More

    ಅಷ್ಟಕ್ಕೂ ರಾಮನ ಅವತಾರದಲ್ಲಿನ ಮಹೇಶ್​ ಬಾಬುವಿನ ಈ ಪೋಸ್ಟರ್ ಅಸಲಿಯೇ!

    ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್​ನಲ್ಲಿ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಆದರೆ, ಆ ಸಿನಿಮಾ ಹೇಗಿರಲಿದೆ? ಯಾವ ಶೈಲಿಯ ಕಥೆ ಆಯ್ದುಕೊಳ್ಳಲಿದ್ದಾರೆ ರಾಜಮೌಳಿ ಎಂಬುದು ಸದ್ಯದ ಮಟ್ಟಿಗೆ ನಿಗೂಢ! ಹೀಗಿರುವಾಗಲೇ ಮಹೇಶ್​ ಬಾಬು ಅವರ ರಾಮನ ಅವತಾರದ ವಿಭಿನ್ನ ಪೋಸ್ಟರ್​ವೊಂದು ಸದ್ಯ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಆ ಪೋಸ್ಟರ್​ ಅಸಲಿಯಾ ಅಥವಾ ನಕಲಿಯಾ ಎಂಬುದು ಅಭಿಮಾನಿವಲಯದಲ್ಲಿ ಯಕ್ಷಪ್ರಶ್ನೆಯಾಗಿದೆ. ಇತ್ತ ಚಿತ್ರತಂಡದಿಂದಲೂ ಈ ಬಗ್ಗೆ ಯಾವುದೇ ಅಪ್​ಡೇಟ್​ ಮಾಹಿತಿ ಹೊರಬಿದ್ದಿಲ್ಲ.

    ಇದನ್ನೂ ಓದಿ:  ಆರ್​ಜಿವಿ ಬತ್ತಳಿಕೆಯಿಂದ ಕರೊನಾ ವೈರಸ್​ ಸಿನಿಮಾ; ಟ್ರೇಲರ್​ ಬಂದೇ ಬಿಟ್ಟಿದೆ ನೋಡಿ!

    ಹೌದು, ರಾಮಾಯಣ ಸಿನಿಮಾ ಮಾಡಿದರೆ ಆ ಚಿತ್ರವನ್ನು ರಾಜಮೌಳಿಯೇ ನಿರ್ದೇಶಿಸಬೇಕೆಂದು ಇತ್ತೀಚೆಗಷ್ಟೇ ದೊಡ್ಡ ಮಟ್ಟದ ಅಭಿಯಾನವನ್ನೇ ಶುರುಮಾಡಿದ್ದರು ಅಭಿಮಾನಿಗಳು. ಆ ಬಳಿಕ ಮಹೇಶ್​ ಬಾಬು ಸಿನಿಮಾ ಮಾಡುವುದಾಗಿ ಹೇಳಿದರು. ಈ ಕಾಂಬಿನೇಷನ್​ನಲ್ಲೇ ರಾಮಾಯಣ ಮೂಡಿಬರಬಹುದು ಎಂಬ ಕುತೂಹಲದಲ್ಲಿ ಇದೀಗ ರಾಮನ ಅವತಾರದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ನಕಲಿ ಎಂಬುದು ಈಗಾಗಲೇ ಗೊತ್ತಾಗಿದ್ದು, ಫ್ಯಾನ್​ ಮೇಡ್​ ಎಂಬ ವಾಟರ್​ಮಾರ್ಕ್​ ಸಹ ಪೋಸ್ಟರ್​ನಲ್ಲಿದೆ. ಇನ್ನು ಈ ಪೋಸ್ಟರ್​ ಬಗ್ಗೆ ರಾಜಮೌಳಿಯಾಗಲಿ, ಮಹೇಶ್​ ಬಾಬು ಆಗಲಿ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

    ಇದನ್ನೂ ಓದಿ: ಪ್ರೇಯಸಿ ನೋಡಲು ಮನವಿ ಮಾಡಿದವನಿಗೆ ಸೋನು ಸೂದ್​ ಕೊಟ್ಟ ಉತ್ತರ ಹೀಗಿತ್ತು …

    ಈ ಜೋಡಿಯ ಸಿನಿಮಾ ವಿಚಾರಕ್ಕೆ ಬಂದರೆ, ಈವರೆಗೂ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡು, ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಮಹೇಶ್​ ಬಾಬು ಅವರನ್ನು ಹಿಂದೆಂದೂ ಕಾಣಿಸದ ಅವತಾರದಲ್ಲಿ ತೋರಿಸಲು ರಾಜಮೌಳಿ ಪ್ಲ್ಯಾನ್​ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ಮಹೇಶ್​ಗಾಗಿ ರಾಜಮೌಳಿ ಕಥೆ ಸಿದ್ಧಪಡಿಸಿದ್ದು, ಇಬ್ಬರೂ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಒಟ್ಟಿಗೆ ಕೈ ಜೋಡಿಸಲು ಸಮಯ ಕೂಡಿಬಂದಿರಲಿಲ್ಲ. ಈಗ 2021ಕ್ಕೆ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆ. ಅಂದಹಾಗೆ ದುರ್ಗಾ ಆರ್ಟ್ಸ್​ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. (ಏಜೆನ್ಸೀಸ್​)

    ಅನುಷ್ಕಾಗೆ ಡಿವೋರ್ಸ್​ ನೀಡಿ; ಕ್ರಿಕೆಟಿಗ ಕೊಹ್ಲಿಗೆ ಬಿಜೆಪಿ ಎಂಎಲ್​ಎಯಿಂದ ಕೋರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts