿಯಲ್ಲಿರುವ ಜನರು ಇದನ್ನು ಪ್ರತಿದಿನ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

    ಮಧುಮೇಹದ ಲಕ್ಷಣಗಳಿರುವ ಜನರು ಮೇಲಿನ ಎಲ್ಲಾ ಎಲೆಗಳನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. (ಏಜೆನ್ಸೀಸ್​)

    ಭಾರತಕ್ಕೆ ಚೈತನ್ಯ ವಿಶ್ವಕ್ಕೆ ನಾವೀನ್ಯ; ತಾಂತ್ರಿಕ ಉನ್ನತಿ, ಉದ್ಯಮ ಪ್ರಗತಿ

    ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts