More

    ಐಶ್ವರ್ಯಾ ಮನೆ ಬಳಿಕ ನಟ ವಿಜಯ್​ ನಿವಾಸದಲ್ಲೂ ಕಳ್ಳತನ: ಮನೆಗೆಲಸದಾಕೆ ವಿರುದ್ಧ ದೂರು

    ಚೆನ್ನೈ: ತುಂಬಾ ನಂಬಿಕೆ ಇಟ್ಟಿದ್ದ ಮನೆಗೆಲಸದಾಕೆಯಿಂದಲೇ ನಟಿ ಐಶ್ವರ್ಯಾ ರಜಿನಿಕಾಂತ್​ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಘಟನೆ ತಮಿಳು ನಟ ಹಾಗೂ ಗಾಯಕ ವಿಜಯ್​ ಯೇಸುದಾಸ್​ ಮನೆಯಲ್ಲಿ ನಡೆದಿದೆ.

    ವಜ್ರಾಭರಣಗಳು ಸೇರಿದಂತೆ 60 ಸವರನ್​ ಆಭರಣಗಳನ್ನು ಕಳೆದುಕೊಂಡಿರುವುದಾಗಿ ಕಳೆದ ರಾತ್ರಿ ಅಭಿರಾಂಪುರಂ ಪೊಲೀಸ್​ ಠಾಣೆಯಲ್ಲಿ ವಿಜಯ್​ ಕುಟುಂಬ ದೂರು ದಾಖಲಿಸಿದೆ.

    ವಿಜಯ್​ ಅವರು ಚೆನ್ನೈನ ಅಭಿರಾಂಪುರಂನಲ್ಲಿರುವ ಮೂರನೇ ಬೀದಿಯಲ್ಲಿ ವಾಸವಿದ್ದಾರೆ. ಕಳ್ಳತನದಲ್ಲಿ ಮನೆಗೆಲಸದಾಕೆಯ ಕೈವಾಡ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಇದನ್ನೂ ಓದಿ: ಟೋಲ್ ದರ ಹೆಚ್ಚಳವಾಗಿದೆ..ಡಬಲ್ ಇಂಜಿನ್‌ ಸರ್ಕಾರದಲ್ಲಿ ಬಡವರಿಗೆ ರಸ್ತೆ ಇಲ್ಲ; ನಿಖಿಲ್ ಕುಮಾರಸ್ವಾಮಿ

    ಸೂಪರ್​ ಸ್ಟಾರ್​ ರಜಿನಿಕಾಂತ್​ ಪುತ್ರಿ ಐಶ್ವರ್ಯಾ ರಜನಿಕಾಂತ್​ ಮನೆಯಲ್ಲೂ ಇದೇ ರೀತಿಯಲ್ಲಿ ಇತ್ತೀಚೆಗಷ್ಟೇ ಕಳ್ಳತನ ನಡೆದಿದೆ. ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಈಶ್ವರಿ ಹಾಗೂ ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಕಾರು ಚಾಲಕ ವೆಂಕಟೇಶ್​ನನ್ನು ಈಗಾಗಲೇ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನೆಕ್ಲೇಸ್, ವಜ್ರಾಭರಣ ಸೇರಿದಂತೆ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಐಶ್ವರ್ಯಾ ಮನೆಯಲ್ಲಿ ಕಳ್ಳತನವಾಗಿದೆ. ಇದೇ ಸಮಯದಲ್ಲಿ ಐಶ್ವರ್ಯಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರಿ ಅವರ ಬ್ಯಾಂಕ್ ಖಾತೆಯಲ್ಲಿ ಲಕ್ಷಗಟ್ಟಲೆ ಹಣದ ವ್ಯವಹಾರ ನಡೆದಿರುವುದು ಪೊಲೀಸರಿಗೆ ತಿಳಿದುಬಂದಿತು.

    ಇದಾದ ಬಳಿಕ ಪೊಲೀಸರು ಮಂಟವೇಲಿ ಏರಿಯಾದಲ್ಲಿ ವಾಸವಿದ್ದ ಈಶ್ವರಿ ಮತ್ತು ಆಕೆಯ ಪತಿ ಅಂಗಮುತುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಐಶ್ವರ್ಯಾ ಮನೆಯಲ್ಲಿ 18 ವರ್ಷದಿಂದ ಕೆಲಸ ಮಾಡುತ್ತಿದ್ದೆ. ಚಿನ್ನಾಭರಣವನ್ನು ಎಲ್ಲಿಟ್ಟಿದ್ದಾರೆ ಮತ್ತು ಲಾಕರ್​ ಕೀ ಎಲ್ಲಿದೆ ಎಂಬುದು ನನಗೆ ತಿಳಿದಿತ್ತು. ಮೊದಲ ನಾನು ಲಾಕರ್​ನಲ್ಲಿ ಸ್ವಲ್ಪ ಆರಭರಣವನ್ನು ಕಳ್ಳತನ ಮಾಡಿದೆ. ಈ ವೇಳೆ ಐಶ್ವರ್ಯಾ ಮನೆಯಲ್ಲಿ ಯಾರು ಕೂಡ ಗಮನಿಸಲಿಲ್ಲ ಎಂದು ಈಶ್ವರಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.

    ಆಭರಣಗಳನ್ನು ಕದ್ದ ಬಳಿಕ ಚಾಲಕ ವೆಂಕಟೇಶನ್​ ಸಹಾಯದಿಂದ ಸ್ವಲ್ಪ ಸ್ವಲ್ಪವಾಗಿ ಸುಮಾರು 4 ವರ್ಷಗಳವರೆಗೆ ಲಾಕರ್​ನಲ್ಲಿದ್ದ ಎಲ್ಲ ಆಭರಣಗಳನ್ನು ಕಳ್ಳತನ ಮಾಡಿದೆ. ಇದೇ ಸಂದರ್ಭದಲ್ಲಿ ನಾನು ಯಾರಿಗೂ ಅನುಮಾನ ಬರಬಾರದು ಅಂತಾ ಬ್ಯಾಂಕ್​ ಲೋನ್​ ಪಡೆದುಕೊಂಡು ಚೋಳಿಂಗನಲ್ಲೂರಿನಲ್ಲಿ 95 ಲಕ್ಷ ರೂ.ಗೆ ಮನೆ ಖರೀದಿ ಮಾಡಿದೆ. ಎರಡೇ ವರ್ಷದಲ್ಲಿ ನಾನು ಬ್ಯಾಂಕ್​ ಸಾಲವನ್ನು ಮರು ಪಾವತಿ ಮಾಡಿದೆ. ಆರು ತಿಂಗಳ ಹಿಂದೆ ನಾನು ಕೆಲಸ ಬಿಟ್ಟಿದ್ದೆ ಎಂದಿರುವ ಈಶ್ವರಿ ಕಳ್ಳತನಕ್ಕೆ ಪ್ರೇರೇಪಿಸಿದ್ದು ಐಶ್ವರ್ಯಾ ಅವರೇ ಎಂದು ಸ್ಫೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ. 30 ಸಾವಿರ ರೂಪಾಯಿ ನೀಡುತ್ತಿದ್ದರೂ ಸಂಬಳ ಸಾಕಾಗದ ಕಾರಣ ಐಶ್ವರ್ಯಾ ಮನೆಯಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದೆ ಎಂದು ಈಶ್ವರಿ ಹೇಳಿದ್ದಾಳೆ.

    ಇದನ್ನೂ ಓದಿ: ಮಂಗಳೂರು ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ಚೆನ್ನೈನ ಮೈಲಾಪುರದಲ್ಲಿರುವ ಆಭರಣ ಮಳಿಗೆಯೊಂದರ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಈಶ್ವರಿ ಅಕ್ರಮವಾಗಿ ಮಾರಾಟ ಮಾಡಿದ್ದ ಐಶ್ವರ್ಯಾ ರಜನಿಕಾಂತ್ ಅವರ 100 ಚಿನ್ನಾಭರಣ ಮತ್ತು ವಜ್ರದ ಆಭರಣಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ನಾನು ಕಳ್ಳತನ ಮಾಡಲು ಐಶ್ವರ್ಯಾ ಕಾರಣ! ಪೊಲೀಸರ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೇವಕಿ

    1988ರ ಹಲ್ಲೆ ಪ್ರಕರಣ; ನವಜೋತ್​ ಸಿಂಗ್​ ಸಿಧು ನಾಳೆ ಜೈಲಿನಿಂದ ಬಿಡುಗಡೆ

    ಅಪ್ಪ ನನ್ನನ್ನು ಕ್ಷಮಿಸಿ… ಕ್ಷುಲ್ಲಕ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts