More

    ಮಹಾ ಪೈಪೋಟಿ!: ಜೇಮ್ಸ್​, ಆರ್​ಆರ್​ಆರ್, ಬಚ್ಚನ್ ಪಾಂಡೆ..

    ಬೆಂಗಳೂರು: ಪುನೀತ್ ಹುಟ್ಟುಹಬ್ಬಕ್ಕೆ (ಮಾರ್ಚ್ 17) ‘ಜೇಮ್ಸ್​’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ. ಅಷ್ಟೇ ಅಲ್ಲ, ಚಿತ್ರವನ್ನು ಅಷ್ಟರಲ್ಲಿ ತೆರೆಗೆ ತರುವ ನಿಟ್ಟಿನಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಈಗ ‘ಜೇಮ್ಸ್​​’ಗೆ ಒಂದಲ್ಲ, ಎರಡು ದೊಡ್ಡ ಚಿತ್ರಗಳ ಪೈಪೋಟಿ ಎದುರಾಗಿದೆ. ಒಂದು ತೆಲುಗಿನ ‘ಆರ್​ಆರ್​ಆರ್’ ಆದರೆ, ಇನ್ನೊಂದು ಹಿಂದಿಯ ‘ಬಚ್ಚನ್ ಪಾಂಡೆ’. ಈ ಎರಡೂ ಚಿತ್ರಗಳು ಮಾರ್ಚ್ 18ರಂದು ಬಿಡುಗಡೆಯಾಗುತ್ತಿವೆ.

    ಹಾಗೆ ನೋಡಿದರೆ, ಮಾರ್ಚ್ 17ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು ಮೊದಲು ‘ಜೇಮ್ಸ್’ ತಂಡ. ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದು ಮೊದಲೇ ತೀರ್ವನವಾಗಿತ್ತಾದರೂ, ಘೋಷಣೆಯಾಗಿದ್ದು ಪುನೀತ್ ನಿಧನದ ಬಳಿಕ. ಇಷ್ಟು ದಿನಗಳ ಕಾಲ ಈ ಚಿತ್ರಕ್ಕೆ ಯಾವುದೇ ಪೈಪೋಟಿ ಇರಲಿಲ್ಲ. ಹೀಗಿರುವಾಗ, ‘ಬಚ್ಚನ್ ಪಾಂಡೆ’ ಚಿತ್ರವನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಅಂದರೆ ಮಾ.18ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಘೋಷಿಸಿದ್ದರು. ಈಗ ಆ ಸಾಲಿಗೆ ‘ಆರ್​ಆರ್​ಆರ್’ ಸಹ ಸೇರ್ಪಡೆಯಾಗಿದೆ.

    ಮಾ. 18ರಂದು ‘ಆರ್​ಆರ್​ಆರ್’ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಚಿತ್ರವು ಜನವರಿ 6ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮೂರನೆಯ ಅಲೆಯ ಭಯದಿಂದ ಚಿತ್ರವನ್ನು ಮುಂದೂಡಲಾಯಿತು. ಇದರ ಜತೆಗೆ, ಫೆ.4ಕ್ಕೆ ಬಿಡುಗಡೆಯಾಗಬೇಕಿದ್ದ ಚಿರಂಜೀವಿ ಅಭಿನಯದ ‘ಆಚಾರ್ಯ’ ಏ.1ಕ್ಕೆ ಹೋಯಿತು. ಇನ್ನು, ಏ.14ಕ್ಕೆ ‘ಕೆಜಿಎಫ್ 2’ ಬಿಡುಗಡೆಯಾಗಲಿದೆ. ಈ ಎರಡೂ ಚಿತ್ರಗಳ ಆಸುಪಾಸಿನಲ್ಲಿ ಬಿಡುಗಡೆ ಮಾಡುವುದು ಸಮಂಜಸವಲ್ಲ ಎಂದು ‘ಆರ್​ಆರ್​ಆರ್’ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತಿದೆ. ಅದೇ ಕಾರಣಕ್ಕೆ, ಮಾರ್ಚ್ 18ರೊಳಗೆ ಪರಿಸ್ಥಿತಿ ಸರಿ ಹೋದರೆ ಅಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸುವ ಮೂಲಕ ಹೊಸ ಪೈಪೋಟಿ ಸೃಷ್ಟಿ ಮಾಡಿದೆ.

    ಅಲ್ಲಿಗೆ ಮಾರ್ಚ್ 18ರ ಹೊತ್ತಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು, ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕರೆ ಮೂರೂ ಚಿತ್ರಗಳು ಪೈಪೋಟಿ ನಡೆಸಲಿವೆ. ಒಂದು ಪಕ್ಷ ಅದಾಗದಿದ್ದರೆ, ಪೈಪೋಟಿ ಇನ್ನೊಂದು ದಿನಕ್ಕೆ ಶಿಫ್ಟ್ ಆಗಲಿದೆ.

    ನಾಯಕರಾಗಿ ಚಿತ್ರರಂಗಕ್ಕೆ ಬಂದ ಅಶ್ವತ್ಥ್​ ಕೆಲವೇ ವರ್ಷಗಳಲ್ಲಿ ಪೋಷಕ ನಟ ಆಗಿದ್ಯಾಕೆ? ಏನದು ರಹಸ್ಯ!?

    ಶಿವರಾಜಕುಮಾರ್​ಗೆ ‘ಬುದ್ಧಿವಂತ’ ನಿರ್ದೇಶಕನ ನಿರ್ದೇಶನ; ಬರಲಿದೆ ಪ್ಯಾನ್ ಇಂಡಿಯಾ ಸಿನಿಮಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts