More

    ಸುಟ್ಟು ಕರಕಲಾಯಿತು ಜೋಧಾ ಅಕ್ಬರ್ ಚಿತ್ರದ ಸೆಟ್ಗಳು …

    ಮುಂಬೈ: ಮಹಾರಾಷ್ಟ್ರದ ರಾಯಘಢ ಜಿಲ್ಲೆಯಲ್ಲಿ ಖಾಲಾಪುರದಲ್ಲಿರುವ ಎನ್​ಡಿ ಸ್ಟುಡಿಯೋಸ್​ನಲ್ಲಿ ಬೆಂಕಿ ಅವಘಡವಾಗಿದ್ದು, ಇದರಲ್ಲಿ ಜೋಧಾ ಅಕ್ಬರ್ ಚಿತ್ರದ ಸೆಟ್​ಗಳು ಸುಟ್ಟು ಕರಕಲಾಗಿವೆ. ಮಿಕ್ಕಂತೆ, ಯಾವುದೇ ಸಾವು-ನೋವು ವರದಿಯಾಗಿಲ್ಲ.

    ಇದನ್ನೂ ಓದಿ: ಪ್ರೀತಿಗಾಗಿ ನಾರ್ವೆವರೆಗೂ ಸೈಕಲ್ ಓಡಿಸ್ತಾರಾ ಶಾರೂಖ್ ಖಾನ್?

    ಹೃತಿಕ್​ ರೋಶನ್​ ಮತ್ತು ಐಶ್ವರ್ಯ ರೈ ಅಭಿನಯದ ಜೋಧಾ ಅಕ್ಬರ್​ ಚಿತ್ರ ಬಿಡುಗಡೆಯಾಗಿದ್ದು 2008ರಲ್ಲಿ. ಆ ಚಿತ್ರಕ್ಕೆ ಹಾಕಲಾದ ಸೆಟ್​ಗಳು ಇನ್ನೂ ಇವೆಯಾ ಎಂದು ಆಶ್ಚರ್ಯವಾಗಬಹುದು. ಆದರೆ,ಇದು ನಿಜ.

    ಜೋಧಾ ಅಕ್ಬರ್​ ಚಿತ್ರಕ್ಕಾಗಿ ಖ್ಯಾತ ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ತಮ್ಮ ಎನ್​ಡಿ ಸ್ಟುಡಿಯೋನಲ್ಲೇ ಹಲವು ಸೆಟ್​ಗಳನ್ನು ಹಾಕಿದ್ದರು. ಕೋಟೆ, ಅರಮನೆಯ ಸೆಟ್​ಗಳನ್ನು ಈ ಚಿತ್ರಕ್ಕಾಗಿ ಹಾಕಲಾಗಿದ್ದು, ಚಿತ್ರ ಬಿಡುಗಡೆಯಾದರೂ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಈ ಸೆಟ್​ಗಳು ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಗಿತ್ತು. 13 ವರ್ಷಗಳ ಕಾಲ ರಕ್ಷಿಸಲಾಗಿದ್ದ ಈ ಸೆಟ್​ಗಳು ಇದೀಗೆ ಬೆಂಕಿಗೆ ಆಹುತಿಯಾಗಿವೆ.

    ಇದನ್ನೂ ಓದಿ: ನಮ್ಮಪ್ಪನನ್ನು ಮೀರಿಸೋಕೆ ಸಾಧ್ಯವಿಲ್ಲ ಎಂದು ಅಭಿಷೇಕ್ ಹೇಳಿದ್ದೇಕೆ?

    ಸೆಟ್​ಗೆ ಬೆಂಕಿ ಬಿದ್ದಿದೆ ಎಂದು ಸುದ್ದಿ ಹರಡುತ್ತಿದ್ದಂತೆಯೇ, ಫೈರ್​ ಇಂಜಿನ್​ಗಳನ್ನು ಕರೆಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಲಾಯಿತು. ಒಂದೆರೆಡು ಗಂಟೆಗಳ ಅವಧಿಯಲ್ಲಿ ಬೆಂಕಿಯನ್ನು ನಂದಿಸಲಾದರೂ, ಅಷ್ಟರಲ್ಲಿ ಸೆಟ್​ ಬಹುತೇಕ ಸುಟ್ಟುಹೋಗಿದೆ ಎಂದು ಹೇಳಲಾಗಿದೆ.

    ಲಾಕ್ಡೌನ್ನಿಂದ ಬಿಗ್ ಬಾಸ್ ಸ್ಥಗಿತ … ನಾಳೆ ಕೊನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts