More

  ಅಧ್ಯಕ್ಷರಾಗಿ ನಾಗೇಂದ್ರ ಪ್ರಸಾದ್ ಆಯ್ಕೆ

  ಮಡಿಕೇರಿ: ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಿ.ಆರ್.ನಾಗೇಂದ್ರ ಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೋಂತಿ ಗಣೇಶ್ ಆಯ್ಕೆಯಾಗಿದ್ದಾರೆ.


  ಕೋಶಾಧಿಕಾರಿಯಾಗಿ ಪೊನ್ನಿಮಾಡ ಎಸ್.ಸುರೇಶ್, ಉಪಾಧ್ಯಕ್ಷರುಗಳಾಗಿ ನವೀನ್ ಅಂಬೆಕಲ್, ಎ.ಎನ್.ರವಿಉತ್ತಪ್ಪ, ಕೆ.ಕೆ.ಸುನಿಲ್ ಮಾದಪ್ಪ, ಬಿ.ಟಿ.ತಿಮ್ಮ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಅರ್.ಪ್ರಮೋದ್, ಟಿ.ಅರ್.ಶರವಣ ಕುಮಾರ್, ಪ್ರಭಾಕರ ನೆಲ್ಲಿತ್ತಾಯ, ಶ್ರೀನಿವಾಸ ಕೆ.ಕೆ ಹಾಗೂ ಮಹೇಶ್ ಪೈ ಎನ್.ಎಂ ಅವರುಗಳು ನೇಮಕಗೊಂಡರು.


  ನಗರದ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


  ನೂತನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ವಾಣಿಜ್ಯೋದ್ಯಮಿಗಳು, ವರ್ತಕರು ಹಾಗೂ ಗ್ರಾಹಕರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಕೊಡಗು ಜಿಲ್ಲೆಯ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದ್ದೇವೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts