More

    57ರ ಹರೆಯಕ್ಕೆ ಮದುವೆಯಾದ; ಮದುವೆಯ ದಿನವೇ ತೆರೆಯಿತು ಭಾಗ್ಯದ ಬಾಗಿಲು!

    ಇಂಗ್ಲೆಂಡ್​​: ಮದುವೆಗೆ ಒಂದು ವಯಸ್ಸಿನ ಮಿತಿಯನ್ನು ನಾವು ಕೊಟ್ಟುಕೊಂಡಿದ್ದೇವೆ. ಆದರೆ ವಯಸ್ಸು ಮೀರಿ, ವೃದ್ಧನೆನಿಸಿಕೊಳ್ಳುವ ವಯಸ್ಸಿನಲ್ಲಿ ಮದುವೆಯಾದ ವ್ಯಕ್ತಿಯೊಬ್ಬನಿಗೆ ಮದುವೆಯ ದಿನವೇ ಭಾಗ್ಯದ ಬಾಗಿಲು ತೆರೆದಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ.

    ಇದನ್ನೂ ಓದಿ: ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

    ಇಂಗ್ಲೆಂಡ್​ನ ವಿಡ್ನೆಸ್‌ ನಗರ ನಿವಾಸಿ, 57 ವರ್ಷದ ರಿಚರ್ಡ್ ಪರ್ಸೆಲ್ ಇತ್ತೀಚೆಗೆ ತಮ್ಮ ಸ್ನೇಹೊತೆ ವಿಕ್ಟೋರಿಯಾರೊಂದಿಗೆ ದಾಂಪತ್ಯ ಜೀವನವನ್ನು ಆರಂಭಿಸಿದರು. ಮದುವೆಯ ಸಿದ್ಧತೆಯಲ್ಲಿ ನಿರತವಾಗಿದ್ದ ರಿಚರ್ಡ್​ಗೆ ತಮ್ಮ ಮೊಬೈಲ್​ ನೋಡಲು ಸಮಯವೇ ಸಿಕ್ಕಿರಲಿಲ್ಲವಂತೆ. ಮದುವೆಯೆಲ್ಲ ಮುಗಿದು, ಸಂಭ್ರಮ ಕೊನೆಯಾದ ಮೇಲೆ ಅವರು ಮೊಬೈಲ್​ ನೋಡಿದ್ದಾರೆ. ಆಗ ಅವರಿಗೆ ದೊಡ್ಡದೊಂದು ಸಂತೋಷದ ಸಂಗತಿ ಕಾಣಿಸಿಕೊಂಡಿದೆ.

    ಮದುವೆಗೆ ಎರಡು ವಾರಗಳ ಹಿಂದೆ ರಿಚರ್ಡ್​ ಫುಟ್ಬಾಲ್​ ಆಟಕ್ಕೆ ಬೆಟ್​ ಕಟ್ಟಿದ್ದರು. ಅದರ ಆಟ ಅವರ ಮದುವೆಯ ದಿನದಂದೇ ಇತ್ತು. ರಿಚರ್ಡ್​ ಬೆಟ್​ ಕಟ್ಟಿದಂತೆಯೇ ಪಂದ್ಯ ಅಂತ್ಯವಾಗಿದ್ದು, ಅವರಿಗೆ 9.89 ಲಕ್ಷ ರೂಪಾಯಿ ಹಣ ಬಂದಿದೆ. ಆ ಹಣ ನೇರವಾಗಿ ರಿಚರ್ಡ್​ನ ಖಾತೆಗೆ ಜಮಾವಾಗಿದೆ. ಬಾಳಿಗೆ ಪತ್ನಿ ಬಂದ ಬೆನ್ನಲ್ಲೇ ರಿಚರ್ಡ್​ ಅವರ ಬ್ಯಾಂಕ್​ ಖಾತೆಗೂ ಹಣ ಬಂದಿದೆ.

    ಇದನ್ನೂ ಓದಿ: ಪಾಕ್​ನಲ್ಲಿ ಒಂದು ಮೊಟ್ಟೆಗೆ 30 ರೂ, ಒಂದು ಕೆ.ಜಿ ಚಿಕನ್​ಗೆ 300 ರೂ! ಗಗನಕ್ಕೇರಿತು ನಿತ್ಯ ಬಳಕೆ ವಸ್ತುಗಳ ದರ!

    ತಾನು ಬೆಟ್ಟಿಂಗ್​ನಲ್ಲಿ ಗೆದ್ದಿರುವ ವಿಚಾರ ತಿಳಿದು ಖುಷಿ ಪಟ್ಟ ರಿಚರ್ಡ್​, ತನ್ನ ಪತ್ನಿ ವಿಕ್ಟೋರಿಯಾಗೂ ಈ ವಿಚಾರವನ್ನು ತಿಳಿಸಿದ್ದಾರೆ. ಈ ವರ್ಷದ ಕ್ರಿಸ್​ಮಸ್​ನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರಂತೆ. (ಏಜೆನ್ಸೀಸ್​)

    ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

    ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts