ಬಳ್ಳಾರಿ: ಮಂಡ್ಯದಲ್ಲಿ ಎರಡು ದಿನಗಳ ಹಿಂದೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿದ್ದ ಬಾಲಕಿಯ ದೇಹ ಇಂದು ಬಳ್ಳಾರಿಯ ಸ್ವಗ್ರಾಮಕ್ಕೆ ಬಂದು ತಲುಪಿದೆ. ಆದರೆ ನ್ಯಾಯ ಸಿಗುವ ತನಕ ಶವಸಂಸ್ಕಾರ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.
ಇದನ್ನೂ ಓದಿ: VIDEO| ‘ನಾ ಹೇಳಿದವರಿಗೇ ನೀ ವೋಟ್ ಹಾಕ್ಬೇಕು’ ಲೋಕಲ್ ವಾರ್ಗಾಗಿ ಅಕ್ಕ ತಮ್ಮನ ಫೈಟ್!
ಹೊದಪೇಟೆ ತಾಲೂಕಿನ ತಾಳೆಬಸಾಪುರ ತಾಂಡಕ್ಕೆ ಬಾಳಕಿಯ ಮೃತದೇಹವನ್ನು ತರಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿ ಬರೋವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಗ್ರಾಮಸ್ಥರ ಮನವೊಲಿಸಲು ಮುಂದಾಗಿರುವ ಪೊಲೀಸರು, ಶವಸಂಸ್ಕಾರದ ನಂತರ ಮಾತನಾಡೋಣ ಎಂದು ಹೇಳುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಗರ್ಭಿಣಿಯನ್ನು ಕರೆದುಕೊಂಡು ಬರಬೇಕಿದ್ದ ಆ್ಯಂಬುಲೆನ್ಸ್ ಅಪಘಾತ! ಸ್ಟಾಪ್ ನರ್ಸ್ ಸಾವು
ಕಬ್ಬು ಕಟಾವಿಗೆಂದು ಬಳ್ಳಾರಿಯಿಂದ ಮಂಡ್ಯಕ್ಕೆ ಗುಳೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ 17 ವರ್ಷದ ಓರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಕತ್ತು ಕೊಯ್ದು ಬರ್ಬರ ಹತ್ಯೆ
ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ
ಬಳ