More

    ಕರೊನಿಲ್ ಕುರಿತು ಜನರ ಹಾದಿ ತಪ್ಪಿಸಬೇಡಿ : ಬಾಬಾ ರಾಮ್​ದೇವ್​ಗೆ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ

    ಮುಂಬೈ:ಕೊರೊನಿಲ್ ಔಷಧದ ಬಗ್ಗೆ ಜನರನ್ನು ದಾರಿತಪ್ಪಿಸುವುದನ್ನು ನಿಲ್ಲಿಸುವಂತೆ ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಗೆ ಮಹಾರಾಷ್ಟ್ರ ರಾಜ್ಯ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಇಲಾಖೆ ಎಚ್ಚರಿಕೆ ನೀಡಿದೆ.
    ಪತ್ರಿಕಾ ಹೇಳಿಕೆಯಲ್ಲಿ, ಮಹಾರಾಷ್ಟ್ರ ಎಫ್‌ಡಿಎ ಸಚಿವ ರಾಜೇಂದ್ರ ಶಿಂಗಾನೆ, ಪತಂಜಲಿಯ ಕೊರೊನಿಲ್ ಔಷಧವು ಕೊರೊನಾವೈರಸ್ ಅನ್ನು ಗುಣಪಡಿಸುವುದಿಲ್ಲ. ಕಂಪನಿಯು ಇಂತಹ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದರೆ ರಾಜ್ಯ ಗೃಹ ಇಲಾಖೆಯ ಸಹಾಯದಿಂದ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!


    “ಅಶ್ವಗಂಧ ಮತ್ತು ಇತರ ಯುಕ್ತಗಳಿದ ಪತಂಜಲಿ ತಯಾರಿಸಿದ ಔಷಧವು ವಾಸ್ತವವಾಗಿ ರೋಗನಿರೋಧಕ ವರ್ಧಕವಷ್ಟೇ ಆಗಿದೆ. ಆಯುಷ್ ಸಚಿವಾಲಯವು ಕೂಡ ಇದನ್ನು ರೋಗನಿರೋಧಕ ವರ್ಧಕವೆಂದು ಶಿಫಾರಸು ಮಾಡಿದೆಯೇ ಹೊರತು ಕರೊನಾವೈರಸ್ ಗುಣಪಡಿಸುವ ಔಷಧಿಯಾಗಿ ಅಲ್ಲ.
    ‘ಕರೊನಿಲ್’ ಎಂಬ ಹೆಸರಿನ ಈ ರೋಗನಿರೋಧಕ ವರ್ಧಕವು ಕರೊನಾವೈರಸ್ ಅನ್ನು ಗುಣಪಡಿಸುವ ಔಷಧವಾಗಿ ಜನ ಸಾಮಾನ್ಯರನ್ನು ದಾರಿ ತಪ್ಪಿಸುತ್ತಿದೆ. ಕರೊನಿಲ್ ಎಂಬ ಹೆಸರಿದ್ದ ಮಾತ್ರಕ್ಕೆ ಅದು ಕಾಯಿಲೆ ಗುಣಪಡಿಸುವಂಥದ್ದಲ್ಲ ಮತ್ತು ಅಂತಹ ಮಾತ್ರೆಗಳನ್ನು ರೋಗನಿರೋಧಕ ಶಕ್ತಿ ವರ್ಧನೆ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಎಂಬುದನ್ನು ಜನರೂ ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಆ.15ಕ್ಕೆ ಬಿಡುಗಡೆ ಸಜ್ಜಾಗುತ್ತಿರುವ ಕೊವ್ಯಾಕ್ಸಿನ್​ ಬಗ್ಗೆ ಭಾರತ್​ ಬಯೋಟೆಕ್​ ಸಿಎಂಡಿ ಏನು ಹೇಳುತ್ತಾರೆ ನೋಡಿ…


    ಪತಂಜಲಿ ಸಂಸ್ಥೆ ಹೊಸದಾಗಿ ಪರೀಕ್ಷಿಸಿದ ಔಷಧವು ಕೋವಿಡ್ -19 ಅನ್ನು ಗುಣಪಡಿಸುತ್ತದೆ ಎಂದು ಹೇಳಿಕೊಂಡಿಲ್ಲ. ಹೊಸ ಔಷಧಿಗಳ ಪ್ರಾಯೋಗಿಕ ಪರೀಕ್ಷೆಗಳು “ಕರೊನಾವೈರಸ್ ರೋಗಿಗಳು ಅವುಗಳನ್ನು ಸೇವಿಸಿದ ನಂತರ ಗುಣಮುಖರಾದರು” ಎಂದು ಸೂಚಿಸುತ್ತದೆ ಎಂದು ಪತಂಜಲಿ ಆಯುರ್ವೇದ ಸಂಸ್ಥೆ ಬುಧವಾರ ಹೇಳಿದೆ.
    ಈ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಾಬಾ ರಾಮ್‌ದೇವ್, ಎಲ್ಲ ಕ್ಲಿನಿಕಲ್ ಪ್ರಯೋಗ ದಾಖಲೆಗಳನ್ನು ಆಯುಷ್ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

    ಪಿಎಸ್‌ಐಗೆ ಗಂಡುಮಗು ಹುಟ್ಟಿದ ಖುಷಿ: ಪೊಲೀಸ್‌ ಠಾಣೆ ಸೀಲ್‌ಡೌನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts