More

    ಹೂ ತುಂಬಿಕೊಂಡ ಮಾವು, ಭರಪೂರ ಬೆಳೆಯ ನಿರೀಕ್ಷೆಯಲ್ಲಿ ರೈತರು

    ಹುಬ್ಬಳ್ಳಿ: ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವು ಈ ಬಾರಿ ಭರಪೂರ ಬೆಳೆಯ ನಿರೀಕ್ಷೆ ಮೂಡಿಸಿದೆ. ಮಾವಿನ ಗಿಡಗಳು ಇದೀಗ ಮೈತುಂಬ ಹೂಗಳನ್ನು ಬಿಟ್ಟುಕೊಂಡು ಕಣ್ಣು ಕೋರೈಸುತ್ತಿವೆ. ಕೆಲವೆಡೆ ಗಿಡಗಳೇ ಕಾಣದಷ್ಟು ಹೂಗಳಿಂದ ಅಲಂಕಾರಗೊಂಡಿವೆ. ಹಾಗಾಗಿ ಎಲ್ಲೆಡೆ ಇದೀಗ ಮಾವಿನ ಹೂಗಳ ಮ ಸೂಸುತ್ತಿದೆ.

    ವಾಡಿಕೆಯಂತೆ ಡಿಸೆಂಬರ್ ಚಳಿಗೆ ಮಾವಿನ ಗಿಡಗಳು ಯಥೇಚ್ಛ ಹೂಗಳನ್ನು ಬಿಟ್ಟಿವೆ. ಜನೆವರಿ ಮೊದಲ ವಾರ ಮಾವು ಹೂ ಬಿಡುವುದು ಸಾಮಾನ್ಯ. ಆದರೆ, ಈ ಬಾರಿ ಅತೀ ಹೆಚ್ಚು ಹೂ ಬಿಟ್ಟಿದ್ದು, ಮಾವು ಪ್ರಿಯರ ಗಮನ ಸೆಳೆಯುತ್ತಿವೆ.

    ಇದೀಗ ಬಿಟ್ಟಿರುವ ಹೂವಿನಲ್ಲಿ ಅರ್ಧದಷ್ಟು ಕಾಯಿ ಹಿಡಿದು ಹಣ್ಣಾದರೆ ಭರ್ಜರಿ ಬೆಳೆಯ ನಿರೀಕ್ಷೆ ಮಾಡಬಹುದು. ಈ ಬಾರಿ ಯಾವುದೇ ಅಕಾಲಿಕ ಮಳೆ, ಬಿರುಗಾಳಿ ಬೀಸದೇ ಹೋದರೆ ಅದೃಷ್ಟ ಕೈಹಿಡಿಯಲಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

    ಸದ್ಯ ಧಾರವಾಡ ಜಿಲ್ಲೆಯಲ್ಲಿ 8400 ಹೆಕ್ಟೇರ್ನಷ್ಟು ಮಾವು ಬೆಳೆಯುವ ಪ್ರದೇಶ ಇದೆ. ದಶಕದ ಹಿಂದೆ 25 ಸಾವಿರ ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿತ್ತು. ನಗರೀಕರಣ, ವಸತಿ ಯೋಜನೆಗಳ ಅಬ್ಬರ, ಪರ್ಯಾಯ ಬೆಳೆ ಪದ್ಧತಿ ಇತ್ಯಾದಿ ಕಾರಣಗಳಿಂದಾಗಿ ಮಾವು ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತ ಹೊರಟಿದೆ.

    ವಿಶೇಷವಾಗಿ ಜಿಲ್ಲೆಯ ಕಲಟಗಿ, ಧಾರವಾಡ, ಹುಬ್ಬಳ್ಳಿಯ ಕೆಲ ಭಾಗದಲ್ಲಿ ಅಧಿಕ ಮಾವು ಬೆಳೆಯಲಾಗುತ್ತದೆ. ಧಾರವಾಡ ಜಿಲ್ಲೆಯ ಅಲ್ಫಾನ್ಸೋ (ಆಪೂಸ್) ಮಾವು ಪ್ರಸಿದ್ಧಿ ಪಡೆದಿದೆ. ಧಾರವಾಡ ಜಿಲ್ಲೆಯ ಮಾವು ಬೆಳೆಯುವ ಪ್ರದೇಶದ ಶೇ. 80 ಭಾಗವನ್ನು ಆಪೂಸ್ ಆವರಿಸಿಕೊಂಡಿದೆ.

    ಇದಲ್ಲದೇ ಸ್ಥಳಿಯ ತಳಿಗಳಾದ ಕಲಮಿ, ಜೀರಿಗೆ, ತೋತಾಪುರಿ, ನೀಲಂ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಅಪೂಸ್ ಹಣ್ಣು ಹೊರದೇಶಗಳಿಗೂ ರ್ತಾಗುತ್ತದೆ ಎಂಬುದು ವಿಶೇಷ.

    ಕಳೆದ ವರ್ಷ ಅಕಾಲಿಕ ಮಳೆ, ಬಿರುಗಾಳಿಯಿಂದ ಒಂದಿಷ್ಟು ನಷ್ಟವಾಗಿತ್ತು. ಉತ್ತಮ ಇಳುವರಿ ಬಂದರೆ ಪ್ರತಿ ಹೆಕ್ಟೇರ್ಗೆ 6ರಿಂದ 8 ಟನ್ ವರೆಗೆ ಮಾವು ಬರಬಹುದು. ಈ ಬಾರಿ ಹೂ ಹೆಚ್ಚಿರುವುದರಿಂದ ಉತ್ತಮ ಇಳುವರಿಯೂ ಬರುವ ಸಾಧ್ಯತೆ ಇದೆ ಎಂದು ಧಾರವಾಡದ ರೈತ ಸಂಗಮೇಶ ಹೇಳುತ್ತಾರೆ.

    ನಮ್ಮ ಧಾರವಾಡ ಜಿಲ್ಲೆಯ ಮಾವು ತಳಿ ಆಪೂಸ್ ಪ್ರಧಾನ ಮಂತ್ರಿಯವರ ಮಹತ್ವಾಕಾಂ ಆತ್ಮನಿರ್ಭರ ಯೋಜನೆಯ “ಒಂದು ಜಿಲ್ಲೆ ಒಂದು ಬೆಳೆ’ ಅಡಿ ಆಯ್ಕೆಯಾಗಿದ್ದರಿಂದ ಹೆಚ್ಚು ಮಹತ್ವ ಪಡೆದಿದೆ. ಆಪೂಸ್ ಹಣ್ಣಿನ ಬ್ರಾ$್ಯಂಡಿಂಗ್, ಉತ್ಪನ್ನ ಮಾರಾಟಕ್ಕೆ ಸಹಾಯ ಮಾಡುವ ಕೆಲಸವನ್ನು ಈ ಯೋಜನೆಯಡಿ ಕೇಂದ್ರ ಸರ್ಕಾರ ಮಾಡುತ್ತಿದೆ.

    ಈ ಎಲ್ಲ ಹಿನ್ನೆಲೆಯಲ್ಲಿ ಈ ವರ್ಷ ಮಾವಿನ ಸೀಜನ್ ಭರಪೂರ ಆಗುವ ನಿರೀೆಯಲ್ಲಿ ಬೆಳೆಗಾರರು ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts