

ಬೆಂಗಳೂರು: ಇಲ್ಲೊಬ್ಬ ಭೂಪ, ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಂತ್ರಸ್ತರಿಂದಲೇ ಸಾಲ ಪಡೆದು ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆಂಧ್ರ ಮೂಲದ ಶ್ರೀನಿವಾಸುಲು ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ. ಈತ GEEK LEARN ಎಂಬ ಕೋಚಿಂಗ್ ಸಂಸ್ಥೆ ಕಟ್ಟಿ ಡಾಟಾ ಸೈನ್ಸ್ ಕೋರ್ಸ್ ಮಾಡಿಸುವ ನೆಪದಲ್ಲಿ ಮೋಸ ಮಾಡಿದ್ದಾನೆ. ಈತ ಪ್ರಮುಖವಾಗಿ 20 ರಿಂದ 25 ವಯಸ್ಸಿನ ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ವಂಚಿಸಿದ್ದಾನೆ.
ಈ ಶ್ರೀನಿವಾಸುಲು ಮೊದಲಿಗೆ ಉಚಿತ ಶಿಕ್ಷಣ ಕೊಡಿಸುವ ಹೆಸರಲ್ಲಿ ಅನೇಕ ಯುವಕ ಯುವತಿಯನ್ನು ಆಕರ್ಶಿಸಿ ತನ್ನ ಸಂಸ್ಥೆಗೆ ಸೇರಿಕೊಳ್ಳುವಂತೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರಲ್ಲಿ ಲೋನ್ ಪಡೆದುಕೊಂಡು "ನಾವೇ ಸಾಲವನ್ನು ಕಂತು ಕಂತಾಗಿ ತೀರಿಸುತ್ತೇವೆ" ಎಂದು ನಂಬಿಸುತ್ತಿದ್ದ. ನಂತರ ಕೋರ್ಸ್ಗೆ ಬೇಕಾದಂತಹ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಗಳಿಗೆ ಕೊಡಿಸುತ್ತಿದ್ದ. ಆದರೆ ಹಣವನ್ನು ಮಾತ್ರ ತನ್ನ ಖಾತೆಗೆ ವರ್ಗಾವಣೆ ಆಗುವಂತೆ ಮಾಡುತ್ತಿದ್ದ. ಕಡೆಗೆ ಸಾಲವನ್ನು ತೀರಿಸದೇ ಈತ ಒಟ್ಟು 18 ಕೋಟಿ ಗು ಹೆಚ್ಚು ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಉಚಿತ ಥಾಲಿಯ ಆಸೆಗೆ ಬಿದ್ದ ಮಹಿಳೆಗೆ 90,000 ರೂ. ವಂಚನೆ!
ಈ ಭೂಪ ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ಮಕ್ಕಳಿಂದ ಹಣ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.