More

    ಲಾಕ್​ಡೌನ್​ ಮಾಡಲೇ ಇಲ್ಲ, ಕಠಿಣ ನಿರ್ಬಂಧಗಳೂ ಇರಲಿಲ್ಲ; ಆದರೂ ಕರೊನಾಗೆ ಕಡಿವಾಣ ಹಾಕಿದ್ಹೇಗೆ?

    ಮನೌಸ್​: ನಾಲ್ಕು ತಿಂಗಳ ಹಿಂದೆ ಈ ಮಹಾನಗರ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿತ್ತು. ಕೋವಿಡ್​ನಿಂದ ಅದ್ಯಾವ ಮಟ್ಟಿಗೆ ಜನರು ಸಾವಿಗೀಡಾಗುತ್ತಿದ್ದರು ಎಂದರೆ, ಶವಗಳನ್ನು ಹೂಳೋದಕ್ಕೆ ಜಾಗವೇ ಇರಲಿಲ್ಲ. ಜೆಸಿಬಿಗಳಿಂದ ಗುಂಡಿ ತೋಡಿ ಮುಚ್ಚಿ ಹಾಕಲಾಗುತ್ತಿತ್ತು. ಶವಾಗಾರಗಳು ಸಾಲದೇ ಶೀತಲೀಕೃತ ವಾಹನಗಳಲ್ಲಿ ಶವಗಳನ್ನು ಇಡಲಾಗುತ್ತಿತ್ತು. ಆದರೆ, ಇಲ್ಲೀಗ ಭಾರಿ ಬದಲಾವಣೆಯಾಗಿದೆ.

    ಸದ್ಯ ಅಮೆರಿಕ ಬಿಟ್ಟರೆ, ಹೆಚ್ಚು ಕೋವಿಡ್​ ರೋಗಿಗಳಿರುವುದು ಹಾಗೂ ಸಾವು ಸಂಭವಿಸಿರುವುದು ಬ್ರೆಜಿಲ್​ನಲ್ಲಿ. ಇಲ್ಲಿನ ಅಮೆಜೋನಾಸ್​ ರಾಜ್ಯದ ರಾಜಧಾನಿ ಮನೌಸ್​ನಲ್ಲಿ ಕೋವಿಡ್​ ಅಟ್ಟಹಾಸವನ್ನೇ ಮೆರೆದಿತ್ತು. ನಾಲ್ಕು ತಿಂಗಳ ಬಳಿಕ ಇಲ್ಲಿನ ಪರಿಸ್ಥಿತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಈ ಮಹಾನಗರದಲ್ಲಿ ಹೊಸ ಕರೊನಾ ಸೋಂಕು ಪತ್ತೆಯಾಗುವ, ಕೋವಿಡ್​ನಿಂದ ಆಸ್ಪತ್ರೆ ಸೇರುವ ಹಾಗೂ ವೈರಸ್​ನಿಂದಾಗಿ ಸಾಯುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಕರೊನಾ ನಿಯಂತ್ರಣಕ್ಕೆ ಬಂದಿದೆ.

    ಇದನ್ನೂ ಓದಿ; ಒಝೋನ್​ ಅನಿಲದಿಂದ ನಿಗ್ರಹಿಸಬಹುದು ಕರೊನಾ ವೈರಸ್​; ಜಪಾನ್​ ತಜ್ಞರಿಂದ ಸಂಶೋಧನೆ 

    ಹಾಗಂತಾ ಭಾರಿ ಇಲ್ಲಿ ಕಟ್ಟುನಿಟ್ಟಿನ ಕ್ರಮ, ಲಾಕ್​​ಡೌನ್​ ಕೈಗೊಂಡಿದ್ದಾರೆ ಎಂದೇನಲ್ಲ…! ಆದರೆ, ರೋಗದ ವಿರುದ್ಧ ಜನರಲ್ಲಿ ಸಾಮುದಾಯಿಕ ಪ್ರತಿರೋಧಕ ಶಕ್ತಿ (ಹರ್ಡ್​ ಇಮ್ಯೂನಿಟಿ) ಉಂಟಾಗಿದೆ. ನೈಸರ್ಗಿಕವಾಗಿಯೇ ತಹಬಂಧಿಗೆ ಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ದಟ್ಟ ಮಳೆಕಾಡಿನ ನಡುವೆ ಇರುವ ಈ ನಗರ ಕೋವಿಡ್​ನಿಂದಾಗಿ ಅಕ್ಷರಶಃ ಭೂತದ ನಗರವಾಗಿ ಮಾರ್ಪಾಡಾಗಿತ್ತು. ಅಮೆಜೋನಾಸ್​ನಲ್ಲಿ 18 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ರಾಜ್ಯದಲ್ಲಿ 1.16 ಲಕ್ಷ ಜನರು ಸೋಂಕಿತರಿದ್ದರೆ, 3,500ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಬ್ರೆಜಿಲ್​ನ ಸಾವೋಪೌಲೋದಲ್ಲಿ ಸೋಂಕಿತರ ಸಂಖ್ಯೆ 7.60 ಲಕ್ಷ ದಾಟಿದೆ.

    ಯುರೋಪ್​ನ ಇತರ ನಗರಗಳಂತೆ ಇಲ್ಲಿ ಲಾಕ್​​ಡೌನ್​ ಇರಲಿಲ್ಲ. ವ್ಯಕ್ತಿಗತ ಅಂತರ ಅಥವಾ ಫೇಸ್​ ಮಾಸ್ಕ್​ಗಳನ್ನು ಕಡ್ಡಾಯಗೊಳಿಸಿರಲಿಲ್ಲ. ಜೀವ ಉಳಿಸಿದರೂ ಆರ್ಥಿಕತೆಯನ್ನು ಹಳಿ ತಪ್ಪಿಸಿದ ಇಂಥ ಕ್ರಮಗಳಿಗೆ ಬ್ರೆಜಿಲ್​ ಅಧ್ಯಕ್ಷರು ಕೂಡ ವಿರೋಧವಾಗಿದ್ದರು.  ಕೋವಿಡ್​ ಉತ್ತುಂಗಕ್ಕೆ ತಲುಪಿದಾಗ ಅದು ಅತ್ಯಂತ ಪ್ರಬಲವಾಗಿತ್ತು. ಹೀಗಾಗಿ ಸಮುದಾಯಿಕ ಪ್ರತಿರೋಧ ಶಕ್ತಿ ಉಂಟಾಗಿದೆ ಎಂದು ಪ್ಯಾನ್​ ಅಮೆರಿಕನ್​ ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕ ಜರ್ಬಾಸ್​ ಬರ್ಬೋಸಾ ಡಸಿಲ್ವಾ ಹೇಳಿದ್ದಾರೆ.

    ಇದನ್ನೂ ಓದಿ; ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ 

    ಆದರೆ, ಇದಕ್ಕಾಗಿ ಪಟ್ಟಣ ದೊಡ್ಡ ಬೆಲೆಯನ್ನು ತೆತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಪ್ರತಿ 500 ರೋಗಿಗಳಲ್ಲಿ ಒಬ್ಬ ಇಲ್ಲಿ ಮೃತಪಟ್ಟಿದ್ದಾನೆ. ಅಂದರೆ 3,500 ಜನ ಇಲ್ಲಿ ಸಾವೀಗೀಡಾಗಿದ್ದಾರೆ. ಬ್ರೆಜಿಲ್​ ಹಾಗೂ ಅಮೆರಿಕದಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ. ಅತಿ ಹೆಚ್ಚು ರೋಗಿಗಳು ಭಾರತದಲ್ಲಿ ಕಂಡುಬರುತ್ತಿದ್ದಾರೆ.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts