More

    ಕಾಂಗ್ರೆಸ್​ ಶಾಸಕ ನಂಜೇಗೌಡಗೆ ‘ಇಡಿ’ ಶಾಕ್​: ಕೊಮ್ಮನಹಳ್ಳಿ ಮನೆ ಸೇರಿ 10 ಕಡೆ ಏಕಕಾಲಕ್ಕೆ ದಾಳಿ..

    ಬೆಂಗಳೂರು: ಮಾಲೂರು ಕಾಂಗ್ರೆಸ್​ ಶಾಸಕ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರ ಮನೆ ಮತ್ತು ಅವರಿಗೆ ಸೇರಿದ ಕಲ್ಲು ಕ್ವಾರಿ ಮತ್ತಿತರ ಕಡೆ ಸೋಮವಾರ ಇಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ.

    ಇದನ್ನೂ ಓದಿ: ‘ಯುಐ’ ಇದು ಬೇರೇನೇ ಜಗತ್ತು! ಅಸಲಿಗೆ ಉಪ್ಪಿ ಹೇಳ್ತಿರೋದೇನು?

    25 ಮಂದಿ ಅಧಿಕಾರಿಗಳ ತಂಡ ಬೆಳಗಿನ ಜಾವ 5 ಗಂಟೆಗೆ ಕೋಚಿಮುಲ್​ ಕಚೇರಿಗೆ ಆಗಮಿಸಿ ದಾಖಲೆ ಪರಿಶೀಲಿಸುತ್ತಿದೆ. ಹಾಲು ಒಕ್ಕೂಟದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಏಕ ಕಾಲದಲ್ಲಿ 10 ಕಡೆಗಳಲ್ಲಿ ಇಡಿ ತಂಡ ದಾಳಿ ಮಾಡಿದೆ. ಮಾಲೂರು ತಾಲೂಕಿನ ದೊಡ್ಡಮಲೆ ಗ್ರಾಮದಲ್ಲಿರುವ ಆಪ್ತ ಸಹಾಯಕ ಹರೀಶ್ ಮನೆ ಮೇಲೂ ದಾಳಿ ನಡೆದಿದೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿರುವ ನಂಜೇಗೌಡರ ಮನೆ, ಅವರಿಗೆ ಸೇರಿದ ನಂಜುಂಡೇಶ್ವರ ಸ್ಟೋನ್ ಕ್ರಷರ್(ಕಲ್ಲು ಕ್ವಾರಿ), ಮತ್ತು ಕೋಲಾರ ತಾಲೂಕು ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿ, ವ್ಯವಸ್ಥಾಪಕ ನಿರ್ದೇಶಹ ಗೋಪಾಲ್ ಮೂರ್ತಿ, ರಾಮಮೂರ್ತಿ ನಗರದಲ್ಲಿರುವ ಕೋಚಿಮುಲ್ ಅಡ್ಮಿನ್ ನಾಗೇಶ್ ಮನೆ ಸೇರಿದಂತೆ ನಂಜೇಗೌಡರಿಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

    ಶಾಸಕ ನಂಜೇಗೌಡ ಮಾಲೂರು ತಾಲೂಕು ಟೇಕಲ್​ ಹೋಬಳಿಯಲ್ಲಿ ಕಲ್ಲು ಕ್ವಾರಿ, ಕ್ರಷರ್​ಗಳನ್ನು ನಡೆಸುತ್ತಿದ್ದು, ಸರ್ಕಾರಿ ಜಮೀನು ಒತ್ತುವರಿ, ಅಕ್ರಮ ಗಣಿಗಾರಿಕೆ, ಶಾಸಕರಾಗಿ ಕಾನೂನು ಬಾಹೀರವಾಗಿ ಆಪ್ತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿರುವುದು, ಕಾಮಗಾರಿಗಳಲ್ಲಿ ಕಮಿಷನ್​, ಇತ್ತೀಚೆಗೆ ಕೋಚಿಮುಲ್ ನೇಮಕಾತಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿರುವ ಕುರಿತು ಆರೋಪಗಳು ಕೇಳಿ ಬರುತ್ತಿದ್ದವು.

    ಇನ್ನು ನಂಜೇಗೌಡರ ಮೇಲೆ ಜನಪ್ರತಿನಿಧಿಗಳ ನ್ಯಾಯಾಲಯ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನಂಜೇಗೌಡ 2ನೇ ಬಾರಿ ಶಾಸಕರಾಗಿದ್ದು, ಖಾಸಗಿ ವಾಹಿನಿಯೊಂದರ ಸ್ಟಿಂಗ್​ ಆಪರೇಷನ್​ ಮಾಡಿದ್ದಾಗ 5ಸಾವಿರ ರೂ. ಶಾಸಕರ ಭವನದಲ್ಲೇ ಪಡೆದಿದ್ದರು. ಅವರ ಮೇಲೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆಂದು ಅರೋಪ‌ಕೇಳಿ ಬಂದಿದ್ದು, ಬಿಜೆಪಿ ಸಂಸದ ಎಸ್​.ಮುನಿಸ್ವಾಮಿ ನಿರಂತರವಾಗಿ ವಾಗ್ಧಾಳಿ ನಡೆಸುತ್ತಲೇ ಬಂದಿದ್ದರು.

    ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಮಹತ್ವದ ತೀರ್ಪು; ಅಪರಾಧಿಗಳ ಬಿಡುಗಡೆ ಆದೇಶ ರದ್ದುಗೊಳಿಸಿದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts