More

    ಪಿಯುಸಿಯಲ್ಲಿ ಮಂಡ್ಯ ಕಳಪೆ ಫಲಿತಾಂಶ; ಜನಪ್ರತಿನಿಧಿಗಳ ಸಮಾಲೋಚನಾ ಸಭೆ ಕರೆಯಲು ಆಗ್ರಹ

    ಬೆಂಗಳೂರು: ಪದವಿಪೂರ್ವ ಪರೀಕ್ಷೆಯ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ ತೀರಾ ಕುಸಿತ ಕಂಡಿದ್ದರಿಂದ ಚಿಂತೆಗೀಡಾಗಿರುವ ಜಿಲ್ಲೆಯ ಜನಪ್ರತಿನಿಧಿಗಳು, ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಕರೆಯಲು ಮುಂದಾಗಿದ್ದಾರೆ.

    ಪಿಯುಸಿಯಲ್ಲಿ ಮಂಡ್ಯ ಜಿಲ್ಲೆಯ ಫಲಿತಾಂಶವು ನಿಜಕ್ಕೂ ಆತಂಕ ಮೂಡಿಸಿದೆ. 2016-17ರಲ್ಲಿ 17ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 29ನೇ ಸ್ಥಾನಕ್ಕೆ ಕುಸಿತ ಕಂಡಿದೆ ಎಂದರೆ ಇದು ನಿಜಕ್ಕೂ ಪರಾಮರ್ಶೆ ಮಾಡಬೇಕಾದ, ಈಗಲೇ ಎಚ್ಚೆತ್ತುಕೊಳ್ಳಬೇಕಾಗಿರುವ ವಿಷಯ. ಕಾರಣ, ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಎಲ್ಲ ಅವಕಾಶಗಳು, ಸೌಕರ್ಯಗಳಿದ್ದರೂ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಇದು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ತಮ್ಮ ಮಕ್ಕಳ ಮುಂದಿನ ಭವಿಷ್ಯ ಏನು? ಎಂಬ ಬಗ್ಗೆ ಎಲ್ಲರಿಗೂ ಚಿಂತೆ ಕಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್​ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.

    ಎಲ್ಲ ಸರ್ಕಾರವೂ ಸಾಕ್ಷರತೆಗೆ ಬಹಳ ಒತ್ತು ಕೊಡುತ್ತದೆ. ಇದಕ್ಕಾಗಿ ಅನುದಾನಗಳನ್ನೂ ನೀಡುತ್ತಾ ಬಂದಿದೆ. ಇಷ್ಟಾದರೂ ಉತ್ತಮ ಫಲಿತಾಂಶ ಕಂಡುಕೊಳ್ಳುವಲ್ಲಿ ಎಡವುತ್ತಿದ್ದೇವೆ. ಅದರಲ್ಲೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಳಪೆ ಮಟ್ಟದ ಫಲಿತಾಂಶವನ್ನು ನಾವು ಕಂಡಿದ್ದೇವೆ. ಇದು ಆತಂಕವನ್ನು ಹುಟ್ಟಿಸಿದ್ದು, ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದ್ದು, ಮಂಡ್ಯ ಜಿಲ್ಲೆ ಟಾಪ್ 10ರಲ್ಲಿ ನೋಡುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ.

    ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿದು ಮನೆಯಲ್ಲೇ ಉಳಿದುಕೊಂಡರೆ ನಿರುದ್ಯೋಗದ ಸಮಸ್ಯೆಗಳೂ ಹೆಚ್ಚಾಗುತ್ತವೆ. ನಿರುದ್ಯೋಗ ಬಡತನವನ್ನು ಹುಟ್ಟುಹಾಕುತ್ತದೆ. ಬಡತನದಿಂದ ಹಸಿವು ಉಂಟಾಗುತ್ತದೆ. ಹೀಗಾಗಿ ಶೈಕ್ಷಣಿಕವಾಗಿ ಮಂಡ್ಯ ಜಿಲ್ಲೆಯನ್ನು ಮುಂದೆ ತರುವ ಕೆಲಸಗಳು ಆಗಬೇಕು. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರಾದ ತಾವುಗಳು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

    ಪೋಷಕರು ಬಹಳವಾಗಿಯೇ ಆತಂಕದಲ್ಲಿ ಇರುವ ಕಾರಣ ಮಾನ್ಯ ಉಸ್ತುವಾರಿ ಸಚಿವರು ಫಲಿತಾಂಶ ಸಂಬಂಧ ಸ್ಪಷ್ಟನೆಯನ್ನು ನೀಡಬೇಕು. ಕೂಡಲೇ ಶಿಕ್ಷಣ ತಜ್ಞರ ಸಮಾಲೋಚನಾ ಸಭೆ ಕರೆಯಬೇಕು. ಈ ಸಭೆಯಲ್ಲಿ ಕಳಪೆ ಮಟ್ಟದ ಫಲಿತಾಂಶಕ್ಕೆ ಏನು ಕಾರಣವಿದೆ ಎಂಬುದನ್ನು ಕಂಡುಕೊಳ್ಳಬೇಕು. ಈ ಕುರಿತು ಶಿಕ್ಷಣ ಸಚಿವರ ಸಮ್ಮುಖದಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸಮಾಲೋಚನಾ ಸಭೆಯನ್ನು ಉಸ್ತುವಾರಿ ಸಚಿವರು ಶೀಘ್ರದಲ್ಲೇ ಕರೆಯಬೇಕು ಎಂದು ದಿನೇಶ್ ಆಗ್ರಹಿಸಿದ್ದಾರೆ.

    ಮನೆಯ ಬಾವಿಯಲ್ಲಿ ಶವ; ಕೊಳೆತು ನಾರಿದ ಮೇಲೇ ಗೊತ್ತಾಗಿದ್ದು!

    ಮತ್ತೊಂದು ಭೀಕರ ಅಪಘಾತ; ಅಪ್ಪನ ದಿನದಂದೇ ಇನ್ನೊಂದು ತಂದೆ-ಮಗನ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts