More

    ಆಶಾಭಾವನೆ ಮೂಡಿಸುತ್ತಿರುವ ಪೂರ್ವ ಮುಂಗಾರು

    ಮೈಸೂರು: ತಾಪಮಾನ ಏರಿಕೆ ಹಾಗೂ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರು ಹಾಗೂ ರೈತಾಪಿ ವರ್ಗದವರಿಗೆ ಪೂರ್ವ ಮುಂಗಾರು ಆಶಾಭಾವನೆ ಮೂಡಿಸುತ್ತಿದ್ದು, ಜಿಲ್ಲೆಯಲ್ಲಿ ಮುಂದಿನ 4 ದಿನಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದ ತಾಪಮಾನ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಲು ಪ್ರಾರಂಭಗೊಂಡಿದೆ. ಮಾರ್ಚ್ 7 ರಂದು ಜಿಲ್ಲೆಯಲ್ಲಿ ಕನಿಷ್ಠ 22 ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮಂಗಳವಾರ ಜಿಲ್ಲೆಯಲ್ಲಿ ಕನಿಷ್ಠ 26 ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉಷ್ಣಾಂಶದ ಪ್ರಮಾಣ ಇಳಿಕೆಯಾಗುತ್ತಿರುವುದು ಹಾಗೂ ಮಳೆಯ ಮುನ್ಸೂಚನೆ ಇರುವುದು ಮಳೆಯು ಜಿಲ್ಲೆಯ ಜನರ ಮೊಗದಲ್ಲಿ ಸಂತಸ ಅರಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಮೇ 8 ಮತ್ತು 9 ರಂದು ತಲಾ 28 ಮಿ.ಮೀ., 10 ರಂದು 12 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 11 ರಂದು ಮಳೆಯ ಮುನ್ಸೂಚನೆ ಇಲ್ಲ.

    ತಾಲೂಕುವಾರು ವಿವರ:

    ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೇ 8 ರಂದು 8.8 ಮಿ.ಮೀ., 10 ರಂದು 5.9 ಮಿ.ಮೀ., ಹುಣಸೂರು ತಾಲೂಕಿನಲ್ಲಿ ಮೇ 8 ರಂದು 8.4, 10 ರಂದು 4 ಮಿ.ಮೀ., ಕೆ.ಆರ್. ನಗರ ತಾಲೂಕಿನಲ್ಲಿ ಮೇ 9 ರಂದು 9.9 ಮಿ.ಮೀ., 10 ರಂದು 4.5 ಮಿ.ಮೀ., ಮೈಸೂರು ತಾಲೂಕಿನಲ್ಲಿ ಮೇ 8 ರಂದು 12.8 ಮಿ.ಮೀ., 10 ರಂದು 9.3 ಮಿ.ಮೀ., ನಂಜನಗೂಡು ತಾಲೂಕಿನಲ್ಲಿ ಮೇ 8 ರಂದು 12.8 ಮಿ.ಮೀ., 10 ರಂದು 9.6 ಮಿ.ಮೀ. ಮಳೆಯಾಗುವ ಸಾದ್ಯತೆ ಇದೆ. ಈ ಮೇಲಿನ ಎಲ್ಲ ತಾಲೂಕುಗಳಲ್ಲಿ ಮೇ 9 ಮತ್ತು 11 ರಂದು ಮಳೆಯ ಮುನ್ಸೂಚನೆ ಇಲ್ಲ. ತಿ.ನರಸೀಪುರ ತಾಲೂಕಿನಲ್ಲಿ ಮೇ 8 ರಂದು 16.4 ಮಿ.ಮೀ., 9 ರಂದು 0.1 ಮಿ.ಮೀ., 10 ರಂದು 0.8 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 11 ರಂದು ಮಳೆಯ ಮುನ್ಸೂಚನೆ ಇಲ್ಲ.

    ರೈತರಿಗೆ ಸಲಹೆ:

    ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಮುನ್ನ ಅನುಸರಿಸಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

    ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಉಳುಮೆ ಕಾರ್ಯ ಕೈಗೊಂಡರೆ ಮಣ್ಣಿನಲ್ಲಿ ತೇವಾಂಶ ಸೇರಿಸಲು ಹಾಗೂ ಅದರ ರಚನೆ ಸುಧಾರಿಸಲು ಸಹಾಯ ಮಾಡುತ್ತದೆ. ಹವಾಮಾನವು ಸುಧಾರಿಸಿದ ನಂತರ ಬಿತ್ತನೆಗಾಗಿ ಬೀಜಗಳನ್ನು ಸಿದ್ಧಪಡಿಸಿಕೊಳ್ಳಬೇಕು. ತೇವಾಂಶ ಸಂಬಂಧಿತ ಹಾನಿ ತಡೆಗಟ್ಟಲು ಬೀಜಗಳನ್ನು ಒಣ ಮತ್ತು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಸಂಗ್ರಹಿಸಿಡಬೇಕು. ಉತ್ತಮ ಮೊಳೆಕೊಡೆಯುವ ಹಾಗೂ ಬೀಜಗಳನ್ನು ಖಚಿತಪಡಿಸಿಕೊಳ್ಳಬೇಕು.

    ಮಳೆ ಆರಂಭದೊಂದಿಗೆ ಕೀಟಗಳು ರೋಗ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗಾಗಿ ರೈತರು ತಮ್ಮ ಹೊಲಗಳಲ್ಲಿ ಕೀಟಗಳು ಮತ್ತು ರೋಗಗಳ ಚಿಹ್ನೆಗಳನ್ನು ಪೂರ್ವಭಾವಿಯಾಗಿ ಮೇಲ್ವಿಚಾರಣೆ ಮಾಡಬೇಕು ಹಾಗೂ ಅಗತ್ಯವಿರುವ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು. ಭಾರಿ ಮಳೆ ಹಾಗೂ ಸಂಭಾವ್ಯ ಮಳೆಯಿಂದ ಮಣ್ಣಿನ ಸವಕಳಿ ತಪ್ಪಿಸಲು ಕ್ರಮ ವಹಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಹಾಗೂ ಕಂದಕಗಳಲ್ಲಿ ಅಡೆತಡೆಗಳು ಇದ್ದರೆ ತೆರವುಗೊಳಿಸಬೇಕು. ಮಳೆಯಾದ ನಂತರ ಭೂ ಸವೆತ, ರೋಗ ಹರಡುವಿಕೆ ಕಂಡು ಬಂದರೆ ಸಮಸ್ಯೆಗಳನ್ನು ಪಹರಿಸಲು ಹಾಗೂ ಬೆಳೆಗಳಿಗೆ ಹೆಚ್ಚಿನ ಹಾನಿ ತಗ್ಗಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ರೈತರು ಬೆಳೆ ಆಯ್ಕೆ ಮಾಡುವ ಸಂದರ್ಭ ಮಳೆಗಾಲದ ಅವಧಿಯಲ್ಲಿ ಶೀಲಿಂದ್ರ ರೋಗಗಳಿಗೆ ಕಡಿಮೆ ಒಳಗಾಗುವ ಬೆಳೆಗಳನ್ನು ಆಯ್ಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts