More

    ಟೋಲ್ ದರ ಹೆಚ್ಚಳವಾಗಿದೆ..ಡಬಲ್ ಇಂಜಿನ್‌ ಸರ್ಕಾರದಲ್ಲಿ ಬಡವರಿಗೆ ರಸ್ತೆ ಇಲ್ಲ; ನಿಖಿಲ್ ಕುಮಾರಸ್ವಾಮಿ

    ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ
    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಮತ್ತೆ ಏರಿಕೆಗೊಂಡಿದೆ. ಶನಿವಾರದಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ ಆಗಲಿದೆ. ಈ ಕುರಿತಾಗಿ ರಾಮನಗರದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ರಾಮನಗರದಲ್ಲಿ ಮಾತನಾಡಿದ ಅವರು, 17 ದಿನದ ನಂತರ ಮತ್ತೆ ಟೋಲ್ ದರ ಹೆಚ್ಚಳವಾಗಿದೆ. ಕೇಂದ್ರ – ರಾಜ್ಯ ಡಬಲ್ ಇಂಜಿನ್‌ ಸರ್ಕಾರದಲ್ಲಿ ಬಡವರಿಗೆ ಈ ರಸ್ತೆ ಇಲ್ಲ. ಅವರು ಉದ್ದಟತನದಿಂದ ಹೆಚ್ಚಳ ಮಾಡಿದ್ದಾರೆ. ಮೊದಲು ಸರ್ವಿಸ್ ರಸ್ತೆಗಳನ್ನ ಸರಿಮಾಡಲಿ. ಹಿಂದೆಯೂ ಹೋರಾಟ ಮಾಡಿದ್ದೇವೆ, ಮುಂದೆಯೂ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ!
    ಹಾಸನ ಟಿಕೆಟ್ ವಿಚಾರವಾಗಿ ಗೊಂದಲ ವಿಚಾರವಾಗಿ ಮಾತನಾಡಿ, ಇವತ್ತು ಹಾಸನದ ಶಾಸಕರು ತಿಂಡಿಗೆ ಬಂದಿದ್ದರು. ಕುಮಾರಣ್ಣ ಅವರನ್ನ ಕರೆಸಿದ್ದರು, ಅಲ್ಲಿ ಏನಾಗಿದೆ ಗೊತ್ತಿಲ್ಲ. ನಾನು ಬೆಳಗ್ಗೆಯೇ ರಾಮನಗರಕ್ಕೆ ಬಂದಿದ್ದೇನೆ. ಮುಂದೆ ಅವರೇ ಈ ವಿಚಾರವಾಗಿ ತಿಳಿಸುತ್ತಾರೆಂದು ಹೇಳಿದ್ದಾರೆ.
    ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣವಾಗಿದೆ. ನಾವು ಯಾರ ಜೊತೆಯಲ್ಲಿಯೂ ಹೊಂದಾಣಿಕೆ ಆಗಿಲ್ಲ. ನಾವು ಸ್ಪಷ್ಟ ಬಹುಮತದಿಂದ ಸರ್ಕಾರ ಮಾಡುತ್ತೇವೆಂದು ತಿಳಿಸಿದ್ದಾರೆ.

    ನಟ ಅಗೆದು ಉಗುಳಿದ ಚೂಯಿಂಗ್ ಗಮ್​ಗೆ ದುಬಾರಿ ಬೆಲೆ; 32 ಲಕ್ಷ ರೂ. ನಿಂದ ಹರಾಜು ಪ್ರಾರಂಭ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts