More

    ಹಣಕ್ಕಾಗಿ ಪಾಲಕರನ್ನು ದೊಣ್ಣೆಯಿಂದ ಥಳಿಸಿದ ಮಾದಕ ವ್ಯಸನಿಯ ಬಂಧನ

    ಬೆಂಗಳೂರು: ಪಾಲಕರಿಂದ ಹಣ ಪಡೆದು ಬದುಕುತ್ತಿದ್ದ ಮಾದಕ ವ್ಯಸನಿಯೊಬ್ಬ 3 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟು, ಹಣ ಕೊಡಲಿಲ್ಲ ಎಂದು ಪಾಲಕರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಜಯಮಹಲ್ ನಿವಾಸಿ ಶಮಿವುಲ್ಲಾ ಅಮಾನುಲ್ಲಾ (47) ಎಂಬಾತನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

    ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಮೇಜರ್ ಹುಸೇನ್ ಷಾ ಹಾಗೂ ನಜ್ಮಾ ದಂಪತಿಗೆ ಶಮಿವುಲ್ಲಾ ಮತ್ತು ಜುನೈದ್ ಷಾ ಎಂಬ ಇಬ್ಬರು ಮಕ್ಕಳಿದ್ದಾರೆ. ದೊಡ್ಡ ಮಗ ಜುನೈದ್ ಅಮೇರಿಕಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಎರಡನೇ ಮಗ ಶಮಿವುಲ್ಲಾ ಕೆಲಸವಿಲ್ಲದೇ ನಗರದಲ್ಲಿ ಪಾಲಕರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.

    ಇದನ್ನೂ ಓದಿ: ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

    ಶಮಿವುಲ್ಲಾ ಮಾದಕ ವಸ್ತುಗಳ ವ್ಯಸನಿಯಾಗಿದ್ದು, ಆತನ ಹುಚ್ಚಾಟಕ್ಕೆ ಹೆಂಡತಿ ಮಕ್ಕಳು ಆತನನ್ನು ತೊರೆದು ಹೋಗಿದ್ದಾರೆ. ಮಾದಕ ವಸ್ತುಗಳ ಚಟ ಬಿಡಿಸಲು ಪಾಲಕರು ಆತನನ್ನು ಇದುವರೆಗೆ 11 ರಿಹ್ಯಾಬಿಲಿಟೇಷನ್ ಸೆಂಟರ್‌ಗೆ ಸೇರಿಸಿದ್ದರೂ, ಶಮಿವುಲ್ಲಾ ಮಾದಕ ವಸ್ತುಗಳ ಚಟ ಬಿಟ್ಟಿರಲಿಲ್ಲ. ಕೆಲಸವಿಲ್ಲದ ಪುತ್ರನನ್ನು ವೃದ್ಧ ದಂಪತಿಯೇ ತಿಂಗಳಿಗೆ 20 ಸಾವಿರ ರೂಪಾಯಿ ಕೊಟ್ಟು ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಜೂ.1 ರಂದು ಪಾಲಕರ ಮನೆಗೆ ಬಂದ ಆರೋಪಿ, 3 ಲಕ್ಷ ರೂ. ಕೇಳಿದ್ದ. ಅಷ್ಟೊಂದು ಹಣವಿಲ್ಲ ಎಂದ ಪಾಲಕರು ತಮ್ಮ ಬಳಿ 1.5 ಲಕ್ಷ ರೂ. ಇದೆ ಎಂದು ಹೇಳಿ ಕೊಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಶಮಿವುಲ್ಲಾ, ಹಣ ಹಾಗೂ ಆಸ್ತಿ ಕೊಡುವಂತೆ ಪಾಲಕರೊಂದಿಗೆ ಜಗಳ ಮಾಡಿದ್ದಾನೆ. ಸಾಲದಕ್ಕೆ ತಾನು ತಂದಿದ್ದ ದೊಣ್ಣೆಯಿಂದ ಪಾಲಕರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ. ಪುತ್ರನಿಂದ ಹಲ್ಲೆಗೊಳಗಾಗಿ ನೊಂದ ದಂಪತಿ ಜೆ.ಸಿ.ನಗರ ಪೊಲೀಸರಿಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಮಿವುಲ್ಲಾನನ್ನು ಜೈಲಿಗಟ್ಟಿದ್ದಾರೆ.

    ‘ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್’ – ರಾಜಧಾನಿಯಲ್ಲಿ ಹೀಗೊಂದು ಅಭಿಯಾನ !

    ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts