More

    ಮತ್ತೆ ಮತ್ತೆ ತಪ್ಪೆಸಗುತ್ತಿದೆ ಈ ಔಷಧ ಕಂಪನಿ!; ಈ ಹಿಂದೆಯೂ ಕೆಲವು ಮದ್ದು ಕಳಪೆ..

    ನವದೆಹಲಿ: ಸಿರಪ್ ಒಂದರಿಂದ ಮಕ್ಕಳ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಎದುರಿಸುತ್ತಿರುವ ಭಾರತದ ಈ ಔಷಧ ಕಂಪನಿ ಮತ್ತೆ ಮತ್ತೆ ತಪ್ಪೆಸಗುತ್ತಿದ್ದು, ಇದರ ಬಹಳಷ್ಟು ಮದ್ದು ಕಳಪೆ ಆಗಿದೆ ಎಂದೂ ಹೇಳಲಾಗುತ್ತಿದೆ. ಮಾತ್ರವಲ್ಲ, ಈ ಕುರಿತು ಈಗಾಗಲೇ ಕೆಲವು ರಾಜ್ಯಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.

    ಮೇಡನ್ ಫಾರ್ಮಾಸ್ಯೂಟಿಕಲ್ಸ್​ ಕಂಪನಿಯ ಸಿರಪ್ ಕುಡಿದು ಗೇಂಬಿಯಾದಲ್ಲಿ 66 ಮಕ್ಕಳು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿತ್ತು. ಇದೀಗ ಈ ಕಂಪನಿ ಇಂಥ ತಪ್ಪುಗಳನ್ನು ಈ ಹಿಂದೆಯೂ ಮಾಡಿದ್ದು, ಭಾರತದಲ್ಲೇ ಕೆಲವು ರಾಜ್ಯಗಳಲ್ಲಿ ಕಳಪೆ ಮದ್ದುಗಳನ್ನು ವಿತರಿಸಿದ್ದು ಈಗ ಬೆಳಕಿಗೆ ಬಂದಿದೆ.

    ಮೇಡನ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಯನ್ನು ವಿಯೆಟ್ನಾಂ 2011ರಲ್ಲೇ ನಿಷೇಧಿಸಿತ್ತು. ಭಾರತದಲ್ಲೂ ಈ ಕಂಪನಿ ಕಳಪೆ ಮದ್ದುಗಳನ್ನು ವಿತರಿಸಿದೆ ಎಂಬುದನ್ನು ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ದಿನೇಶ್ ಠಾಕೂರ್ ಹೇಳಿದ್ದಾರೆ. ಕೇರಳ, ಗುಜರಾತ್​, ಬಿಹಾರಗಳಲ್ಲಿ ಈ ಕಂಪನಿ ಕಳಪೆ ಔಷಧ ನೀಡಿದ್ದು, ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

    ಮತ್ತೊಂದೆಡೆ, ಮೇಡನ್ ಕಂಪನಿ 1990ರ ನವೆಂಬರ್​ನಲ್ಲಿ ಕಾರ್ಯಾರಂಭಿಸಿದ್ದು, ಇದುವರೆಗೆ ಇದರ ಸಿರಪ್​ ಬರೀ ಗೇಂಬಿಯಾಗಷ್ಟೇ ರಫ್ತು ಮಾಡಲಾಗಿತ್ತು ಎಂದು ಭಾರತ ಸರ್ಕಾರ ತಿಳಿಸಿದೆ.

    ಮೇಡನ್ ಫಾರ್ಮಾಸ್ಯೂಟಿಕಲ್ಸ್​ನ ಕಳಪೆ ಔಷಧಗಳ ಪಟ್ಟಿ

    • ಬಿಹಾರ-2008: ಎರಿಥ್ರೋಮೈಸಿನ್ ಸ್ಟಿಯರೇಟ್ 125 ಎಂಜಿ ( 4 ಬ್ಯಾಚ್​ ಕಳಪೆ ಆಗಿದ್ದವು)
    • ಬಿಹಾರ-2011: ಮಿಥೈಲರ್ಗೊಮೆಟ್ರಿನ್​ ಟ್ಯಾಬ್ಲೆಟ್​ (ನಕಲಿ)
    • ವಿಯೆಟ್ನಾಮ್​: 2011ರಿಂದ 2013ರವರೆಗೂ ನಿಷೇಧ
    • ಗುಜರಾತ್​-2013: ಮ್ಯಾಸಿಪ್ರೋ ಟ್ಯಾಬ್ಲೆಟ್ (ಡಿಸೊಲ್ಯುಷನ್​ ಇಷ್ಯೂಸ್)
    • ಜಮ್ಮು ಮತ್ತು ಕಾಶ್ಮೀರ-2020: ಸಿಪ್ರೊಹೆಪ್ಟಡಿನ್ ಹೈಡ್ರೋಕ್ಲೋರೈಡ್ ಸಿರಪ್​ ಐಪಿ (ಕಳಪೆ)
    • ಕೇರಳ-2021: ಮೆಟ್​ಫಾರ್ಮಿನ್​ 1000 ಟ್ಯಾಬ್ಲೆಟ್​ (ಡಿಸೊಲ್ಯುಷನ್​ ಇಷ್ಯೂಸ್)
    • ಕೇರಳ-2021: ಈಸಿಪ್ರಿನ್​ (ಐಪಿ ಗುಣಮಟ್ಟಕ್ಕೆ ತಕ್ಕನಾಗಿಲ್ಲ)
    • ಕೇರಳ-2021: ಮೆಟ್​ಫಾರ್ಮಿನ್​ 500 ಟ್ಯಾಬ್ಲೆಟ್​ (ಡಿಸೊಲ್ಯುಷನ್​ ಇಷ್ಯೂಸ್)
    • ಕೇರಳ-2021: ಮೈಕಲ್​ ಡಿ ಟ್ಯಾಬ್ಲೆಟ್​ (ಕಳಪೆ)

    ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts