More

    ಮೂರು ತಿಂಗಳ ಮನೆ ಬಾಡಿಗೆ ತಗೋಬೇಡಿ: ಮಾಲೀಕರಿಗೆ ಮಹಾರಾಷ್ಟ್ರ ಸರ್ಕಾರದ ತಾಕೀತು

    ಮುಂಬೈ: ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದ್ದು, ಕಳೆಗುಂದಿರುವ ಜನರಿಗೆ ಆತ್ಮಸ್ಥೈರ್ಯ ತುಂಬಲು ಅನೇಕ ಸರ್ಕಾರಗಳು ದಿಟ್ಟ ಹೆಜ್ಜೆಗಳನ್ನು ಇಟ್ಟಿವೆ. ಈಗಾಗಲೇ ದೆಹಲಿ ಸರ್ಕಾರ ಬಾಡಿಗೆದಾರರಿಗೆ ರಿಲೀಫ್​ ನೀಡಿದ್ದು, ಅದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಕೂಡ ಇದೇ ಹಾದಿಯನ್ನು ತುಳಿದಿದೆ.

    ಕನಿಷ್ಠ ಮೂರು ತಿಂಗಳು ಬಾಡಿಗೆ ಸಂಗ್ರಹವನ್ನು ಮುಂದೂಡುವಂತೆ ಮನೆ ಮಾಲೀಕರಿಗೆ ಸಿಎಂ ಉದ್ಧವ್​ ಠಾಕ್ರೆ ಸರ್ಕಾರ ತಾಕೀತು ಮಾಡಿದ್ದು, ಮೂರು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವಲ್ಲಿ ವಿಫಲವಾದರೆ, ಅಂತಹ ಬಾಡಿಗೆದಾರರನ್ನು ಹೊರಹಾಕದಂತೆಯು ಆದೇಶಿಸಿದ್ದು, ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದಾರೆ.

    ಲಾಕ್​ಡೌನ್​ನಿಂದ ಬಹುತೇಕ ವ್ಯವಹಾರಗಳು ಸ್ಥಗಿತವಾಗಿರುವುದರಿಂದ ಯಾವುದೇ ಕೆಲಸವಿಲ್ಲದೆ, ಆದಾಯದ ಮೂಲವಿಲ್ಲದೇ ಬದುಕು ಕಷ್ಟವಾಗಿರುವ ಸಮಯದಲ್ಲಿ ಬಾಡಿಗೆ ರೂಪದಲ್ಲಿ ಬಾಡುಗೆದಾರರನ್ನು ಹಿಂಸಿಸಬೇಡಿ ಎನ್ನುವುದು ಮಹಾರಾಷ್ಟ್ರ ಸರ್ಕಾರದ ಉದ್ದೇಶವಾಗಿದೆ.

    ಇಷ್ಟೇ ಅಲ್ಲದೆ, ಶಾಲಾ ಶುಲ್ಕವನ್ನು ಪಾವತಿಸುವಂತೆ ಪಾಲಕರನ್ನು ಬಲವಂತ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

    ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ: ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಆರೋಪ

    ನಾನು ಜಹೀರಾ ವಸೀಂ ಅಲ್ಲ, ಬಬಿತಾ ಪೊಗಾಟ್​; ಟ್ವಿಟರ್​ ಖಾತೆ ರದ್ದುಗೊಳಿಸುವ ಆಗ್ರಹಕ್ಕೆ ತಿರುಗೇಟು ನೀಡಿದ ಕುಸ್ತಿಪಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts