More

    ಕೇರಳದಲ್ಲಿ ಕಳೆದುಕೊಂಡಿದ್ದ ಏರ್​ಪಾಡ್ಸ್​ ಗೋವಾದಲ್ಲಿ ಪತ್ತೆ; ಹೇಗೆ ಸಾಧ್ಯ? ಎಂದ ನೆಟ್ಟಿಗರು

    ಪಣಜಿ: ಹಳೆ ಕಾಲದಲ್ಲಿ ಕಳೆದು ಹೋದ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸ್​ ಠಾಣೆ, ದೇವಸ್ಥಾನ, ಜೋತಿಷ್ಯಗಳ ಮೊರೆ ಹೋಗುತ್ತಿದ್ದರು. ಆದರೆ ಈಗಿನ ತಂತ್ರಜ್ಞಾನ ಯುಗದಲ್ಲಿ ಕಳೆದು ಹೋದ ವಸ್ತುಗಳನ್ನು ಹುಡುಕುವುದು ಅತೀ ಸುಲಭ.

    ಫೇಸ್​ಬುಕ್, ಇನ್​ಸ್ಟಾಗ್ರಾಮ್​​, ಎಕ್ಸ್​ನಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆ ವಸ್ತುವಿನ ಫೋಟೋ ಅದರ ವಿವರ ಬರೆದರೆ ಕ್ಷಣಾರ್ಧದಲ್ಲಿ ಆ ಮಾಹಿತಿ ಜನರಿಗೆ ತಲುಪುತ್ತದೆ. ಕಳೆದು ಹೋದ ವಸ್ತು ಇನ್ನೆಂದೂ ಸಿಗದು ಎಂಬ ನೋವಿನಲ್ಲಿ ದಿನಕಳೆಯುತ್ತಿರುವಾಗ ಒಂದು ದಿನ ಈ ವಸ್ತು ಸಿಕ್ಕರೆ ಆಗ ಆಗುವ ಅನುಭವ ಎಂತಹದ್ದು…? ಇದನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಇದೇ ಘಟನೆ ಇಲ್ಲಿ ಆಗಿದ್ದು ನೋಡಿ….

    ಮುಂಬೈ ಮೂಲದ ನಿಖಿಲ್​ ಜೈನ್​ ಎಂಬವರು ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಏರ್​ಪಾಡ್ಸ್​ಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದರು. ಇದಕ್ಕೆ ಸ್ಪಂದಿಸಿರುವ ಪೊಲೀಸರು ಕಳೆದುಹೋಗಿದ್ದ ಏರ್​ಪಾಡ್ಸ್​ಅನ್ನು ಪತ್ತೆ ಹಚ್ಚಿ ನಿಖಿಲ್​ ಜೈನ್​ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇರಳದಲ್ಲಿ ಕಳೆದುಕೊಂಡ ಏರ್​ಪಾಡ್ಸ್​ ​ಗೋವಾದಲ್ಲಿ ಪತ್ತೆ ಹಚ್ಚಿ ಮರಳಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ವ್ಯಕ್ತಿಯು ಪೊಲೀಸರ ಸಹಾಯದಿಂದ ಏರ್​ಪಾಡ್ಸ್​ ಪತ್ತೆ ಹಚ್ಚಿದ್ದಾರೆ. ಏರ್​ಪಾಡ್ಸ್​ ಟ್ರಾಕಿಂಗ್​ ಮಾಡುತ್ತಿದ್ದಾಗ ಗೋವಾದ ಮಾರ್ಗಾಂವ್​ ಪೊಲೀಸ್​ ಠಾಣೆಯಲ್ಲಿರುವುದು ಪತ್ತೆಯಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

    ಎರಡು ದಿನಗಳ ಹಿಂದೆ ಕೇರಳದಲ್ಲಿ ಏರ್​ಪಾಡ್ಸ್​ ಕಳೆದುಕೊಂಡಿದ್ದೇನೆ. ಅನಾಮಿಕ ವ್ಯಕ್ತಿಯೊಬ್ಬ ಗೋವಾದಲ್ಲಿ ಏರ್​ಪಾಡ್ಸ್​ನೊಂದಿಗೆ ಕಳೆದ ಎರಡು ದಿನಗಳಿಂದ ಸಂಚರಿಸುತ್ತಿದ್ದಾನೆ. ದಕ್ಷಿಣ ಗೋವಾದ ಸಾಲ್ಸೆಟೆಯ ಡಾ.ಅಲ್ವಾರೊ ಡಿ ಲೊಯೊಲಾ ಫುರ್ಟಾಡೊ ರಸ್ತೆಯಲ್ಲಿ ಆ ವ್ಯಕ್ತಿ ಸಂಚರಿಸುತ್ತಿದ್ದಾನೆ. ಏರ್​ಪಾಡ್ಸ್​ ಪಡೆಯಲು ಸಹಾಯ ಮಾಡಿ ಎಂದು ನಿಖಿಲ್​ ತಮ್ಮ ಎಕ್ಸ್​ ನಲ್ಲಿ ಬರೆದುಕೊಂಡಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts