More

    ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!

    ವಾಷಿಂಗ್ಟನ್​: ಅಪರಾಧವೇ ಮಾಡದವರಿಗೆ ಶಿಕ್ಷೆ ನೀಡುವುದು ದೊಡ್ಡ ಅಪರಾಧವೆನ್ನುತ್ತಾರೆ. ಅದೇ ರೀತಿ ಸರ್ಕಾರದ ತಪ್ಪಿನಿಂದಾಗಿ ಜೈಲು ವಾಸ ಅನುಭವಿಸಿದ ವ್ಯಕ್ತಿಯೊಬ್ಬ ಇದೀಗ ಕೋಟ್ಯಧಿಪತಿಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇದನ್ನೂ ಓದಿ: ಅಂತ್ಯಸಂಸ್ಕಾರ ಮಾಡಲು ಬಂದಿದ್ದವರ ಮೇಲೆ ಕುಸಿದ ಛಾವಣಿ! 18 ಮಂದಿ ದುರ್ಮರಣ

    ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಚೆಸ್ಟರ್ ಹಾಲ್ಮನ್ ಎಂಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಯಿತು. ಆದರೆ ಕೊಲೆ ನಡೆದ 28 ವರ್ಷಗಳ ನಂತರ ಕೊಲೆಯ ನಿಜಾಂಶ ಬಯಲಾಗಿದೆ. ಚೆಸ್ಟರ್​ ಅಪರಾಧಿಯಲ್ಲ ಎನ್ನುವುದು ಗೊತ್ತಾಗಿದೆ. ಸುಳ್ಳು ಸಾಕ್ಷಿ ಹೇಳಿಸಿ, ಆತನನ್ನು ಅಪರಾಧಿಯಾಗಿ ಮಾಡಿದ್ದಾಗಿ ದೃಢವಾಗಿದೆ.

    ಇದನ್ನೂ ಓದಿ: ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

    2019ರಲ್ಲಿ ಚೆಸ್ಟರ್​ ನಿರಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು. ಆದರೆ ತನ್ನ ತಪ್ಪಿಲ್ಲದಿದ್ದರೂ 28 ವರ್ಷ ಜೈಲಿನಲ್ಲಿಟ್ಟ ಸರ್ಕಾರದ ಮೇಲೆ ಚೆಸ್ಟರ್​ ದೂರಿದ್ದರು. ಚೆಸ್ಟರ್​ ಪ್ರಕರಣದಲ್ಲಿ ಸರ್ಕಾರ ತಪ್ಪಾಗಿ ವಿಚಾರಣೆ ನಡೆಸಿದೆ ಎಂದು ದೂರಲಾಗಿದ್ದು, ಅದಕ್ಕಾಗಿ 71.6 ಕೋಟಿ ರೂಪಾಯಿ ಪರಿಹಾರ ಹಣವನ್ನು ಆತನಿಗೆ ನೀಡುವಂತೆ ಅಲ್ಲಿನ ಮೇಯರ್​ ಆದೇಶ ಹೊರಡಿಸಿದ್ದಾರೆ. ಜೈಲು ವಾಸ ಅನುಭವಿಸಿ ಬಂದ ಚೆಸ್ಟರ್​ ಇದೀಗ ಕೋಟಿಗಳ ಒಡೆಯನಾಗಿದ್ದಾನೆ. (ಏಜೆನ್ಸೀಸ್​)

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    ಸಿವಿಲ್ ಆಸ್ಪತ್ರೆಯಲ್ಲೇ ಮಹಿಳೆಯ ಮರ್ಡರ್! ಪ್ರೀತಿಸಿ ಮೋಸ ಮಾಡಿದವಳ ಜೀವವನ್ನೇ ತೆಗೆದ ಪಾಗಲ್​ ಪ್ರೇಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts