More

    ಪ್ರೇಮಿಗಳ ದಿನದಂದು ‘ನನ್ನವನು’ ಎಂದು ಅರ್ಜುನ್ ಫೋಟೋ ಹಂಚಿಕೊಂಡ ನಟಿ ಮಲೈಕಾ!

    ಪ್ರೇಮಿಗಳ ದಿನ ಬಂತು ಅಂದರೆ ಸಾಕು ಅವರ ಪ್ರೇಮಿಯ ಜೊತೆಗೆ ಒಂದಾದರೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಜನ. ಹಾಗಾಗಿ, ಇಂದು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ನಟಿ ಮಲೈಕಾ ಜತೆ ನಟ ಅರ್ಜುನ್ ಕಪೂರ್ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಮತ್ತೊಂದೆಡೆ, ನಟಿ ಮಲೈಕಾ ಅವರು ಕೂಡಾ ಅರ್ಜುನ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದು, ಅದಕ್ಕೆ ನನ್ನವನುಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನು, ನಟಿ ಮಲೈಕಾ ಹಂಚಿಕೊಂಡ ಫೋಟೋಗೆ ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 5,000ಕ್ಕೂ ಹೆಚ್ಚು ಕಾಮೆಂಟ್​ಗಳು ಹರಿದುಬಂದಿವೆ.
    ಒಂದೇ ಫೋಟೋ ಮತ್ತು ಒಂದೇ ಪದದಲ್ಲಿ ತಮ್ಮ ಪ್ರೀತಿಯನ್ನು ವರ್ಣಿಸಿದ ನಟಿ ಮಲೈಕಾ ಅವರಿಗೆ ಅಭಿಮಾನಿಗಳು ಸೂಪರ್ ಎಂದಿದ್ದಾರೆ. ನಟ ಅರ್ಜುನ್ ಮತ್ತು ನಟಿ ಮಲೈಕಾ ಹಂಚಿಕೊಂಡಿರುವ ಈ ಎರಡು ಫೋಟೋಗಳು ಈ ಪ್ರೇಮಿಗಳ ದಿನದಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೌದು, ಈ ಜೋಡಿ ಏನೇ ಮಾಡಿದ್ರು ಸುದ್ದಿ ಆಗತ್ತದೆ. ಇದಕ್ಕೆ, ಕಾರಣ ಮಲೈಕಾ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದು, ಅರ್ಜುನ್ ಅವರಿಗಿಂತ ವಯಸ್ಸಿನಲ್ಲೂ 12 ವರ್ಷ ದೊಡ್ಡವರು. ಆರಂಭದಲ್ಲಿ ಈ ಜೋಡಿಯ ಪ್ರೀತಿಯನ್ನು ಟೀಕಿಸಿದವರೇ ಹೆಚ್ಚು. ಆದರೆ, ಈಗ ಈ ಜೋಡಿಯನ್ನು ಆಧರಿಸುವವರ ಸಂಖ್ಯೆ ಹೆಚ್ಚಾಗಿದೆ. 

    ಪ್ರೇಮಿಗಳ ದಿನದಂದು 'ನನ್ನವನು' ಎಂದು ಅರ್ಜುನ್ ಫೋಟೋ ಹಂಚಿಕೊಂಡ ನಟಿ ಮಲೈಕಾ! ಪ್ರೇಮಿಗಳ ದಿನದಂದು 'ನನ್ನವನು' ಎಂದು ಅರ್ಜುನ್ ಫೋಟೋ ಹಂಚಿಕೊಂಡ ನಟಿ ಮಲೈಕಾ!

    ಮಾಸ್​ ಮಹಾರಾಜನ ಜೊತೆ ಮಿಂಚಿದ ಶ್ರೀಲೀಲಾ: ಹೊಸ ಪೋಸ್ಟರ್ ವೈರಲ್…

    ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ?

    ಕವಿಯಾದ ರಕ್ಷಿತ್ ಶೆಟ್ಟಿ! ವೈರಲ್ ಟ್ವೀಟ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts