More

    ಶಿವಸೇನೆ ನಾಯಕಿಯಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಅಪಮಾನ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆಯ ನಾಯಕರು ಮತ್ತೆ ಕರ್ನಾಟಕದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಮಹಾರಾಷ್ಟ್ರದ ವಿಧಾನ ಪರಿಷತ್ ಕಲಾಪದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಪಮಾನ ಮಾಡುವ ಮೂಲಕ ಉದ್ಧಟತನ ಮೆರೆದಿದ್ದಾರೆ.

    ಕರ್ನಾಟಕದ ಗಡಿಭಾಗದಲ್ಲಿರುವ 865 ಹಳ್ಳಿಗಳಿಗೆ 54 ಕೋಟಿ ರೂ. ವೆಚ್ಚದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಈ ಕುರಿತು ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪದಲ್ಲಿ ಚರ್ಚೆ ಮಾಡುವಾಗ ಶಿವಸೇನೆ ಉದ್ಧವ್ ಠಾಕ್ರೆ ಬಣದ ಎಂಎಲ್‌ಸಿ ಡಾ. ಮನಿಷಾ ನಾಲಿಗೆ ಹರಿಬಿಟ್ಟಿದ್ದು, ಕರ್ನಾಟಕ ಸಿಎಂ ಹಾಗೂ ಕರ್ನಾಟಕ ಸರ್ಕಾರದ ಬಗ್ಗೆ ಡಾ.ಮನಿಷಾ ಹಗುರವಾದ ಮಾತುಗಳನ್ನಾಡಿದ್ದಾರೆ.

    ಇದನ್ನೂ ಓದಿ: ಆಸಿಸ್​ ವಿರುದ್ಧದ 3 ಪಂದ್ಯದಲ್ಲೂ ಗೋಲ್ಡನ್​ ಡಕ್! ಕಳಪೆ ದಾಖಲೆ ಪಟ್ಟಿಗೆ ಸೇರಿದ ಸೂರ್ಯಕುಮಾರ್​

    ಕರ್ನಾಟಕ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿಯ ದಾದಾಗಿರಿ ಹೆಚ್ಚಾಗಿದೆ. ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿ, ಮರಾಠಿ ಮಾತನಾಡಲು ಬಿಡುತ್ತಿಲ್ಲ. ಗಡಿಭಾಗದ 865 ಹಳ್ಳಿಗಳಿಗೆ ಕೇವಲ 54 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಯೋಜನೆ ನೀಡಲಾಗಿದೆ. ಉಭಯ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಇದೆ. ನಾವು ನಮ್ಮ ಜನರಿಗೆ ಅನುದಾನ ನೀಡುತ್ತಿದ್ದೇವೆ. ಅದನ್ನು ಪ್ರಶ್ನೆ ಮಾಡಲು ಕರ್ನಾಟಕ ಸಿಎಂಗೆ ಎಷ್ಟು ಧೈರ್ಯ ಇದೆ? ಸುಪ್ರೀಂಕೋರ್ಟ್​ನಲ್ಲಿ ಕೇಸ್​ ಇನ್ನು ಬಾಕಿ ಇದೆ. ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

    ಬಿಜೆಪಿಗೆ ಶಿವರಾಮೇಗೌಡ ಬರ್ತಾರೆಂಬ ಸುದ್ದಿ ಹರಿದಾಡ್ತಿದ್ದಂತೆ ಫೈಟರ್ ರವಿ ಎದೆಯಲ್ಲಿ ಆತಂಕ ಶುರು!

    ಸಿಕ್ಕಿಬಿಡ್ತು ಕಟ್ಟುಗಟ್ಟಲೆ ಹಣ; ದಾಖಲೆರಹಿತ 1.9 ಕೋಟಿ ರೂ. ವಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts