More

    ಪ್ರಾಬಲ್ಯಕ್ಕಾಗಿ ಹುಲಿ ಕಾಳಗ.. ದರಿಗಾಮ್ ಅರಣ್ಯದಲ್ಲಿ ಹೆಣ್ಣು ಹುಲಿ ಮೃತ್ಯ- ಚಂದ್ರಾಪುರ ಬಳಿ 10 ಹುಲಿ ಸತ್ತಿದ್ದೇಕೆ?

    ನವದೆಹಲಿ: ಊರು, ಪ್ರಾಂತ್ಯಗಳ ಮೇಲೆ ಪ್ರಾಬಲ್ಯ ಸಾಧಿಸಲು ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ಹೋರಾಟ ನಡೆಸುತ್ತವೆ. ಅವು ತಮ್ಮ ಪ್ರದೇಶಕ್ಕೆ ಹೊಸ ಪ್ರಾಣಿಗಳ ಆಗಮನವನ್ನು ಬಲವಾಗಿ ವಿರೋಧಿಸುತ್ತವೆ. ಕಾಗಜ್‌ನಗರ ಅರಣ್ಯ ಕಾರಿಡಾರ್‌ನ ಮಹಾರಾಷ್ಟ್ರ ಗಡಿಭಾಗದ ದರಿಗಾಮ್ ಅರಣ್ಯದಲ್ಲಿ ಎರಡು ಹುಲಿಗಳ ನಡುವಿನ ಕಾಳಗವೇ ಇದಕ್ಕೆ ಸಾಕ್ಷಿ.

    ಇದನ್ನೂ ಓದಿ: ಕಾಂಗ್ರೆಸ್​ ಶಾಸಕ ನಂಜೇಗೌಡಗೆ ‘ಇಡಿ’ ಶಾಕ್​: ಕೊಮ್ಮನಹಳ್ಳಿ ಮನೆ ಸೇರಿ 10 ಕಡೆ ಏಕಕಾಲಕ್ಕೆ ದಾಳಿ..
    ಈ ಅರಣ್ಯದಲ್ಲಿ ಪ್ರಪ್ರಥಮ ಬಾರಿಗೆ ಮತ್ತೊಂದು ಹುಲಿಯೊಂದಿಗೆ ನಡೆದ ಭೀಕರ ಕಾಳಗದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. ಇದು ಅರಣ್ಯ ಅಧಿಕಾರಿಗಳನ್ನು ಕಂಗಾಲಾಗಿಸಿದೆ. ಭವಿಷ್ಯದಲ್ಲಿ ಇನ್ನಷ್ಟು ಘಟನೆಗಳು ನಡೆದರೆ ಏನಾಗಬಹುದು ಎಂಬ ಆತಂಕ ಎದುರಾಗಿದೆ.

    ಅಭಯಾರಣ್ಯಗಳಲ್ಲಿ ಹುಲಿ ಸಂತತಿ ಹೆಚ್ಚಾದರೆ, ಹುಲಿಗಳ ನಡುವೆ ಮೇಲುಗೈ ಸಾಧಿಸಲು ಹೋರಾಟ ನಡೆಯುತ್ತದೆ. ತಮ್ಮ ವಾಸಸ್ಥಳಕ್ಕೆ ಹೊಸ ಹುಲಿ ಆಗಮನವಾದರೆ ಸಹಿಸಲಾಗದೆ, ಕಾಳಗಕ್ಕೆ ಕಾರಣವಾಗುತ್ತದೆ. ಈ ದಾಳಿಯಲ್ಲಿ ಹುಲಿಗಳು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತವೆ.

    ಇತ್ತೀಚೆಗೆ ಮಹಾರಾಷ್ಟ್ರ-ತೆಲಂಗಾಣ ಗಡಿಭಾಗದ ದರಿಗಾಮ್ ಅರಣ್ಯದಲ್ಲಿ ಮೊದಲ ಬಾರಿಗೆ ಮತ್ತೊಂದು ಹುಲಿಯೊಂದಿಗೆ ನಡೆದ ಭೀಕರ ಕಾದಾಟದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. ಮಹಾರಾಷ್ಟ್ರದ ಗಡಿ ಭಾಗದಿಂದ ತೆಲಂಗಾಣದ ಅರಣ್ಯದೊಳಕ್ಕೆ ವಲಸೆ ಹುಲಿಗಳು ಬರುತ್ತಿದ್ದರೆ, ಅವುಗಳ ಆಗಮನವನ್ನು ಸ್ಥಳೀಯವಾಗಿ ವಾಸಿಸುತ್ತಿರುವ ಹುಲಿಗಳು ಸ್ವೀಕರಿಸುತ್ತಿಲ್ಲ. ಈ ದಾಳಿಗಳಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿರುವುದು ಸಾಬೀತಾಗಿದೆ.

    ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಮಾಲಿನಿ ಅರಣ್ಯ ಪ್ರದೇಶದ ಕುಮ್ರಂಭೀಮ್ ಯೋಜನೆಯ ಕಾಲುವೆ ಬಳಿ ಎರಡು ಹೆಣ್ಣು ಹುಲಿಗಳು ತೀವ್ರವಾಗಿ ಕಾದಾಡಿದ್ದು, ಒಂದು ಸಾವನ್ನಪ್ಪಿರುವುದು ದೃಢಪಟ್ಟಿದೆ. ಶನಿವಾರದಂದು ಕುರಿಗಾಹಿಯೊಬ್ಬರು ಸ್ಥಳಕ್ಕೆ ತೆರಳಿ ಹುಲಿ ಸತ್ತಿರುವುದನ್ನು ಕಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಗಜನಗರದ ಅರಣ್ಯದಲ್ಲಿ ಇದು ಜಗಳದಲ್ಲಿ ಮೊದಲ ಸಾವು ಎಂದು ಗುರುತಿಸಲಾಗಿದೆ.

    ಹುಲಿ ಸಾವು ಕುರಿತು ತನಿಖೆ: ದರಿಗಾಮ್​ ಅರಣ್ಯ ಪ್ರದೇಶದಲ್ಲಿ ಹುಲಿ ಸಾವಿನ ಬಗ್ಗೆ ಅರಣ್ಯ ಅಧಿಕಾರಿಗಳು ಭಾನುವಾರ ವಿಚಾರಣೆ ನಡೆಸಿದರು. ಒಂದೂವರೆ ವರ್ಷಕ್ಕಿಂತ ಕಡಿಮೆ ಹಾಗೂ ಎರಡು ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಹುಲಿಗಳ ನಡುವೆ ಸಂಘರ್ಷ ನಡೆದಿರಬಹುದು ಎಂದು ಅವರು ತಿಳಿಸಿದ್ದಾರೆ. ಈ ಘರ್ಷಣೆಯಲ್ಲಿ ಒಂದೂವರೆ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಲಿ ಕಾಲು, ಕುತ್ತಿಗೆ ಮತ್ತು ದೇಹದ ಮೇಲೆ ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದೆ.

    45 ದಿನಗಳಲ್ಲಿ 10 ಹುಲಿ ಸಾವು: ತೆಲಂಗಾಣದ ಕುಮ್ರಂಭೀಂ ಜಿಲ್ಲೆ ಮತ್ತು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಗಡಿಯ 60 ಕಿ.ಮೀ ಅರಣ್ಯ ಪ್ರದೇಶದಲ್ಲಿ 45 ದಿನಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಹುಲಿಗಳು ಮೃತಪಟ್ಟಿವೆ. ಪ್ರಾಬಲ್ಯಕ್ಕಾಗಿ ನಡೆದ ಕಾದಾಟದಲ್ಲಿ 7 ಹುಲಿಗಳು ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ನ.14 ರಂದು ಚಂದ್ರಾಪುರ ಜಿಲ್ಲೆಯ ಚಿಮುರು ಅರಣ್ಯ ಪ್ರದೇಶದಲ್ಲಿ ಎರಡು ಹುಲಿಗಳ ನಡುವಿನ ಕಾಳಗದಲ್ಲಿ ಹುಲಿಯೊಂದು ಸಾವನ್ನಪ್ಪಿತ್ತು. ನ. 18 ರಂದು ತಡೋಬಾದಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿದೆ.

    ಡಿ.10 ರಂದು ವರೋರಾ ಅರಣ್ಯ ವ್ಯಾಪ್ತಿಯಲ್ಲಿ ಒಂದು ಹುಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರೆ, ಡಿ.14 ರಂದು ಪಲಾಸ್ಗಾಂವ್​ನಲ್ಲಿ ಮತ್ತೊಂದು ಹುಲಿ ಸಹಜ ಕಾರಣದಿಂದ ಸಾವನ್ನಪ್ಪಿದೆ. ಡಿ.21 ರಂದು ಸಿಂಧೇವಾಹಿ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಹುಲಿಯೊಂದು ಸಾವನ್ನಪ್ಪಿತ್ತು.

    ಯಶ್​​ ಫ್ಯಾನ್ಸ್​​​ಗೆ ಕರೆಂಟ್ ಶಾಕ್: ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಮೂವರು ಯುವಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts