More

    ಕರೊನಾ ಲಸಿಕೆ ಎರಡನೇ ಡೋಸ್​ ನಂತರ ವ್ಯಕ್ತಿ ಸಾವು

    ಮುಂಬೈ: ಕರೊನಾ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಸ್ವಲ್ಪ ಸಮಯದಲ್ಲೇ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ. ರಾಜ್ಯದ ಭೀವಂಡಿ ಪಟ್ಟಣದಲ್ಲಿ ಕಣ್ಣಿನ ವೈದ್ಯರ ವಾಹನಚಾಲಕನಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ಸುಖದೇವ್ ಕಿರ್ದಟ್ ಎಂಬುವವರು ಮೃತ ವ್ಯಕ್ತಿ.

    ಆರೋಗ್ಯ ಕಾರ್ಯಕರ್ತನಾಗಿ ಜನವರಿ 28 ರಂದು ಕಿರ್ದಟ್ ಕರೊನಾ ಲಸಿಕೆಯ ಮೊದಲನೇ ಡೋಸ್ ಪಡೆದುಕೊಂಡಿದ್ದರು. ಮಂಗಳವಾರ ನಿಗದಿತ ಎರಡನೇ ಡೋಸ್ ತೆಗೆದುಕೊಂಡರು. 15 ನಿಮಿಷಗಳ ಕಾಲ ವೀಕ್ಷಣಾ ಕೊಠಡಿಯಲ್ಲಿ ಕುಳಿತಿದ್ದ ಅವರು, ತಲೆ ಸುತ್ತಿದ ಹಾಗಾಗಿ ಮೂರ್ಛೆ ಹೋದರು. ತಕ್ಷಣ ಅವರನ್ನು ಸಮೀಪದ ಇಂದಿರಾ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಲ್ಲಿ ವೈದ್ಯರು ಅವರು ಮೃತರೆಂದು ಘೋಷಿಸಿದರು ಎನ್ನಲಾಗಿದೆ.

    ಇದನ್ನೂ ಓದಿ: 2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    “ಒಂದು ತಿಂಗಳ ಹಿಂದೆ ಅವರು ಮೊದಲನೇ ಡೋಸ್ ತೆಗೆದುಕೊಂಡಿದ್ದರು. ಆಗ ಏನೂ ಸಮಸ್ಯೆ ಆಗಿರಲಿಲ್ಲ. ಈ ಡೋಸ್ ಕೊಡುವ ಮುಂಚೆ ಪೂರ್ತಿ ಚೆಕ್​ಅಪ್ ಮಾಡಲಾಗಿತ್ತು. ಅವರಿಗೆ ಹಲವು ವರ್ಷಗಳಿಂದ ಬಿಪಿ ಇದ್ದು, ಕಾಲಿನಲ್ಲಿ ಊತ ಉಂಟಾಗುತ್ತಿತ್ತು ಎಂದು ತಿಳಿದುಬಂದಿತು. ಆದರೆ, ಇಲ್ಲಿ ಪರೀಕ್ಷಿಸಿದಾಗ ಅವರ ಬಿಪಿ ಮತ್ತು ಆಕ್ಸಿಜನ್ ಎರಡೂ ನಾರ್ಮಲ್​ ಆಗಿದ್ದವು” ಎಂದು ಲಸಿಕಾ ಕೇಂದ್ರದ ವೈದ್ಯರಾದ ಡಾ.ಕೆ.ಆರ್.ಖಾರಟ್ ಹೇಳಿದ್ದಾರೆ.

    ಇಬ್ಬರು ಮಕ್ಕಳ ತಂದೆಯಾದ ಕಿರ್ದಟ್​​ನ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. “ಸಾವು ಏಕಾಯಿತು ಎಂದು ಈಗಲೇ ಹೇಳುವುದು ಕಷ್ಟ. ಮರಣೋತ್ತರ ಪರೀಕ್ಷೆಯ ನಂತರ ವಿಚಾರ ಸ್ಪಷ್ಟವಾಗಲಿದೆ” ಎಂದು ಡಾ.ಖಾರಟ್ ಹೇಳಿದ್ದಾರೆ.

    ಇದನ್ನೂ ಓದಿ: 1983ರ ಕ್ರಿಕೆಟ್ ವಿಶ್ವಕಪ್ ಹೀರೋಗಳಿಗೆ ಕರೊನಾ ಲಸಿಕೆ

    ಕರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಆರಂಭವಾಗಿದ್ದು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರೊಂದಿಗೆ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು ಕೋಮಾರ್ಬಿಡಿಟೀಸ್ ಹೊಂದಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಮಂಗಳವಾರದಂದು, ಮಹಾರಾಷ್ಟ್ರದಲ್ಲಿ ಒಟ್ಟು 33,044 ಜನರಿಗೆ ಕರೊನಾ ಲಸಿಕೆ ನೀಡಲಾಯಿತು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್​ವೇ ಪ್ರೀತಿಯ ಪ್ರಸಂಗ

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts