More

    ನಾನು ಜಹೀರಾ ವಸೀಂ ಅಲ್ಲ, ಬಬಿತಾ ಪೊಗಾಟ್​; ಟ್ವಿಟರ್​ ಖಾತೆ ರದ್ದುಗೊಳಿಸುವ ಆಗ್ರಹಕ್ಕೆ ತಿರುಗೇಟು ನೀಡಿದ ಕುಸ್ತಿಪಟು

    ನವದೆಹಲಿ: ದೇಶಕ್ಕೆ ಕರೊನಾ ವೈರಾಣುಗಿಂತ ಜಮಾತಿಗಳು ಬಹುದೊಡ್ಡ ಅಪಾಯ ಎಂದು ತಾವು ಟ್ವೀಟ್​ ಮಾಡಿದ ಕ್ರಮವನ್ನು ಮಹಿಳಾ ಕುಸ್ತಿಪಟು ಬಬಿತಾ ಪೊಗಾಟ್​ ಸಮರ್ಥಿಸಿಕೊಂಡಿದ್ದಾರೆ.

    ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಸತ್ಯವನ್ನೇ ಹೇಳಿದ್ದೇನೆ ಎಂದು ಹೇಳುವ ಮೂಲಕ ಮತೀಯ ಸೌಹಾರ್ದತೆ ಕದಡುವ ಟ್ವೀಟ್​ ಮಾಡಿದ್ದರಿಂದ, ಬಬಿತಾ ಪೊಗಾಟ್​ ಅವರ ಟ್ವಿಟರ್​ ಖಾತೆ ರದ್ದುಗೊಳಿಸಬೇಕು ಎಂದು ಆಗ್ರಹಿಸುವವರಿಗೆ ತಿರುಗೇಟು ನೀಡಿದ್ದಾರೆ.

    ಕರೊನಾ ವೈರಾಣು ದೇಶದ ನಂ.2ನೇ ಸಮಸ್ಯೆ. ಮೊದಲನೇ ಸಮಸ್ಯೆ ಅನಾಗರಿಕ ಜಮಾತಿಗಳು ಎಂದು ಬಬಿತಾ ಟ್ವೀಟ್​ ಮಾಡಿದ್ದರು. ಅವರ ಈ ಟ್ವೀಟ್​ ಭಾರಿ ಚರ್ಚೆಗಳನ್ನು ಹುಟ್ಟುಹಾಕಿತ್ತು. ಜತೆಗೆ ಕೆಲವರು ಟ್ವಿಟರ್​ನಲ್ಲಿ ಬಬಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಅವರ ಟ್ವಿಟರ್​ ಖಾತೆ ರದ್ದುಗೊಳಿಸಲು ಆಗ್ರಹಿಸಿ #SuspendBabitaPhogat ಎಂಬ ಅಭಿಯಾನ ಆರಂಭಿಸಿದ್ದರು. ಇದು ಶುಕ್ರವಾರ ಬೆಳಗ್ಗೆಯಿಂದಲೂ ಭಾರಿ ಟ್ರೆಂಡ್​ನಲ್ಲಿತ್ತು.

    ಇದೀಗ ತಮ್ಮ ಟ್ವೀಟ್​ ಅನ್ನು ಸಮರ್ಥಿಸಿಕೊಂಡು ಶುಕ್ರವಾರ ಮತ್ತೊಂದು ಟ್ವೀಟ್​ ಮಾಡಿರುವ ಬಬಿತಾ ಪೊಗಾಟ್​, ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ಭಾರಿ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

    ನಾನು ಜಹೀರಾ ವಸೀಂ ಅಲ್ಲ, ನಿಮ್ಮ ಬೆದರಿಕೆ ಸಂದೇಶಗಳಿಗೆ ಅಂಜುವುದಿಲ್ಲ. ನಾನು ಬಬಿತಾ ಪೊಗಾಟ್​. ನಾನು ಸದಾ ನನ್ನ ದೇಶಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ತಮ್ಮ ಟ್ವಿಟರ್​ ವಿಡಿಯೋ ಸಂದೇಶದಲ್ಲಿ ಅಬ್ಬರಿಸಿದ್ದಾರೆ.

    ತಬ್ಲಿಘಿ ಜಮಾತ್​ನ ಮಂದಿ ದೇಶಾದ್ಯಂತ ಕರೊನಾ ಸೋಂಕನ್ನು ಹಬ್ಬಿಸದಿರದಿದ್ದರೆ, ಈ ವೇಳೆಗಾಗಲೆ ಲಾಕ್​ಡೌನ್​ ತೆರವುಗೊಂಡು, ಜನರು ಎಂದಿನಂತೆ ಸಾಮಾನ್ಯವಾಗಿ ಜೀವನ ಸಾಗಿಸುತ್ತಿದ್ದರು. ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ ಎಂದು ಹೇಳುವ ಮೂಲಕ ವಿಡಿಯೋ ಸಂದೇಶವನ್ನು ಮುಗಿಸಿದ್ದಾರೆ.

    #SuspendBabitaPhogat ಅಭಿಯಾನಕ್ಕೆ ವಿರುದ್ಧವಾಗಿ #ISupportBabita ಎಂಬ ಅಭಿಯಾನವೂ ಆರಂಭವಾಗಿದ್ದು, ಇದು ಕೂಡ ಭಾರಿ ಟ್ರೆಂಡಿಂಗ್​ನಲ್ಲಿದೆ.

    ಗೀತಾ ಮತ್ತು ಬಬಿತಾ ಪೊಗಾಟ್​ ಅವರ ಜೀವನಾಧಾರಿತವಾದ ದಂಗಲ್​ ಸಿನಿಮಾದಲ್ಲಿ ಬಬಿತಾ ಅವರ ಅಕ್ಕ ಗೀತಾ ಪೊಗಾಟ್​ ಅವರ ಪಾತ್ರದಲ್ಲಿ ಜಹೀರಾ ವಾಸೀಂ ಅವರು ಕಾಣಿಸಿಕೊಂಡಿದ್ದರು.

    ಇಂಥವರೂ ಇರ್ತಾರೆ ನೋಡಿ! ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಪಿಪಿಇ ಕಿಟ್ ರಸ್ತೆ ಬದಿ ಎಸೆದು ಹೋದ ಆಂಬುಲೆನ್ಸ್ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts