More

    ಮಹಾನಗರಗಳಿಗೆ ಗುಳೆ ಹೊರಟ ಜನ

    ಹಟ್ಟಿಚಿನ್ನದಗಣಿ: ಶಾಶ್ವತ ಬರಪೀಡಿತ ಎಂಬ ಹಣೆ ಪಟ್ಟಿ ಹೊತ್ತ ಹಟ್ಟಿ ಸುತ್ತಲಿನ ಹಳ್ಳಿಗಳ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಗ್ರಾಮಗಳು, ದೊಡ್ಡಿಗಳಲ್ಲಿ ಜನರಿಲ್ಲದೆ ಮನೆಗಳಿಗೆ ಬೀಗ, ಮುಳ್ಳಿನ ಬೇಲಿ ಹಾಕಿರುವುದು ಕಂಡುಬರುತ್ತಿದೆ.

    ಇದನ್ನೂ ಓದಿ: ಉದ್ಯೋಗ ಖಾತ್ರಿ ಸಮರ್ಪಕ ಜಾರಿ ಮಾಡಿ: ಕೂಲಿಕಾರ್ಮಿಕ ಸಂಘಟನೆ ಮನವಿ

    ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೂಲಿ ಕೆಲಸ ನೀಡುತ್ತಿಲ್ಲ. ಈ ಬಗ್ಗೆ ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದಾರೆ. ಖಾತ್ರಿ ಕೆಲಸಕ್ಕೆ ಯಂತ್ರೋಪಕರಣಗಳನ್ನು ಬಳಸುವುದು, ಕೆಲಸ ನಿರ್ವಹಿಸದೆ ಇದ್ದವರ ಹೆಸರಿನಲ್ಲಿ ಹಣ ಪಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಬರಗಾಲದ ಆರಂಭಿಕ ಹಂತ ಎನ್ನುವಂತೆ ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇದರಿಂದಾಗಿ ರಸ್ತೆ, ಸಂತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತಿಂದು, ಕೊಳಚೆ ನೀರನ್ನೆ ಕುಡಿಯುವಂತಾಗಿದೆ. ಜನರು ಕುಟುಂಬದ ನಿರ್ವಹಣೆಗೆ ಗುಳೆ ಹೋಗುತ್ತಿದ್ದಾರೆ.

    ಮಹಾನಗರಗಳಿಗೆ ಗುಳೆ ಹೊರಟ ಜನ

    ಉತ್ಪಾದನಾ ಚಟುವಟಿಕೆಗಳಿಗೆ ಅನುಕೂಲವಾಗುವ ಯಾವುದೇ ಯೋಜನೆಗಳು ಈ ಭಾಗದಲ್ಲಿ ಇಲ್ಲ. ಬರಗಾಲದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡುವ ಅವಧಿಯನ್ನು 150 ದಿನಗಳಿಗೆ ವಿಸ್ತರಿಸಬೇಕೆಂಬ ಆದೇಶವಿದ್ದರೂ ಜಾರಿಗೆ ಬಂದಿಲ್ಲ. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಜನರು ಪುಣೆ, ಬೆಂಗಳೂರು, ಮುಂಬೈ ಸೇರಿ ವಿವಿಧ ಮಹಾನಗರಗಳಿಗೆ ದುಡಿಯಲು ಹೋಗುತ್ತಿದ್ದಾರೆ.

    ನರೇಗಾ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಎತ್ತುವಳಿ ಮಾಡುವುದು ಪಂಚಾಯಿತಿ ಆಡಳಿತಕ್ಕೆ ಕರಗತವಾಗಿದೆ. ಕೂಲಿಕಾರರಿಗೆ ಸಮರ್ಪಕವಾಗಿ ಕೆಲಸ ನೀಡದಿರುವುದರಿಂದ ಬದುಕುವುದು ದುಸ್ತರವಾಗಿದೆ. ಅನಾವೃಷ್ಟಿಯಿಂದ ಹೊಲದಲ್ಲಿ ಬೆಳೆಯೂ ಬರುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಗುಳೆ ಹೋಗಬೇಕಾಗಿದೆ.
    ಗೌಡೂರು, ಬಂಡೇಬಾವಿ ಗ್ರಾಮ ವ್ಯಾಪ್ತಿ ದೊಡ್ಡಿಯ ನಿವಾಸಿಗಳು

    ನರೇಗಾ ಕ್ರಮಬದ್ಧ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು. ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೂಲಿ ಪಾವತಿಯಾಗಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು.
    ಅಮರೇಶ್ ಯಾದವ್
    ತಾ.ಪಂ. ಇಒ, ಲಿಂಗಸುಗೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts