More

    ಕೆಮ್ಮಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ, ಸ್ಕ್ಯಾನ್​ನಲ್ಲಿ ಪತ್ತೆಯಾಯ್ತು ನೂರಾರು ಹುಳುಗಳು!

    ಬ್ರೆಜಿಲ್​: ನಮ್ಮೆಲ್ಲರಿಗೂ ಕೆಮ್ಮು, ಶೀತ, ಜ್ವರ ಕಾಡುವುದು ಸಹಜ. ಆದರೆ ವಿಪರೀತ ಕೆಮ್ಮು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ದೇಹದಲ್ಲಿ ನೂರಾರು ಹುಳುಗಳು ಪತ್ತೆಯಾದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಇದಕ್ಕೆ ಸಾಕ್ಷಿ ಎನಿಸುವಂತಹ ಸ್ಕ್ಯಾನ್‌ಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಇದನ್ನೂ ಓದಿ: ಅರಣ್ಯಾಧಿಕಾರಿಗಳ ಎದುರು ಮಹಿಳೆ ಆತ್ಮಹತ್ಯೆ ಯತ್ನ

    ಬ್ರೆಜಿಲ್‌ನ ಸಾವೊ ಪಾಲೊದಲ್ಲಿರುವ ಬೊಟುಕಾಟು ಆಸ್ಪತ್ರೆಯ ಡಾ.ವಿಟರ್ ಬೋರಿನ್, ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಪರೀಕ್ಷಿಸಿದಾಗ ಆತ ಸಿಸ್ಟಿಸರ್ಕೋಸಿಸ್ ಎಂಬ ಅಂಗಾಂಶದ ಸೋಂಕಿನಿಂದ ಬಳಲುತ್ತಿರುವುದು ತಿಳಿದು ಬಂತು. ಹಾಗಾಗಿ ಈತನ ದೇಹದ ಪ್ರಮುಖ ಅಂಗಗಳನ್ನು ಸಂಪೂರ್ಣ ಸ್ಕ್ಯಾನ್ ಮಾಡಿದಾಗ, ಸ್ಕ್ಯಾನಿಂಗ್​ ವರದಿ ಅಸ್ಪಷ್ಟವಾಗಿತ್ತು.

    ಕೊನೆಗೆ ಆ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆತನ ಮೆದುಳು, ಎದೆ ಮತ್ತು ಶ್ವಾಸಕೋಶದಲ್ಲಿ 700 ಚಿಕ್ಕ ಚಿಕ್ಕ ಹುಳುಗಳನ್ನು ಕಂಡು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಶಾಕ್​ಗೆ ಒಳಗಾಗಿದ್ದರು.

    ಒಬ್ಬ ವ್ಯಕ್ತಿಯು ಜಂತುಹುಳದ ಮೊಟ್ಟೆಗಳನ್ನು ನುಂಗಿದ ನಂತರ, ಅಥವಾ ಜಂತುಹುಳು ಮೊಟ್ಟೆಯನ್ನು ಹೊಂದಿರುವ ಕಲುಷಿತ ನೀರಿನ ಸೇವನೆ ಅಥವಾ ಹಸಿಬಿಸಿಯಾಗಿ ಬೇಯಿಸಿದ ಹಂದಿ ಮಾಂಸ ತಿನ್ನುವುದರಿಂದ ಸಿಸ್ಟಿಸರ್ಕೋಸಿಸ್ ರೋಗ ಉಂಟಾಗಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts