More

    ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ

    ಬೆಂಗಳೂರು : ಅಂತರಾಷ್ಟ್ರೀಯ ಮಾದಕ ವಸ್ತು ಸರಬರಾಜು ಜಾಲವೊಂದನ್ನು ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾದಕ ಪದಾರ್ಥವಾದ ಹ್ಯಾಶಿಶ್​ ಆಯಿಲ್​ಅನ್ನು ಪರದೇಶಗಳಿಗೆ ಸಾಗಿಸುವ ಕೃತ್ಯದಲ್ಲಿ ತೊಡಗಿದ್ದ ಈರ್ವರನ್ನು ಬಂಧಿಸಿದ್ದಾರೆ.

    ಜೂನ್ 4 ರಂದು ಕತಾರ್​ಗೆ ಕಳಿಸಲಾಗುತ್ತಿದ್ದ ಮಾದಕ ವಸ್ತುಗಳನ್ನು ಕಾರ್ಯಾಚರಣೆ ನಡೆಸಿ ಎನ್.ಸಿ.ಬಿ. ಪತ್ತೆ ಹಚ್ಚಿತ್ತು. 13 ಬ್ಯಾಕ್ ಪ್ಯಾಕ್​ಗಳಲ್ಲಿ 1.2 ಕೆ.ಜಿ ಹ್ಯಾಶಿಶ್ ಆಯಿಲ್ಅನ್ನು ವಶಪಡಿಸಿಕೊಂಡಿತ್ತು. ತನಿಖೆ ಮುಂದುವರೆಸಿದ ಎನ್​ಸಿಬಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು. ಕತಾರ್, ಮಾಲ್ಡೀವ್ಸ್, ಶ್ರೀಲಂಕಾಗೆ ಮಾದಕ ವಸ್ತುಗಳ ಸರಬರಾಜು ಮಾಡುತ್ತಿದ್ದ ಆರ್.ಖಾನ್ ಹಾಗೂ ಎಸ್.ಹುಸೈನ್ ಬಂಧಿತರು.

    ಇದನ್ನೂ ಓದಿ: ದೇಶವನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ: ಜನತೆಯಲ್ಲಿ ತೀವ್ರ ಕುತೂಹಲ

    ಆರೋಪಿಗಳ ಬಳಿಯಿಂದ 2.6 ಕೆಜಿ ಹ್ಯಾಶಿಶ್ ಆಯಿಲ್ ಜಪ್ತಿಪಡಿಸಿಕೊಂಡಿದ್ದು, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮಾದಕ ಪದಾರ್ಥವನ್ನು ಕಾಸರಗೋಡಿನಿಂದ ಕತಾರ್​​ಗೆ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಈ ಜಾಲದ ಕಿಂಗ್​​ಪಿನ್​ಗಳನ್ನು 2019ರಲ್ಲಿ‌ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು.

    VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

    ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು

    ಅಮೆಜಾನ್ ವಿರುದ್ಧ ಕಾನೂನು ಕ್ರಮ : ಸಚಿವ ಅರವಿಂದ ಲಿಂಬಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts