More

    ಕಲ್ಲಿನಕೋಳಿ ಕೂಗಿದರೆ ಆಶ್ಚರ್ಯವಾಗದೇ ಇರಲು ಸಾಧ್ಯವೆ? ಅಂಥದೇ ಇಲ್ಲೂ ಒಂದು ಆಶ್ಚರ್ಯವಿದೆ ನೋಡಿ…!

    ಮುಂಬೈ: ನೀರಿಗೆ ಬಣ್ಣವಿಲ್ಲ. ವಾಸನೆಯಿಲ್ಲ ಎಂಬ ವೈಜ್ಞಾನಿಕ ಸತ್ಯದ ಪಾಠವನ್ನು ನಾವು ಪ್ರಾಥಮಿಕ ಶಾಲಾ ಹಂತದಲ್ಲೇ ತಿಳಿದುಕೊಂಡಿರುತ್ತೇವೆ. ಆದರೆ ಇದಕ್ಕೆ ವೈರುಧ್ಯವೆಂಬಂತೆ ಇಲ್ಲೊಂದು ಸರೋವರದ ನೀರು ಗುಲಾಬಿ ವರ್ಣಕ್ಕೆ ತಿರುಗಿದೆ..
    ಇತ್ತೀಚೆಗೆ, ಮಹಾರಾಷ್ಟ್ರದ ಬುಲ್ದಾನಾದಲ್ಲಿರುವ ಲೋನಾರ್ ಕುಳಿ ಅಭಯಾರಣ್ಯ ಸರೋವರ ಎಂದೂ ಕರೆಯಲ್ಪಡುವ 56000 ವರ್ಷಗಳಷ್ಟು ಹಳೆಯದಾದ ಲೋನಾರ್ ಸರೋವರದ ನೀರು ಅನೂಹ್ಯ ಗುಲಾಬಿ ಬಣ್ಣಕ್ಕೆ ತಿರುಗಿದೆ.

    ಇದನ್ನೂ ಓದಿ:  ಚೀನಾ ಪರ ಟ್ವೀಟ್ ಮಾಡುತ್ತಿದ್ದ 1.7 ಲಕ್ಷ ಖಾತೆಗಳ ಬಾಯಿ ಮುಚ್ಚಿಸಿದ ಟ್ವೀಟರ್

    ಕೆಲವು ದಿನಗಳಲ್ಲಿ ಸರೋವರವು ತನ್ನ ಅಸಲಿ ಬಣ್ಣವನ್ನು ಬದಲಾಯಿಸಿದೆ. ಈ ಸರೋವರವು ಅಂದಾಜು 77.69 ಹೆಕ್ಟೇರ್ ಪ್ರದೇಶವಾಗಿದೆ ಮತ್ತು ಇದು ಲೋನಾರ್ ಅಭಯಾರಣ್ಯದ ಒಂದು ಭಾಗವಾಗಿದ್ದು, ಒಟ್ಟು 3.66 ಚದರ ಕಿ.ಮೀ. ಇದೆ. ಇದು ವಿಶ್ವದ ಅತಿದೊಡ್ಡ ಬಸಾಲ್ಟಿಕ್ ಪ್ರಭಾವವಿರುವ ಕುಳಿಯಾಗಿದೆ. ಈ ವೈಚಿತ್ರ್ಯವನ್ನು ಇದೇ ಮೊದಲ ಬಾರಿಗೆ ಗಮನಿಸಿರುವುದಾಗಿ ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ!
    ಈ ವೈಚಿತ್ರ್ಯವನ್ನು ಇದೇ ಮೊದಲ ಬಾರಿ ಗಮನಿಸಿದ್ದು, ನೀರು ಗುಲಾಬಿ ವರ್ಣಕ್ಕೆ ತಿರುಗಿರುವುದಕ್ಕೆ ಹಿಂದಿನ ಕಾರಣವನ್ನು ಕಂಡುಹಿಡಿಯಲು ಸರೋವರದ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸುತ್ತೇವೆ. ಈ ಮಾದರಿಗಳನ್ನು ನಾಗ್ಪುರದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ( ನೀರಿ )ಮತ್ತು ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುವುದು” ಎಂದು ಅಕೋಲಾ ಅರಣ್ಯ ಇಲಾಖೆಯ ಎಂ.ಎನ್. ಖೈರ್ನರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ವಿಚಾರ: ಸುಪ್ರೀಂಕೋರ್ಟ್​ ಹೇಳಿದ್ದೇನು?

    ನೀರಿನಲ್ಲಿ ಪಾಚಿ ಇರುವುದರಿಂದ ಈ ರೀತಿ ನೀರಿನ ಬಣ್ಣ ಬದಲಾವಣೆಯ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ ಆದರೆ ಅದು ಇನ್ನೂ ದೃಢಪಟ್ಟಿಲ್ಲ. ನೀರಿನ ಮಾದರಿಗಳನ್ನು ಸಂಗ್ರಹಿಸಿ ಶೀಘ್ರದಲ್ಲೇ ಸಂಶೋಧನಾ ಸಂಸ್ಥೆಗೆ ಕಳುಹಿಸುತ್ತೇವೆ. ಎರಡು ವಾರಗಳಲ್ಲಿ ನಿಖರವಾದ ಕಾರಣ ಗೊತ್ತಾಗುತ್ತದೆ ಎಂದು ಅರಣ್ಯ (ವನ್ಯಜೀವಿ) ಹೆಚ್ಚುವರಿ ಪ್ರಧಾನ ಸಂರಕ್ಷಣಾಧಿಕಾರಿ ಎಂ.ಎಸ್.ರೆಡ್ಡಿ ತಿಳಿಸಿದರು.
    ಇರಾನ್‌ನ ಉಂಬ್ರಿಯಾ ಸರೋವರದಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿದ್ದು, ಅದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಶುಷ್ಕ ಋತುಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿ ನೀರಿನಲ್ಲಿ ಲವಣಾಂಶ ಹೆಚ್ಚಾಗುತ್ತದೆ ಎಂಬುದು ತಿಳಿದುಬಂದಿದೆ. ಹೆಚ್ಚಿದ ಲವಣಾಂಶ ಮತ್ತು ಬೆಚ್ಚಗಿನ ನೀರು ಡುನಾಲಿಯೆಲ್ಲಾ ಪಾಚಿಗಳ ಸಂತಾನೋತ್ಪತ್ತಿ ಕೇಂದ್ರವಾಗುತ್ತದೆ.

    ಇದನ್ನೂ ಒದಿ: ಭಾರತ ಮೂಲದ ಅಮೆರಿಕನ್ ಮಣ್ಣು ವಿಜ್ಞಾನಿಗೆ ವಿಶ್ವ ಆಹಾರ ಪ್ರಶಸ್ತಿ

    ಈ ಪಾಚಿ, ಅಂತಹ ಪರಿಸ್ಥಿತಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹ್ಯಾಲೊಬ್ಯಾಕ್ಟೀರಿಯಾವು ಸೂರ್ಯನ ಬೆಳಕನ್ನು ಹೀರಿಕೊಳ್ಳಲು ಮತ್ತು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಕೆಂಪು ವರ್ಣದ್ರವ್ಯವನ್ನು ಸಹ ಬಳಸುತ್ತದೆ. ಇದು ನೀರನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. ಮಳೆಗಾಲದಲ್ಲಿ ನೀರಿನ ಮಟ್ಟವು ಹೆಚ್ಚಾಗುತ್ತದೆ ಮತ್ತು ನೀರಿನ ತಾಪಮಾನವು ಕಡಿಮೆಯಾಗಿ ಸರೋವರದ ನೀರನ್ನು ಅದರ ಸಾಮಾನ್ಯ ಬಣ್ಣಕ್ಕೆ ತಿರುಗಿಸುತ್ತದೆ ”ಎಂದು ರೆಡ್ಡಿ ಹೇಳಿದರು.
    https://www.vijayavani.net/study-warns-of-poverty-surge-to-over-1-billion-due-to-virus/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts