More

    ವಿಶ್ವ ತಂಬಾಕುರಹಿತ ದಿನಾಚರಣೆ ಮರುದಿನವೇ ಅಕ್ರಮ ಗುಟ್ಕಾ ತಯಾರಿಕೆ ಅಡ್ಡೆ ಮೇಲೆ ದಾಳಿ!

    ಬೀದರ್: ನಿನ್ನೆ (ಮೇ31) ವಿಶ್ವ ತಂಬಾಕುರಹಿತ ದಿನಚರಣೆ ಆಚರಿಸಲ್ಪಟ್ಟಿದ್ದು ಇಂದು ಅಕ್ರಮವಾಗಿ ಗುಟ್ಕಾ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

    ಇದನ್ನೂ ಓದಿ: ತಂಬಾಕುವ್ಯಸನ ಬಿಡಲು ಮನಸ್ಸಿದ್ದರಷ್ಟೇ ಮಾರ್ಗ!; ಸುರುಳಿ ಹೊಗೆ, ಜಗಿದ ತಂಬಾಕು ಜೀವಕ್ಕೆ ಬತ್ತಿ

    ಅಕ್ರಮ ದಂಧೆಖೋರರ ನಿದ್ದೆಯನ್ನು ಪೊಲೀಸರು ಹಾಳು ಮಾಡಿದ್ದು ಬೀದರ್ ಜಿಲ್ಲಾ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಅಕ್ರಮ ತಡೆ ಬಗ್ಗೆ ನಿರಾಸಕ್ತಿ ತೋರಿದ ಓರ್ವ ಪಿಎಸ್ಐ ಹಾಗೂ ಇಬ್ಬರು ಪೊಲೀಸ್​ ಪೇದೆಗಳನ್ನು ಅಮಾನತು ಮಾಡಲಾಗಿದೆ! ಹುಮನಾಬಾದ ನಗರ ಠಾಣೆ ಪಿಎಸ್ ಐ ಮಂಜುನಾಥ ಗೌಡಾ ಅಮಾನತು ಹಾಗೂ ಸಿಪಿಐ ಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ.

    ವಿಶ್ವ ತಂಬಾಕುರಹಿತ ದಿನಾಚರಣೆ ಮರುದಿನವೇ ಅಕ್ರಮ ಗುಟ್ಕಾ ತಯಾರಿಕೆ ಅಡ್ಡೆ ಮೇಲೆ ದಾಳಿ!
    ಗುಟ್ಕಾ ತಯಾರಿಸಲು ಬಳಸುತ್ತಿದ್ದ ಯಂತ್ರ

    ಅಕ್ರಮ ಗುಟ್ಕಾ ತಯಾರಿಕೆ ಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ಗುಟ್ಕಾ ತಯಾರಿಸುವ 15 ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂದರ್ಭ 87 ಲಕ್ಷ ರೂ. ಮೌಲ್ಯದ ಗುಟ್ಕಾ ತಯಾರಿಕೆ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಈ ದಾಳಿಯಿಂದಾಗಿ ಅಕ್ರಮ ಗುಟ್ಕಾ ಪಾನ್​ಮಸಲಾ ತಯಾರಿಕೆ ಮಾಡುವ ದಂಧೆಖೋರರಿಗೆ ಬಿಸಿ ತಟ್ಟಿದ್ದು ಜತೆಗೆ ಅವರಿಗೆ ಸಾಥ್ ನೀಡುವವರಿಗೂ ಎಸ್ಪಿ ಬಿಸಿ ಮುಟ್ಟಿಸಿದ್ದಾರೆ.

    ಇದನ್ನೂ ಓದಿ: ತಂಬಾಕು ರಹಿತ ದಿನಾಚರಣೆ- ತಂಬಾಕು ಸೇವನೆಯಿಂದ ದೇಶದಲ್ಲಿ ವಾರ್ಷಿಕ 14 ಲಕ್ಷ ಸಾವು

    ಕೈಗಾರಿಕೆ ಪ್ರದೇಶದಲ್ಲಿ ಅಕ್ರಮ ಅಡ್ಡೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಎಸ್ಪಿ ಫುಲ್ ಅರ್ಲಟ್ ಆಗಿದ್ದು ಮಟ್ಕಾ, ಜೂಜು, ಗುಟ್ಕಾ ಮುಂತಾದ ದಂಧೆಗಳಲ್ಲಿ ತೊಡಗಿರುವ ಸಮಾಜ ಘಾತುಕರ ನಿದ್ದೆಯನ್ನು ಪೊಲೀಸರು ಹಾಳು ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts