More

    ಜೀವಂತ ಸುಟ್ಟುಹೋದಾಕೆಯ ಸಾವಿನ ಹಿಂದಿನ ಅಸಲಿ ಕಾರಣವೇ ಇದು!; ಅಪಾರ್ಟ್​ಮೆಂಟ್​ ಅಗ್ನಿ ಆಕಸ್ಮಿಕದ ಹಿಂದಿನ ದುರಂತ

    ಬೆಂಗಳೂರು: ರಾಜಧಾನಿಯ ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಆ್ಯಸ್ಪೈರ್​ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಮನೆಯಲ್ಲಿದ್ದಾಕೆ ಬದುಕುಳಿಯುವ ಸಾಧ್ಯತೆಯೇ ಇಲ್ಲದಂತೆ ಮಾಡಿದ್ದೇನು ಎಂಬುದು ಇದೀಗ ಬಹಿರಂಗಗೊಂಡಿದೆ.

    ಭೀಮಸೇನ ರಾವ್ ಎಂಬವರಿಗೆ ಸೇರಿದ್ದ ಎರಡು ಫ್ಲ್ಯಾಟ್​ನಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷ್ಮೀದೇವಿ ಹಾಗೂ ಭಾಗ್ಯರೇಖಾ ಅವರು ಜೀವಂತ ಸುಟ್ಟುಹೋಗಿದ್ದರು. ಅದರಲ್ಲೂ ಬೆಂಕಿ ಕಾಣಿಸಿಕೊಂಡಾಗ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಿದ್ದುದು ಸಾವಿಗೆ ನಿಜವಾದ ಕಾರಣ ಎನ್ನಲಾಗಿದೆ.

    ಇದನ್ನೂ ಓದಿ: ಗ್ಯಾಸ್ ಸಿಲಿಂಡರ್​​ನ ಭೀಕರ ಸ್ಫೋಟಕ್ಕೆ ಇಬ್ಬರು ಬಲಿ; ಕಾಪಾಡಿ ಕಾಪಾಡಿ ಅಂತ ಕೂಗಾಡಿ ಬೆಂಕಿಗಾಹುತಿಯಾದ ಮಹಿಳೆ

    ಭೀಮಸೇನ ರಾವ್ ಅವರು ತಮ್ಮ ಎರಡೂ ಫ್ಲ್ಯಾಟ್​ನ ಯುಟಿಲಿಟಿಯಲ್ಲಿ ಸಂಪೂರ್ಣ ಗ್ರಿಲ್​ ಅಳವಡಿಸಿ ಬಿಗಿ ಬಂದೋಬಸ್ತ್​ ಮಾಡಿಕೊಂಡಿದ್ದರು. ಕಳ್ಳಕಾಕರು ಯಾರೂ ಮನೆಗೆ ನುಗ್ಗಲು ಸಾಧ್ಯವಾಗದಿರಲಿ ಎಂದು ರಕ್ಷಣೆಯ ದೃಷ್ಟಿಯಿಂದ ಅವರು ಹಾಕಿಸಿಕೊಂಡಿದ್ದ ಆ ಗ್ರಿಲ್ಲೇ ಜೀವಹೋಗಲು ಮುಖ್ಯಕಾರಣವಾಯಿತು ಎಂಬುದು ತಿಳಿದುಬಂದಿದೆ.

    ಇದನ್ನೂ ಓದಿ: ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

    ಇವರ ಫ್ಲ್ಯಾಟ್​​ನ ಅಕ್ಕಪಕ್ಕದ ಫ್ಲ್ಯಾಟ್​​ಗಳಲ್ಲಿ ಗ್ರಿಲ್ ಅಳವಡಿಸಿಕೊಂಡಿದ್ದರೂ ಒಂದು ಕಿಟಕಿ ಥರ ಎಕ್ಸಿಟ್​ ಇಟ್ಟುಕೊಂಡಿದ್ದರು. ಆದರೆ ಇವರು ಮಾತ್ರ ಸಂಪೂರ್ಣ ಮುಚ್ಚುವಂತೆ ಗ್ರಿಲ್ ಅಳವಡಿಸಿಕೊಂಡಿದ್ದರು. ಹೀಗಾಗಿ ತುರ್ತುಪರಿಸ್ಥಿತಿಯಲ್ಲಿ ಇವರು ಅಲ್ಲಿಂದ ಹೊರಕ್ಕೆ ಬಾರದಂತೆ ಆಗಿತ್ತು. ಅಲ್ಲಿ ಸಣ್ಣ ಕಿಟಕಿ ಥರ ಇದ್ದಿದ್ದರೆ ಏಣಿ ಕೊಟ್ಟೋ, ಹಗ್ಗ ಎಸೆದೋ ಹೇಗಾದರೂ ಹೊರಕ್ಕೆ ಬರಲು ಸಹಾಯವಾದರೂ ಮಾಡಬಹುದಿತ್ತು ಎಂದು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ರೀತಿಯ ಜ್ವರ; 171 ಮಕ್ಕಳು ಆಸ್ಪತ್ರೆಗೆ ದಾಖಲು..

    ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts