More

    ಕೇಂದ್ರ ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟ ಸಿಎಂ ಮಮತಾ ಬ್ಯಾನರ್ಜಿ

    ಕೋಲ್ಕತ್ತ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಪಿಎಂ ಗರೀಬ್​ ಕಲ್ಯಾಣ್​ ಯೋಜನೆಯಡಿ ಬಡ ಜನರಿಗೆ ನವೆಂಬರ್​ವರೆಗೂ ಉಚಿತ ರೇಷನ್​ ಕೊಡುವುದಾಗಿ ಘೋಷಿಸಿದ್ದಾರೆ.

    ಕರೊನಾ ವೈರಸ್​ ದಿನೇದಿನೆ ಹೆಚ್ಚುತ್ತಿರುವುದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಅದೆಷ್ಟೋ ಜನರ ಜೀವನ ನಡೆಯುವುದು ತುಂಬ ಕಷ್ಟವಾಗುತ್ತಿದೆ ಎಂದು ಹೇಳಿದ ಪ್ರಧಾನಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್​ ಯೋಜನೆಯಡಿ ಬರುವ ಸುಮಾರು 80 ಕೋಟಿ ಬಡಜನರಿಗೆ 2020ರ ನವೆಂಬರ್​ವರೆಗೂ ಉಚಿತ ರೇಷನ್​ ನೀಡಲಾಗುತ್ತದೆ ಎಂದಿದ್ದಾರೆ.

    ಆದರೆ ಮೋದಿಯವರು ಹೀಗೆ ಘೋಷಣೆ ಮಾಡಿದ ಕೆಲವೇ ಹೊತ್ತಲ್ಲಿ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ರಾಜ್ಯದಲ್ಲಿ ನಾವು 2021ರ ಜೂನ್​ವರೆಗೂ ಬಡಜನರಿಗೆ ಉಚಿತ ರೇಷನ್​ ಕೊಡುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್​​​ನಿಂದ 38 ಭಾರತೀಯ ಅಧಿಕಾರಿಗಳು ವಾಪಸ್; ಬಸ್​, ಟ್ರಕ್​​ನಲ್ಲಿ ಗಡಿ ತಲುಪಿದ ಸಿಬ್ಬಂದಿ

    ಪಶ್ಚಿಮ ಬಂಗಾಳದಲ್ಲಿ ಶೇ.60ರಷ್ಟು ಜನ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯಡಿ ಒಳಪಟ್ಟವರು. ಇಂದು ಅವರಿಗೆ ಅಕ್ಕಿ, ಬೇಳೆ ಸಿಗುತ್ತದೆ. ಆದರೆ ಅವಧಿ ಮುಗಿದ ಮೇಲೆ ಅವರಿಗೆ ಏನೂ ಸಿಗುವುದಿಲ್ಲ. ಆದರೆ ನಾನು 2021ರ ಜೂನ್​ವರೆಗೂ ಬಡಜನರಿಗೆ ಉಚಿತ ರೇಷನ್​ ಕೊಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಬಡವರಿಗೆ ಅಷ್ಟೇ ಅಲ್ಲ. ದೇಶದ 130 ಕೋಟಿ ಜನರಿಗೂ ಉಚಿತ ಅಕ್ಕಿ, ಬೇಳೆ ಕೊಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಟಿಕ್‌ಟಾಕ್‌ ಮಾಡಿ ಲಕ್ಷ ಗೆಲ್ಲಿ! ಡಿಕೆಶಿ ಪರ ನಲ್‌ಪಾಡ್‌ ಘೋಷಣೆ- ನೆಟ್ಟಿಗರ ಆಕ್ರೋಶ

    ಇದೇ ಹೊತ್ತಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಚೀನಾಕ್ಕೆ ಕಟುವಾದ ಉತ್ತರವನ್ನು ಭಾರತ ಕೊಡಬೇಕು. ಈ ಬಿಕ್ಕಟ್ಟಿನ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್​)

    ಪೊಲೀಸ್​ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts