More

    25ನೇ ವರ್ಷದ ಬರ್ತ್​ ಡೇಗೆ 25 ಕೇಕ್​ಗಳನ್ನು ಕಟ್​ ಮಾಡಿದವನ ಬಂಧನ…!

    ಮುಂಬೈ: ತನಗೆ 25 ವರ್ಷವಾಯಿತು ಎಂದು ಒಟ್ಟು 25 ಕೇಕ್​​ಗಳನ್ನು ಕಟ್​ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಇವನೊಂದಿಗೆ ಇನ್ನೂ ಇಬ್ಬರನ್ನೂ ಬಂಧಿಸಿದ್ದಾರೆ.

    ಅಯ್ಯೋ, ಕೇಕ್​ ಕತ್ತರಿಸಿದರೆ ಬಂಧನವಾ? ಎಂದು ಗೊಂದಲ ಬೇಡ. ಪೊಲಿಸರು ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಲು ಬಲವಾದ ಕಾರಣ ಇದೆ. ಈ ಮೂವರೂ ಲಾಕ್​ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.

    ಮುಂಬೈನಲ್ಲಿ ಘಟನೆ ನಡೆದಿದೆ. ಸರ್ಕಾರ ಹೇರಿರುವ ಲಾಕ್​ಡೌನ್​ ಮೀರಿ ಹಲವರು ಗುಂಪುಗೂಡಿ ಬರ್ತ್​ ಡೇ ಪಾರ್ಟಿ ಆಚರಿಸಿದ್ದಾರೆ.
    ಬಾಂದ್ರಾದ ನಿವಾಸಿ ಹ್ಯಾರಿಸ್ ಖಾನ್​ ಎಂಬಾತ ತನ್ನ 25 ನೇ ವರ್ಷದ ಬರ್ತ್​ ಡೇಯನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ನಿರ್ಧರಿಸಿ, 25 ಕೇಕ್​ಗಳನ್ನು ರೆಡಿ ಮಾಡಿಸಿದ್ದ. ತಮ್ಮ ಮನೆಯ ಟೆರೇಸ್​ ಮೇಲೆಯೇ ಭರ್ಜರಿ ಪಾರ್ಟಿಯನ್ನೂ ಆಯೋಜಿಸಿದ್ದ. ಅದಕ್ಕಾಗಿ ಅತಿಥಿಗಳು, ಸ್ನೇಹಿತರನ್ನೂ ಆಹ್ವಾನಿಸಿದ್ದ. ಅಂತೆಯೇ ಪಾರ್ಟಿಯಲ್ಲಿ 25 ಮಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಸಭ್ಯ ಸಂದೇಶಗಳಿಂದ ಬೇಸತ್ತು ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದ ನಟಿ ಮಾನಸಿ ಜೋಶಿ

    ಅಲ್ಲಿ ನೆರೆದಿದ್ದವರು ಮಾಸ್ಕ್​ ಧರಿಸಿರಲಿಲ್ಲ. ಹಾಗೇ ಸಾಮಾಜಿಕ ಅಂತರ ನಿಯಮವೂ ಪಾಲನೆಯಾಗಿರಲಿಲ್ಲ. ಮತ್ತೂ ಒಂದು ಅಪರಾಧವೆಂದರೆ ಹ್ಯಾರಿಸ್​, 25 ಕೇಕ್​ಗಳನ್ನು ತಲ್ವಾರ್​ನಿಂದ ಕತ್ತರಿಸಿದ್ದ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಅದನ್ನು ನೋಡಿದ ಪೊಲೀಸರು ಹ್ಯಾರಿಸ್​ ಮತ್ತು ಅಲ್ಲಿ ನೆರೆದಿದ್ದ ಎಲ್ಲರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಅವರಲ್ಲಿ ಹ್ಯಾರಿಸ್ ಸೇರಿ ಮೂವರನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)

    ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts