More

    ಜ.26ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಮಹಿಳಾ ಅಗ್ನೀವಿರ್​ ಭಾಗಿ

    ನವದೆಹಲಿ: ಈ ವರ್ಷ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾರತೀಯ ವಾಯುಪಡೆಯ ತುಕಡಿಯಲ್ಲಿ ಮಹಿಳಾ ಅಗ್ನೀವಿರ ಸೈನಿಕರು ಭಾಗವಹಿಸಲಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಸೆಪ್ಟೆಂಬರ್​ 2022ರಲ್ಲಿ ಜಾರಿಗೊಳಿಸಲಾದ ಅಗ್ನಿಪಥ್​ ಯೋಜನೆಯು ದೇಶದ ಸಶಸ ಪಡೆಗಳಲ್ಲಿ ಯುವಜನರು ನಾಲ್ಕು ವರ್ಷಗಳ ಸೇವೆ ಸಲ್ಲಿಸಲು ಅವಕಾಶ ಒದಗಿಸುತ್ತದೆ.

    ಅದರ ನಂತರ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ಕೇಡರ್​ ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾದವರು ಕನಿಷ್ಠ 15 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬಹುದು. ಈ ವರ್ಷ ಗಣರಾಜ್ಯೋತ್ಸವ ಪರೇಡ್​ನಲ್ಲಿ ರಕ್ಷಣಾ ಪಡೆಗಳ ಎರಡು ಮಹಿಳಾ ತುಕಡಿಗಳು ಪಥಸಂಚಲನ ನಡೆಸಲಿವೆ. 144 ಸಿಬ್ಬಂದಿ ಒಳಗೊಂಡಿರುವ ತುಕಡಿಯಲ್ಲಿ ಎಲ್ಲ ಮಹಿಳಾ ಸೈನಿಕರು ಇರುತ್ತಾರೆ. ಅದರಲ್ಲಿ 60 ಮಂದಿ ಸೇನೆಯಿಂದ ಮತ್ತು ಉಳಿದವರು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಿಂದ ಇರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಣರಾಜ್ಯೋತ್ಸವದ ಪರೇಡ್​ಗಾಗಿ ಫುಲ್​ ಡ್ರೆಸ್​ ರಿಹರ್ಸಲ್​ಗಳು ಹಲವು ದಿನಗಳಿಂದ ದೆಹಲಿಯ ಚಳಿಗಾಲದ ಮುಂಜಾನೆಯಲ್ಲಿ ನಡೆಯುತ್ತಿವೆ. ಈಶಾನ್ಯದಿಂದ 45 ಹುಡುಗಿಯರನ್ನು ಒಳಗೊಂಡ ಬ್ಯಾಂಡ್​ ಮೊದಲ ಬಾರಿಗೆ ಶಿಬಿರದಲ್ಲಿ ಭಾಗವಹಿಸುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts