More

    ಮಾರಿದ್ದ ಸೈಟ್‌ಗೆ ಬದಲಿಯಾಗಿ ಬಿಡಿಎನಿಂದಲೇ ಮತ್ತೆ ನಿವೇಶನ ಪಡೆದ ಭೂಪ!

    ಬೆಂಗಳೂರು: ತಂದೆ ಮಾರಾಟ ಮಾಡಿದ್ದ ಸೈಟ್‌ನ ದಾಖಲೆ ಕಳೆದು ಹೋಗಿವೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟು ಬಿಡಿಎ ಕಡೆಯಿಂದ ಬದಲಿ ನಿವೇಶನ ಪಡೆದಿದ್ದ ಪುತ್ರನ ಕರಾಮತ್ತು ಬಿಡಿಎ ವಿಚಕ್ಷಣ ದಳದ ತನಿಖೆಯಿಂದ ಬೆಳಕಿಗೆ ಬಂದಿದೆ.

    ಬಿಡಿಎ ವಿಚಕ್ಷಣ ದಳದ ಇನ್‌ಸ್ಪೆಕ್ಟರ್ ವಿ.ಟಿ. ಶ್ರೀನಿವಾಸ್ ಈ ಕುರಿತು ದೂರು ನೀಡಿದ್ದಾರೆ. ಅದರ ಅನ್ವಯ ಆರೋಪಿ, ಕೆಂಗೇರಿ ಉಪನಗರದ ಎಸ್. ಕಾಳಿದಾಸ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಶೇಷಾದ್ರಿಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಬಿಡಿಎಯಿಂದ ಕಾಳಿದಾಸನ ತಂದೆ ಎಂ.ರಂಗಸ್ವಾಮಿ ಎಂಬಾತನಿಗೆ ಕೆಂಗೇರಿ ಉಪನಗರದಲ್ಲಿ 30*40 ಅಡಿ ಅಳತೆಯ ಸೈಟು ಹಂಚಿಕೆಯಾಗಿತ್ತು. ಕೆಲವೇ ದಿನಕ್ಕೆ ಸೈಟನ್ನು ಎನ್.ಆರ್. ಮೀನಾ ಎಂಬುವರಿಗೆ ರಂಗನಾಥ್ ಮಾರಾಟ ಮಾಡಿದ್ದರು. ಈ ವಿಷಯ ಕಾಳಿದಾಸಗೂ ತಿಳಿದಿತ್ತು.

    ಆದರೂ ವಿಷಯ ಮರೆಮಾಚಿದ ಕಾಳಿದಾಸ, ತಂದೆ ನಿಧನಗೊಂಡ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ತಂದೆಗೆ ಬಿಡಿಎಯಿಂದ ಹಂಚಿಕೆಯಾಗಿದ್ದ ಸೈಟಿನ ದಾಖಲೆಗಳು ಕಳೆದು ಹೋಗಿವೆ ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಪೊಲೀಸರಿಂದ ಸ್ವೀಕೃತಿ ಪಡೆದು ಮತ್ತು ಕೆಲವು ದಾಖಲೆಗಳನ್ನು ಸೃಷ್ಟಿಸಿಕೊಂಡು ಅಸಲಿ ಎಂದು ನಂಬಿಸಿ ಬಿಡಿಎಗೆ ಸಲ್ಲಿಸಿ ಸುಳ್ಳು ಮಾಹಿತಿ ಕೊಟ್ಟು ಮತ್ತೆ ಪ್ರಾಧಿಕಾರದಿಂದ ತಂದೆ ಬದಲಿಗೆ ತನ್ನ ಹೆಸರಿಗೆ ಸೈಟಿನ ದಾಖಲೆಗಳನ್ನು ಪಡೆದುಕೊಂಡಿದ್ದ.

    ಇದಾದ ಮೇಲೆ ಸೈಟು ಇಲ್ಲದ ಕಾರಣ ಬದಲಿ ನಿವೇಶನ ಕೊಡುವಂತೆ ಮತ್ತೆ ಅರ್ಜಿ ಸಲ್ಲಿಸಿ ಕೋರಮಂಗಲದ ಎಸ್.ಟಿ.ಬೆಡ್‌ನಲ್ಲಿ ಬದಲಿ ಸೈಟನ್ನು ಪಡೆದು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾನೆ. ಈ ಮೂಲಕ ಕ್ರಯ ಪತ್ರದ ಮೂಲಕ ಸೈಟ್ ಪಡೆದಿರುವ ಎನ್.ಆರ್. ಮೀನಾ ಮತ್ತು ಬಿಡಿಎಗೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಶ್ರೀನಿವಾಸ್ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts