More

    ಆಸಿಸ್​ ವಿರುದ್ಧದ 3 ಪಂದ್ಯದಲ್ಲೂ ಗೋಲ್ಡನ್​ ಡಕ್! ಕಳಪೆ ದಾಖಲೆ ಪಟ್ಟಿಗೆ ಸೇರಿದ ಸೂರ್ಯಕುಮಾರ್​

    ನವದೆಹಲಿ: ಟಿ-20 ಮಾದರಿ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ಬ್ಯಾಟರ್​ ಎನಿಸಿಕೊಂಡಿರುವ ಸೂರ್ಯಕುಮಾರ್​ ಯಾದವ್​ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ. ಮೂರು ಪಂದ್ಯಗಳಲ್ಲೂ ಶೂನ್ಯಕ್ಕೆ ಔಟಾಗುವ ಮೂಲಕ ಕ್ರಿಕೆಟ್​ ಇತಿಹಾಸದಲ್ಲಿ ಅಮೋಘ ದಾಖಲೆಗಳ ಸಾಲಿಗೆ ಇದೀಗ ಕಳಪೆ ದಾಖಲೆಯನ್ನು ಯಾದವ್​ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

    ಟಿ.20 ಮಾದರಿ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟ್ಸ್​ಮನ್​, ಟೀಮ್​ ಇಂಡಿಯಾದ ಮಿ. 360 ಡಿಗ್ರಿ ಆಟಗಾರ ಎಂಬೆಲ್ಲ ಹೆಗ್ಗಳಿಕೆ ಹೊಂದಿರುವ ಯಾದವ್​ ಇದೀಗ 50 ಓವರ್​ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ.

    ಇದನ್ನೂ ಓದಿ: ಬಿಜೆಪಿಗೆ ಶಿವರಾಮೇಗೌಡ ಬರ್ತಾರೆಂಬ ಸುದ್ದಿ ಹರಿದಾಡ್ತಿದ್ದಂತೆ ಫೈಟರ್ ರವಿ ಎದೆಯಲ್ಲಿ ಆತಂಕ ಶುರು!

    ನಿನ್ನೆ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸಿಸ್​ ಬೌಲರ್​ ಅಸ್ತಾನ್​ ಅಗರ್​ ಎಸೆದ 36ನೇ ಓವರ್​ನಲ್ಲಿ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸೂರ್ಯಕುಮಾರ್​ ಯಾದವ್​ ಗೋಲ್ಡನ್​ ಡಕ್​ ಆದರು. ಆಸಿಸ್​ ನೀಡಿದ್ದ 270 ರನ್​ ಗುರಿಯನ್ನು ಬೆನ್ನತ್ತುವಾಗ ತಂಡದ ಮೊತ್ತ 185 ರನ್ ಆಗಿದ್ದ ಸಮಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಯಾದವ್​ ತಂಡಕ್ಕೆ ಆಘಾತ ನೀಡಿದರು. ಈ ವೇಳೆಗೆ 185 ರನ್​ಗೆ ಪ್ರಮುಖ 6 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿತು. ಅಂತಿಮವಾಗಿ ಪಂದ್ಯವನ್ನೇ ಕೈಚೆಲ್ಲಿತು.

    ಮೊದಲು ಮತ್ತು ಎರಡನೇ ಪಂದ್ಯದಲ್ಲಿ ಮಿಚೆಲ್​ ಸ್ಟಾರ್ಕ್​ ಅವರ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ಮೊದಲೆರೆಡು ಪಂದ್ಯದಲ್ಲೂ ಗೋಲ್ಡನ್​ ಡಕ್​ ಆದರು. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಯಾದವ್ ಅವರನ್ನು ಪ್ರಮುಖ ನಿರೀಕ್ಷೆಯಾಗಿ ಇಟ್ಟುಕೊಂಡಿದ್ದು, ಅವರನ್ನು ಸಂಪೂರ್ಣ ಬೆಂಬಲಿಸಿದ್ದಾರೆ. ಆದರೆ, ಏಕದಿನ ಪಂದ್ಯದಲ್ಲಿ ಯಾದವ್​ ಪ್ರದರ್ಶನ ರೋಹಿತ್​ಗೆ ಆಘಾತ ಉಂಟು ಮಾಡಿದೆ.

    ಯಾದವ್​ ಕಳಪೆ ದಾಖಲೆ
    ಸೂರ್ಯಕುಮಾರ್ ಏಕದಿನ ಪಂದ್ಯದಲ್ಲಿ ಸತತ ಮೂರು ಡಕ್‌ಗಳನ್ನು ದಾಖಲಿಸಿದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ (1994), ಅನಿಲ್ ಕುಂಬ್ಳೆ (1996), ಜಹೀರ್ ಖಾನ್ (2003-04), ಇಶಾಂತ್ ಶರ್ಮಾ (2010-11), ಜಸ್ಪ್ರೀತ್ ಬುಮ್ರಾ (2017-2019) ಸತತ ಮೂರು ಬಾರಿ ಗೋಲ್ಡನ್​ ಡಕ್​ ಆಗಿದ್ದರು.

    ಇದನ್ನೂ ಓದಿ: ರಜನಿ ಪುತ್ರಿಯ ಮನೆಯಲ್ಲಿ ಕದ್ದ ಆಭರಣಗಳಿಂದ ದುಬಾರಿ ಮನೆ ಖರೀದಿಸಿದ್ದ ಸೇವಕಿ: ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಆಸಿಸ್​ ಸ್ಪಿನ್ನರ್‌ಗಳ ನಿರಂತರ ಒತ್ತಡದಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗವು ಮತ್ತೊಮ್ಮೆ ವೈಫಲ್ಯ ಅನುಭವಿಸಿದೆ. ಬುಧವಾರ ಚೆನ್ನೈನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 21 ರನ್‌ಗಳ ಆರಾಮದಾಯಕ ಜಯದೊಂದಿಗೆ 2-1 ಅಂತರದಿಂದ ಆಸಿಸ್​ ಪಡೆ ಸರಣಿ ವಶಪಡಿಸಿಕೊಂಡರು. ಆಸಿಸ್​ ನೀಡಿದ 270 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತವು 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್​ ಆಯಿತು. ಈ ಮೂಲಕ ತವರು ನೆಲದಲ್ಲೇ ಆಸಿಸ್​ ವಿರುದ್ಧ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿತು. (ಏಜೆನ್ಸೀಸ್​)

    ಕರೊನಾ ಪ್ರಕರಣಗಳ ಹೆಚ್ಚಳ!; ಸಭೆ ನಡೆಸಿದ ಮೋದಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

    ಯುಗಾದಿ ದಿನವೇ ಮುಗಿದ ಬದುಕು!; ಪತಿಯ ಅನುಮಾನಕ್ಕೆ ಪತ್ನಿ ಬಲಿ

    ಜೋಗಪ್ಪನನ್ನು ಹುಡುಕಿ ಹೊರಟ ಸಂಜನಾ ದಾಸ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts