More

    ‘ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್’ – ರಾಜಧಾನಿಯಲ್ಲಿ ಹೀಗೊಂದು ಅಭಿಯಾನ !

    ನವದೆಹಲಿ : ಮತ ಕೇಳಲು ಹೋಗುವ ರೀತಿಯಲ್ಲಿ ಜನರ ಮನೆಗಳಿಗೆ ತೆರಳಿ ಕರೊನಾ ಲಸಿಕೆ ಪಡೆಯಲು ಸ್ಲಾಟ್​ಗಳನ್ನು ಒದಗಿಸುವುದು. ನಂತರ ನಿಗದಿತ ಮತಗಟ್ಟೆಗಳಲ್ಲೇ ಲಸಿಕೆ ನೀಡುವುದು – ಇದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೊಸ ಯೋಜನೆ. ಇದಕ್ಕೆ ಅವರು ನೀಡಿರುವ ಹೆಸರು – ‘ಜಹಾ ವೋಟ್​, ವಹಾ ವ್ಯಾಕ್ಸಿನ್’ ಅರ್ಥಾತ್ ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್!

    ರಾಜಧಾನಿಯಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ ಎಷ್ಟೋ ಜನರು ಇನ್ನೂ ಲಸಿಕೆ ಪಡೆದಿಲ್ಲ. ಅಂಥ ಜನರಿಗೆ ಅನುಕೂಲವಾಗಲು ಮನೆಯ ಹತ್ತಿರವಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಲು ಪ್ರೇರೇಪಿಸಲಾಗುವುದು. ಲಸಿಕೆ ಸ್ಟಾಕ್​ ಲಭ್ಯವಿದ್ದಲ್ಲಿ ನಾಲ್ಕು ವಾರಗಳಲ್ಲಿ ಇಡೀ ದೆಹಲಿಯ 280 ವಾರ್ಡ್​ಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಪೂರೈಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ಇಂದಿನಿಂದ 70 ವಾರ್ಡ್​ಗಳಲ್ಲಿ ಬೂತ್​ ಮಟ್ಟದ ಅಧಿಕಾರಿಗಳ ತಂಡ ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಲು ಮನವೊಲಿಸಲಿದೆ ಎಂದಿರುವ ಕೇಜ್ರಿವಾಲ್, ದೆಹಲಿಯಲ್ಲಿ 45 ವರ್ಷ ಮೇಲ್ಪಟ್ಟವರು 57 ಲಕ್ಷ ಜನರಿದ್ದಾರೆ. ಅವರಲ್ಲಿ ಈಗಾಗಲೇ 27 ಲಕ್ಷ ಜನ ಮೊದಲನೇ ಡೋಸ್​ ಪಡೆದಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)

    ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ

    VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts